Thursday, April 25, 2024

ಪ್ರಾಯೋಗಿಕ ಆವೃತ್ತಿ

ಕೃಷಿ ಉತ್ಪಾದನೆ ಕೇಂದ್ರಿತವಾಗದೇ ರೈತ ಕೇಂದ್ರಿತವಾಗಲಿ – ಡಾ.ಪ್ರಕಾಶ್ ಕಮ್ಮರಡಿ

ರಾಜ್ಯದಲ್ಲಿ ಒಂದು ಕಡೆ ಹಾಲು, ಹಣ್ಣ, ತರಕಾರಿಗಳನ್ನು ಯಥೇಚ್ಚವಾಗಿ ಬೆಳೆದು ಸಮೃದ್ಧತೆ ಸಾಧಿಸಿದ್ದರೂ ಪ್ರಸ್ತುತ ದಿನಗಳಲ್ಲಿ ಆತ್ಮಹತ್ಯೆಯಲ್ಲಿ ಕರ್ನಾಟಕವು ದೇಶದಲ್ಲಿ 2 ಸ್ಥಾನದಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದ ಕೃಷಿ ಆರ್ಥಿಕ ತಜ್ಞ ಡಾ.ಪ್ರಕಾಶ್ ಕಮ್ಮರಡಿ ಅವರು, ಕೃಷಿಯನ್ನು ಉತ್ಪಾದನಾ ಕೇಂದ್ರಿತವಾಗಿ ನೋಡದೇ ರೈತ ಕೇಂದ್ರಿತವಾಗಿ ನೋಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು

ಮಂಡ್ಯನಗರ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಭಾನುವಾರ ನಡೆದ ವೈ.ಕೆ.ರಾಮಯ್ಯ ಕೃಷಿ ತಜ್ಞ ಪ್ರಶಸ್ತಿ ಹಾಗೂ ಎನ್.ಆರ್.ರಂಗಯ್ಯ ಸಹಕಾರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೃಷಿ ಸಂಶೋಧನೆ ಹಾಗೂ ಯೋಜನೆ ರೈತಾಪಿ ವರ್ಗಕ್ಕೆ ಸರಿಯಾಗಿ ತಲುಪಿದ್ದರೆ, ದೇಶದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಇರುತಿರಲಿಲ್ಲ, ರಾಜ್ಯದಲ್ಲಿ ಸುಮಾರು 21 ಲಕ್ಷ ಹೆಕ್ಟೇರ್ ಭೂಮಿ ಬೀಳು ಬಿದ್ದಿದೆ, ಇದಕ್ಕೆ ಕೃಷಿ ಲಾಭದಾಯಕವಲ್ಲ ಎಂಬುದೇ ಪ್ರಮುಖ ಕಾರಣವಾಗಿದೆ. ನಮ್ಮ ಕೃಷಿಯು ಉತ್ಪಾದನಾ ಕೇಂದ್ರಿತವಾಗಿರುವುದೇ ಇದಕ್ಕೆ ಮತ್ತೊಂದು ಕಾರಣವಾಗಿದೆ. ಹಾಗಾಗಿ ಕೃಷಿಯನ್ನು ಕುವೆಂಪು ಅವರ ಆಶಯದಂತೆ ಮನುಷ್ಯ (ರೈತ) ಕೇಂದ್ರಿತವಾಗಿ ನೋಡಬೇಕಾಗಿದೆ ಎಂದರು.

ಸಮಾರಂಭದಲ್ಲಿ ವೈ.ಕೆ.ರಾಮಯ್ಯ ಕೃಷಿ ತಜ್ಞ ಪ್ರಶಸ್ತಿಯನ್ನು ಬೆಂಗಳೂರಿನ ಲಾಲ್ ಬಾಗ್ ಉದ್ಯಾನವನದ ತೋಟಗಳು ಮತ್ತು ಪುಷ್ಪಾಭಿವೃದ್ಧಿ ವಿಭಾಗ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್, ವೈ.ಕೆ.ರಾಮಯ್ಯ ಕೃಷಿ ಪ್ರಶಸ್ತಿಯನ್ನು ಮಂಡ್ಯದ ಪ್ರಗತಿಪರ ಕೃಷಿಕ ದೇವಯ್ಯ ದೇವೇಗೌಡನದೊಡ್ಡಿ ಅವರಿಗೆ ಪ್ರದಾನ ಮಾಡಲಾಯಿತು.

ಎನ್.ಆರ್.ರಂಗಯ್ಯ ಸಹಕಾರ ಪ್ರಶಸ್ತಿಯನ್ನು ಮಂಡ್ಯದ ಹಿರಿಯ ಸಹಕಾರಿ ಜಿ.ಟಿ.ಪುಟ್ಟಸ್ವಾಮಿ ಅವರಿಗೆ ಕೃಷಿ ಆರ್ಥಿಕ ತಜ್ಞ ಡಾ.ಪ್ರಕಾಶ್ ಕಮ್ಮರಡಿ ಪ್ರದಾನ ಮಾಡಿದರು.

ವೇದಿಕೆಯಲ್ಲಿ ಕರ್ನಾಟಕ ಸಂಘ ಅಧ್ಯಕ್ಷ  ಪ್ರೊ.ಜಯಪ್ರಕಾಶ್ ಗೌಡ, ವಕೀಲ ಎ.ಇಮ್ಮಾನ್ಯೂಯೆಲ್, ಉಪನ್ಯಾಸಕ ಜಯರಾಮ್ ಕೋಣನಹಳ್ಳಿ, ವಾಸ್ತು ವಿನ್ಯಾಸಗಾರ ಎನ್.ಆರ್.ಮಂಜುನಾಥ್ ಹಾಗೂ ವೈ.ಕೆ.ರಾಮಯ್ಯನವರ ಮಗಳು ವೈ.ಆರ್.ಚೇತನ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!