ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಕೆಲ ವರ್ಷಗಳ ಹಿಂದೆ ಏನೂ ಇಲ್ಲದಂತಿದ್ದ ವ್ಯಕ್ತಿ. ಈಗ ಆತ ಸಾವಿರ ಕೋಟಿಯ ಒಡೆಯ ಎಂದು ಘೋಷಿಸಿಕೊಂಡಿದ್ದಾನೆ….ಇದು ಹೇಗೆ ಸಾಧ್ಯ ? ಆತ ನರೇಗಾ ಯೋಜನೆಯಲ್ಲಿ ಬೆವರು ಹರಿಸಿದ್ರಾ ? ಇಲ್ಲ ಅಡಿಕೆ ಮರ ಹತ್ತಿದ್ರಾ ? ಎಂದು ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಪ್ರಶ್ನಿಸಿದ್ದಾರೆ.
ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ಬಿಜೆಪಿಯ ಕರುಳುಬಳ್ಳಿಯವರೇ ಆರೋಪಿಸಿದ್ದಾರೆ.
ಅಬ್ಬೇಪಾರಿಯಾಗಿ ಅಲೆಯುತ್ತಿದ್ದ ಸಚಿವ ಸುನಿಲ್ ಕುಮಾರ್ ಈಗ 1000 ಕೋಟಿಯ ಒಡೆಯನಾಗಿದ್ದು ಹೇಗೆ?
ಉದ್ಯೋಗ ಖಾತ್ರಿಯಲ್ಲಿ ಬೆವರು ಹರಿಸಿದ್ರಾ, ಅಡಿಕೆ ಮರ ಹತ್ತಿದ್ರಾ?ಈ ಪ್ರಶ್ನೆಗೆ ಉತ್ತರಿಸುವ ಕನಿಷ್ಠ ಧೈರ್ಯವನ್ನು ಸುನಿಲ್ ಕುಮಾರ್ & @BJP4Karnataka ತೋರುವರೇ? pic.twitter.com/xNh7ocKwbf
— Karnataka Congress (@INCKarnataka) April 6, 2023
“>
ಈ ಕುರಿತು ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ಬಿಜೆಪಿಯ ಕರುಳುಬಳ್ಳಿಯವರೇ ಆರೋಪಿಸಿದ್ದಾರೆ. ಅಬ್ಬೇಪಾರಿಯಾಗಿ ಅಲೆಯುತ್ತಿದ್ದ ಸಚಿವ ಸುನಿಲ್ ಕುಮಾರ್ ಈಗ 1000 ಕೋಟಿಯ ಒಡೆಯನಾಗಿದ್ದು ಹೇಗೆ? ಉದ್ಯೋಗ ಖಾತ್ರಿಯಲ್ಲಿ ಬೆವರು ಹರಿಸಿದ್ರಾ, ಅಡಿಕೆ ಮರ ಹತ್ತಿದ್ರಾ? ಈ ಪ್ರಶ್ನೆಗೆ ಉತ್ತರಿಸುವ ಕನಿಷ್ಠ ಧೈರ್ಯವನ್ನು ಸುನಿಲ್ ಕುಮಾರ್ ಮತ್ತು ಬಿಜೆಪಿ ನಾಯಕರು ತೋರುವರೇ? ಎಂದು ಪ್ರಶ್ನಿಸಿದೆ.




