Tuesday, May 21, 2024

ಪ್ರಾಯೋಗಿಕ ಆವೃತ್ತಿ

ರಾಜ್ಯದಲ್ಲಿ ಛಾಪು ಮೂಡಿಸುವ ಸರಳ ವ್ಯಕ್ತಿತ್ವ ಬಿ.ರಾಮಕೃಷ್ಣ: ಚಲುವರಾಯಸ್ವಾಮಿ

ಮಾಜಿ ವಿಧಾನ ಪರಿಷತ್ ಸದಸ್ಯರಾದ ಬಿ.ರಾಮಕೃಷ್ಣ ಅವರು ಸರಳರಲ್ಲಿ ಸರಳ ವ್ಯಕ್ತಿತ್ವ ಉಳ್ಳವರಾಗಿದ್ದು, ಇತತರಿಗೆ ಮಾದರಿಯಾಗಿದ್ದಾರೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದರು.

ಮಂಡ್ಯನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಮಾಜಿ ವಿಧಾನ ಪರಿಷತ್ ಸದಸ್ಯ ಬಿ.ರಾಮಕೃಷ್ಣ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಸಾಮಾನ್ಯ ಜೀವನ ನಡೆಸಲಿಕ್ಕೆ ಪ್ರಾರಂಭ ಮಾಡಿದ ವ್ಯಕ್ತಿ ಇವತ್ತು, ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯದಲ್ಲಿ ತಮ್ಮ ಛಾಪುನ್ನು ಮೂಡಿಸುವ ನಿಟ್ಟಿನಲ್ಲಿ ತಮ್ಮ ವ್ಯಕ್ತಿತ್ವ ರೂಪಿಸಿಕೊಂಡವರು ಬಿ.ರಾಮಕೃಷ್ಣ. ಅವರು ರಾಮಕೃಷ್ಣ ಅವರು ಬಹಳ ವಿಶೇಷ ವ್ಯಕ್ತಿ. ಮನುಷ್ಯನಿಗೆ ಇರಬೇಕಾದ ಬಹಳ ಮುಖ್ಯವಾದ ವ್ಯಕ್ತಿತ್ವ ಅವರಿಗೆ ಇದೆ.ಯಾವುದು ಮನುಷ್ಯನಿಗೆ ಇರಬೇಡವೋ ಅದ್ಯಾವುದು ಇಲ್ಲ. ಜೊತೆಗೆ ಮನುಷ್ಯ ಮತ್ತು ವ್ಯವಸ್ಥೆಗೆ ಹಾನಿಯಾಗುವ ಯಾವುದೇ ವ್ಯಕ್ತಿತ್ವ ಇವರಲ್ಲಿ ಇಲ್ಲ ಎಂದರು.

ಸತ್ಯ, ಸುಳ್ಳು, ಒಳ್ಳೆದು, ಕೆಟ್ಟದ್ದು ಜೊತೆಗೆ ಇರುತ್ತದೆ. ಇವರು ಒಳ್ಳೆಯದನ್ನೇ ರೂಢಿಸಿಕೊಂಡು ಸತ್ಯವಾಗಿ ಬದುಕಿ ಇತತರಿಗೆ ಮಾದರಿಯಾಗಿದ್ದಾರೆ. ವ್ಯಕ್ತಿತ್ವದ ಜೊತೆಗೆ ಸ್ನೇಹಮಯವಾಗಿ ಬದುಕಿದ್ದಾರೆ. ನಾನು ರಾಜಕೀಯಕ್ಕೆ ಕಾಲಿಟ್ಟಾಗ ನನ್ನ ಜೊತೆ ರಾಜಕೀಯವಾಗಿ ಕೈಜೋಡಿಸಿ ಬೆಳೆದವರಲ್ಲಿ ಇವರು ಒಬ್ಬರು. ಇವರು ಎಲ್ಲಾರಿಗೂ ಆದಷ್ಟು ಸಹಾಯ ಮಾಡಿದ್ದಾರೆ. ಕಷ್ಟ ಅಂತ ಬಂದು ತಮ್ಮ ಬಳಿ ಅಳಲು ತೋಡಿಕೊಂಡಾಗ ಯಾರಿಗೂ ಬರಿಗೈಲಿ ಕಳುಹಿಸಿಲ್ಲ‌ ಎಂದರು.

ಶಿಕ್ಷಣ ಕ್ಷೇತ್ರದಲ್ಲಿ ಕೂಡ ಏನಾದರು ಸೇವೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ತಮ್ಮ ಊರಿನಲ್ಲಿಯೇ‌ ಕೌಟಿಲ್ಯ ಶಿಕ್ಷಣ ಸಂಸ್ಥೆ ಕಟ್ಟಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ಧಾರೆಯೆರಿದ್ದಾರೆ ಎಂದರು.

ಆದಿ ಚುಂಚನಗಿರಿ ಕ್ಷೇತ್ರದ ಪೀಠಾಧ್ಯಕ್ಷರಾದ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅವರು ಆರ್ಶಿವಚನ ನೀಡಿದರು. ಇದೇ ಸಂದರ್ಭದಲ್ಲಿ ಬಿ.ರಾಮಕೃಷ್ಣ ಅವರಿಗೆ ಅಭಿನಂದನೆ ನೇರವೇರಿಸಲಾಯಿತು. ನಂತರ ಕೃಷಿಕರಿಗೆ ಹಾಗೂ ಲೇಖಕರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಆದಿ ಚುಂಚನಗಿರಿ ಮಠದ ಪುರೋಷತ್ತಮಾನಂದ ಸ್ವಾಮೀಜಿ, ಶಾಸಕ ಪಿ.ರವಿಕುಮಾರ್, ವಿಧಾನ ಪರಿಷತ್ ಶಾಸಕರಾದ ದಿನೇಶ್ ಗೂಳಿಗೌಡ, ಮರಿತಿಬ್ಬೇಗೌಡ, ಮಾಜಿ ಶಾಸಕ ಶ್ರೀನಿವಾಸ್, ಮಾಜಿ ಎಂ ಎಲ್ ಸಿ ಶ್ರೀಕಂಠೆಗೌಡ ಸೇರಿದಂತೆ ಇನ್ನಿತರರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!