Thursday, September 19, 2024

ಪ್ರಾಯೋಗಿಕ ಆವೃತ್ತಿ

ಫೆ.14ವರೆಗೆ ಮೈಸೂರು ದಸರಾ ವಸ್ತುಪ್ರದರ್ಶನ ವಿಸ್ತರಣೆ

ನೂರು ದಿನಗಳನ್ನು ಪೂರೈಸಿದ ದಸರಾ ವಸ್ತು ಪ್ರದರ್ಶವನ್ನು ಇನ್ನೂ 40 ದಿನಗಳ ಕಾಲ ಮುಂದುವರಿಸಲು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ನಿರ್ಧರಿಸಿದೆ.

ಸೆಪ್ಟೆಂಬರ್ 26ರಿಂದ ಡಿಸೆಂಬರ್ 31ರವರೆಗೆ ನೂರು ದಿನಗಳ ಕಾಲ ವಸ್ತು ಪ್ರದರ್ಶನವನ್ನು ಪ್ರಾಧಿಕಾರ ಆಯೋಜಿಸಿತ್ತು. ನೂರು ದಿನಗಳಲ್ಲಿ ಸುಮಾರು 13ರಿಂದ 15 ಲಕ್ಷ ಜನರು ವಸ್ತು ಪ್ರದರ್ಶನವನ್ನು ವೀಕ್ಷಿಸಿದ್ದರು.  ಇದೀಗ ಫೆಬ್ರವರಿ 14ರವರೆಗೂ ಪ್ರದರ್ಶನ ಮುಂದುವರಿಸಲು ಪ್ರಾಧಿಕಾರ ನಿರ್ಧರಿಸಿದೆ.

ವಸ್ತು ಪ್ರದರ್ಶನವನ್ನು ಫನ್‌ವರ್ಲ್ಡ್ ಗುತ್ತಿಗೆದಾರ ಕಂಪನಿಗೆ ನೀಡಲಾಗಿದ್ದು, 40 ದಿನಗಳ ಕಾಲ ಮುಂದುವರೆಸುವಂತೆ ಕಂಪನಿಗೆ ಸೂಚನೆ ನೀಡಲಾಗಿದೆ. ವಿಸ್ತರಿತ ದಿನಗಳಲ್ಲಿ ಸುಮಾರು 40 ಲಕ್ಷ ಆದಾಯ ಪ್ರಾಧಿಕಾರಕ್ಕೆ ಸಿಗಲಿದೆ.

ನೂರು ದಿನಗಳ ಕಾಲ ನಡೆದ ವಸ್ತು ಪ್ರದರ್ಶನಕ್ಕೆ ಪ್ರವಾಸಿಗರಿಂದ ಅತ್ಯುತ್ತಮ ಸ್ಪಂದನೆ ಸಿಕ್ಕಿತ್ತು. ಮೈಸೂರಿಗೆ ಬರುವ ಪ್ರವಾಸಿಗರ ಸಂಖ್ಯೆಯು ಹೆಚ್ಚಿದ್ದು, ಅರಮನೆ, ಮೃಗಾಲಯ ವೀಕ್ಷಣೆಗೆ ಬರುವವರು ವಸ್ತುಪ್ರದರ್ಶನವನ್ನು ವೀಕ್ಷಿಸುತ್ತಾರೆ. ಈ ಉದ್ದೇಶದಿಂದ ವಸ್ತುಪ್ರದರ್ಶನವನ್ನು 40 ದಿನಗಳ ಕಾಲ ವಿಸ್ತರಿಸಲು ಪ್ರಾಧಿಕಾರ ನಿರ್ಧರಿಸಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!