Saturday, July 13, 2024

ಪ್ರಾಯೋಗಿಕ ಆವೃತ್ತಿ

ಮದ್ದೂರಿನಲ್ಲಿ ಪ್ರಾರಂಭವಾಯ್ತು ಸಿ ಎನ್ ಜಿ ಗ್ಯಾಸ್ ಸ್ಟೇಷನ್… ಎಲ್ಲಿ? ಗೊತ್ತಾ

ಮದ್ದೂರಿನ ಶಿವಪುರದ ವೆಂಕಟೇಶ್ವರ ಪ್ಯೂಯಲ್ ಸ್ಟೇಷನ್ನಲ್ಲಿ ನೂತನವಾಗಿ ಬಿ.ಪಿ. ಸಿ.ಎನ್. ಜಿ ಗ್ಯಾಸ್ ಬಂಕ್ ಅನ್ನು ಕೆಪಿಸಿಸಿ ಸದಸ್ಯ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಗುರುಚರಣ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸಿಎನ್ ಜಿ ಗ್ಯಾಸ್ ಮೈಸೂರು ವಿಭಾಗದ ಮುಖ್ಯಸ್ಥ ಅರುಣನಾಯಕ್ ಮಾತನಾಡಿ, ಸಿಎನ್ಜಿ ಗ್ಯಾಸ್ ನೇರವಾಗಿ ಕಂಪನಿಯಿಂದ ಮಾರುಕಟ್ಟೆಗೆ ತಲುಪುತ್ತದೆ.

ಗ್ರಾಹಕರಿಗೆ ಕೆ.ಜಿ.ಗೆ 75 ರುಪಾಯಿಗೆ ಸಿಗಲಿದೆ. ಇದು ವಾಯು ಮಾಲಿನ್ಯ ನಿಯಂತ್ರಣದ ಜೊತೆಗೆ ಗ್ರಾಹಕರಿಗೂ ಹಣ ಉಳಿತಾಯ ಮಾಡಿಕೊಡಲಿದೆ ಎಂದರು.

ಹೊಸ ಕಾರು,ಆಟೋ, ಲಾರಿಗಳಿಗೆ ಸಿಎನ್ ಜಿ ಅಳವಡಿಸಲಾಗುತ್ತದೆ. ಕೇಂದ್ರ ಸರ್ಕಾರದ ಅನುಮತಿಯ ಮೇರೆಗೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ತೆರೆಯಲಾಗುತ್ತದೆ ಇದರ ಪ್ರಯೋಜನವನ್ನು ಜನರು ಪಡೆದುಕೊಳ್ಳಬೇಕೆಂದರು.

ಮಾಲೀಕರಾದ ಕದಲೂರು ರಾಮಕೃಷ್ಣ. ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ತರಬೇತುದಾರರಾದ ಅಮಿತ್ ಗೌಡ,ಅಮಿತ್ ವರ್ಮ, ಪುರಸಭೆ ಮಾಜಿ ಅಧ್ಯಕ್ಷ ಅಮರ್ ಬಾಬು. ಕೆ.ಆರ್ ಮಹೇಶ್. ಅಭಿಷೇಕ್ ಮತ್ತಿತರರಿದ್ದರು.

ಇದನ್ನೂ ಓದಿ: ಡಾ.ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಅಮರ ಜ್ಯೋತಿ ಆಗಮನ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!