Thursday, September 19, 2024

ಪ್ರಾಯೋಗಿಕ ಆವೃತ್ತಿ

ಗಂಗಮತಸ್ಥ ಸಮಾಜದ ಅಭಿವೃದ್ದಿಗೆ ಡಾ.ಜಿ. ಶಂಕರ್ ಕೊಡುಗೆ ಅಪಾರ- ಡಾ. ಜಯರಾಂ

ರಾಜ್ಯದಲ್ಲಿ ಗಂಗಮತಸ್ಥ ಸಮಾಜದ ಅಭಿವೃದ್ದಿಗೆ ನಾಡೋಜ ಡಾ. ಜಿ. ಶಂಕರ್ ಕೊಡುಗೆ ಅಪಾರ ಎಂದು ಜೆಡಿಎಸ್ ಹಿಂದುಳಿದ ವಿಭಾಗದ ರಾಜ್ಯಾಧ್ಯಕ್ಷ ಡಾ.ಡಿ.ಜಯರಾಂ ಹೇಳಿದರು.

ಮಂಡ್ಯ ನಗರದ ಹಿಂದಿ ಭವನದಲ್ಲಿ ಜಿಲ್ಲಾ ಗಂಗಾಮತಸ್ಥರ ಸಂಘದ ಜಿಲ್ಲಾ ಸಮಿತಿ ಆಯೋಜಿಸಿದ್ದ ನಾಡೋಜ ಡಾ. ಜಿ. ಶಂಕರ್ ಅವರ 68ನೇ ಜನ್ಮದಿನದ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದ ಅಭಿವೃದ್ದಿಗೆ ಉಪ್ಪುಕೊಟ್ಟವರನ್ನು ಮುಪ್ಪಿರುವ ತನಕ ನನೆಯ ಬೇಕು ಎನ್ನುವ ಮಾತು ನಾಡೋಜ ಡಾ.ಜಿ.ಶಂಕರ್ ಅವರಿಗೆ ಸಲ್ಲುತ್ತದೆ, ಅಪಾರ ಸೇವಾ ಕಾರ್ಯ ಮತ್ತು ಗಂಗಮತಸ್ಥರ ಸಮಾಜದವರು ತಮ್ಮ ಬಳಿಗೆ ಬಂದಾಗ ನೆರವು ನೀಡಿ ಕಳಿಸುವ ಮಾನವೀಯ ಗುಣ ಉಳ್ಳವರಾಗಿದ್ದಾರೆ ಎಂದು ನುಡಿದರು.

ಜಿಲ್ಲೆಯಲ್ಲಿರುವ ಗಂಗಮತಸ್ಥ ಸಮಾಜದ ಎಲ್ಲಾ ಸಂಘಗಳು ಒಗ್ಗಟ್ಟನ್ನು ಪ್ರದರ್ಶಿಸಬೇಕು, ಪಕ್ಷಗಳು ಯಾವುದೇ ಇರಲಿ, ಸಮಾಜ ಕೆಲಸ-ಕಾರ್ಯಗಳಿಗೆ ಒಮ್ಮತದಿಂದ ಸಂಘಟಿತರಾಗಿ ಹೋರಾಟಕ್ಕೆ ನಿಲ್ಲಬೇಕು,ಸಭೆ-ಸಮಾರಂಭಕ್ಕೆ ಹಾಜರಾಗಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ಗಂಗಮತಸ್ಥರ ಸಮುದಾಯದ ವಿದ್ಯಾರ್ಥಿ ನಿಲಯ ಮತ್ತು ಭವನಕ್ಕೆ ಹೆಚ್ಚಿನ ಆರ್ಥಿಕ ನೆರವು ನೀಡುವುದರ ಮೂಲಕ ಜಿಲ್ಲಾ ಸಂಘಕ್ಕೆ ಶಕ್ತಿ ತುಂಬಬೇಕು ಎಂದು ಹೇಳಿದರು.

ಕಾಂಗ್ರೆಸ್ ಸಮಿತಿ ರಾಜ್ಯ ಉಪಾಧ್ಯಕ್ಷ ಯಶಸ್ವಿನಿ ಲೋಕೇಶ್ವರ್ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಶಂಕರ್ ಅವರು  ತನ್ನ ಕೈಲಾದ ಮಟ್ಟಿಗೆ ಸೇವೆ ಸಲ್ಲಿಸುವ ಮೂಲಕ  ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ .  ಗಂಗಾಮತ ಸಮಾಜ ಇತರೆ ಸಮಾಜಗಳಂತೆ ಒಗ್ಗಟ್ಟು ಪ್ರದರ್ಶಿಸುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು. ಸಂಘದ ಕೆಲಸ ಕಾರ್ಯಗಳಿಗೆ ಪ್ರತಿಯೊಬ್ಬರು ಸಹಕರಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ನಾಡೋಜ ಡಾ.ಜಿ.ಶಂಕರ್ ರವರ ಹುಟ್ಟುಹಬ್ಬದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ  ಗಂಗಮಸ್ಥತ ಸಮಾಜದ ಮುಖಂಡರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ರಾಜ್ಯ ಗಂಗಮತಸ್ಥರ ನೌಕರರ ಸಂಘದ ಗೌರವಾಧ್ಯಕ್ಷ ಡಾ. ಟಿ ಕೃಷ್ಣಯ್ಯ, ಮಳವಳ್ಳಿ ರಾಮರೂಢ ಮಠದ ಪುಂಡಲೀಕ ಸ್ವಾಮೀಜಿ , ಜಿಲ್ಲಾ ಗಂಗಾಮತಸ್ಥರ ಸಂಘದ ಜಿಲ್ಲಾಧ್ಯಕ್ಷ ಎಸ್. ರಮೇಶ್, ಪ್ರಧಾನ ಕಾರ್ಯದರ್ಶಿ ಹೊನ್ನಪ್ಪ, ಉಪಾಧ್ಯಕ್ಷ ಏ ಬಿ ಸಿದ್ದಯ್ಯ, ರಾಜ್ಯ ಗಂಗಮತಸ್ಥರ ಸಂಘದ ಉಪಾಧ್ಯಕ್ಷ ತಮ್ಮಣ್ಣ, ಮೈಸೂರು ಮೀನುಗಾರಿಕೆ ಮಹಾಮಂಡಳಿ ನಿರ್ದೇಶಕ ಕನ್ನಲ್ಲಿ ಈರಯ್ಯ, ಚಾಮನಹಳ್ಳಿ ಗ್ರಾಮ ಅಧ್ಯಕ್ಷ ಸಿದ್ದರಾಜು, ಗಂಗಮತಸ್ಥರ ಸಂಘದ ಶ್ರೀರಂಗಪಟ್ಟಣ ತಾಲೂಕು ಅಧ್ಯಕ್ಷ ಉಕ್ಕಡಚಂದ್ರು, ಸಮಾಜ ಕಲ್ಯಾಣ ಇಲಾಖೆಯ ನಿವೃತ್ತ ಸಹಾಯಕ ಹುಚ್ಚಯ್ಯ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕಲ್ಕುಣಿ ದೇವರಾಜು,  ರಾಜ್ಯ ಗಂಗಮತಸ್ಥರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಕುಮಾರ್, ಜಿಲ್ಲಾ ಸಹ ಕಾರ್ಯದರ್ಶಿ ಹಾಡ್ಯ ಉಮೇಶ್ ಮತ್ತಿತರರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!