Friday, September 20, 2024

ಪ್ರಾಯೋಗಿಕ ಆವೃತ್ತಿ

ಮಹಿಳಾ ಸಬಲೀಕರಣದಿಂದ ದೇಶದ ಪ್ರಗತಿ ಸಾಧ್ಯ: ಡಾ.ಮಾದೇಶ್

ಮಹಿಳಾ ಸಬಲೀಕರಣದಿಂದ ಮಾತ್ರ ದೇಶ ಪ್ರಗತಿ ಕಾಣಲು ಸಾಧ್ಯ ಎಂದು ಎಸ್.ಡಿ.ಜಯರಾಂ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಮಾದೇಶ್ ಹೇಳಿದರು.

ಮಂಡ್ಯ ನಗರದ ಎಸ್.ಡಿ.ಜಯರಾಂ ಇನ್ಟಿಟ್ಯೂಟ್ ಆಫ್ ನರ್ಸಿಂಗ್ ಆಂಡ್ ಪ್ಯಾರಾ ಮೆಡಿಕಲ್ ಕಾಲೇಜು ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ನರ್ಸಿಂಗ್  ವಿದ್ಯಾರ್ಥಿಗಳಿಂದ ಬೈಸಿಕಲ್ ಮ್ಯಾರಾಥಾನ್ ಅಭಿಮಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಹಿಳೆಯಲ್ಲಿ ಜಾಗೃತಿ ಮೂಡಿಸಿ, ಸಬಲೀಕಣದತ್ತ ಸಾಗುವಂತೆ ಮಾಡುವುದು ಈ ಜಾಗೃತಿ ಜಾಥಾದ ಉದ್ದೇಶವಾಗಿದೆ, ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಒಂದು ದೇಶದ ಅಭಿವೃದ್ದಿಯಲ್ಲಿ ಮಹಿಳೆಯರ ಸಬಲೀಕರಣವೂ ಪ್ರಮುಖ ಪಾತ್ರವಹಿಸುತ್ತದೆ ಎಂದು ನುಡಿದರು.

ಶೈಕ್ಷಣಿಕ ಕ್ಷೇತ್ರದಲ್ಲಿ ಮಹಿಳೆಯು ಸಾಧನೆ ಮಾಡಿ, ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ, ಇದಕ್ಕೆಲ್ಲ ಪ್ರೇರಣೆಯಾಗಿ ಸ್ಮ,ರಿಸಿಕೊಳ್ಳಬೇಕಿರುವುದು ವಿದ್ಯಾದಾತೆ ಸಾವಿತ್ರಿಬಾಯಿಫುಲೆ ಅವರನ್ನು, ಇನ್ನಾದರೂ ವಿದ್ಯಾವಂತ ಮಹಿಳೆಯರು ಇಂತಹ ಸಾಧಕರನ್ನು ಮರೆಯದಿರಲಿ ಎಂದು ಸಲಹೆ ನೀಡಿದರು.

ಲೇಖಕಿ ಭವಾನಿಶಂಕರ್, ಮಹಿಳೆಯರು ಸಂಭ್ರಮದಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿದ್ದಾರೆ, ದಿನ ಮಹಿಳಾ ದಿನಾಚರಣೆಯಾಗಿ ಇರುತ್ತದೆ, ಸ್ಮರಿಸಿ ಗೌರವಿಸಲಿಕ್ಕಾಗಿ ಒಂದು ದಿನ ಮೀಸಲಿದೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಬೈಸಿಕಲ್ ಜಾಥಾವು ಮೈಸೂರು ಬೆಂಗಳುರು ಹೆದ್ದಾರಿಯಲ್ಲಿ ಸಾಗಿ ಇಂಡವಾಳು ಗ್ರಾಮ ತಲುಪಿ ಅಲ್ಲಿಂದ ಮತ್ತೆ ಮಂಡ್ಯ ನಗರ ತಲುಪಿತು .ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಕಾರ್ಯ ಕ್ರಮದಲ್ಲಿ ಪ್ರಾಂಶುಪಾಲರಾದ ಶೃತಿ, ಸೌಮ್ಯಲತಾ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!