Friday, November 20, 2026

ಪ್ರಾಯೋಗಿಕ ಆವೃತ್ತಿ

ಡಿವಿಜಿ-ಪುತಿನ ಅವರ ಸಾಹಿತ್ಯ ಹೃದಯಕ್ಕೆ ಹಿತಾನುಭವ, ಬುದ್ಧಿಗೆ ಬೆಳಕು ಮತ್ತು ಜೀವನಕ್ಕೆ ಸತ್ಪ್ರಯೋಜಕ – ಸಾಹಿತಿ ರಾಜ್ ಆಚಾರ್ಯ

ಮಂಡ್ಯ:ಡಿ ವಿ ಜಿ ಮತ್ತು ಪು ತಿ ನ ಅವರಂತಹ ಧೀಮಂತ ಸಾಹಿತಿಗಳು ಕನ್ನಡ ಸಾಹಿತ್ಯ ಲೋಕವನ್ನು ಸಮೃದ್ಧಗೊಳಿಸಿದ್ದಲ್ಲದೆ ಸಮಾಜಮುಖಿಯನ್ನಾಗಿಸಿದರು ಎಂದು ಹಿರಿಯ ಸಾಹಿತಿ ತಾ.ನಾ. ಶಿವಕುಮಾರ್ ಅಭಿಪ್ರಾಯಪಟ್ಟರು.

ಡಿವಿಜಿ ಕಗ್ಗ ಬಳಗ ಮಂಡ್ಯ ದ 5 ನೇ ವಾರ್ಷಿಕೋತ್ಸವದ ಪ್ರಯುಕ್ತ ಮಂಡ್ಯದ ಡಿ. ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ, ಘಟಕ 1 ರಲ್ಲಿ ಹಮ್ಮಿಕೊಳ್ಳಲಾಗಿದ್ದ “ನಾಡಿನ ಪ್ರಸಿದ್ಧ ಕವಿ ಮತ್ತು ಸಾಹಿತ್ಯ ಲೋಕದ ಧೃವತಾರೆ ಡಿವಿಜಿ ಮತ್ತು ಪು ತಿ ನ ಜನ್ಮದಿನಾಚರಣೆ“ಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ “ಬದುಕು ಜಟಕಾ ಬಂಡಿ – ಬಾ ಒಲವೆ (ಕಗ್ಗ ವಾಚನ – ಗೀತಾ ಗಾಯನ)” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಖ್ಯಾತ ವಾಗ್ಮಿ ಯುವ ಸಾಹಿತಿ ರಾಜ್ ಆಚಾರ್ಯ ಮಾತನಾಡುತ್ತ “ಸಾಹಿತ್ಯವನ್ನು ಏಕೆ ಅಧ್ಯಯನ ಮಾಡಬೇಕು?” ಎಂದು ಕೇಳಿದರೆ ನೀವು ಹೇಗೆ ಉತ್ತರಿಸುತ್ತೀರಿ? ಕಾಲೇಜಿನಲ್ಲಿ ಏನು ಅಧ್ಯಯನ ಮಾಡಬೇಕೆಂದು ಆಯ್ಕೆಮಾಡುವಾಗ “ಯಶಸ್ಸು” ಅಥವಾ “ಉತ್ತಮ ಆದಾಯ” ಅಥವಾ ಕಾಲೇಜು ಶಿಕ್ಷಣದ ಉದ್ದೇಶವೇನೆಂಬುದರ ಬಗ್ಗೆ ಸೀಮಿತ ಊಹೆಗಳಿಗೆ ಸಂಬಂಧಿಸಿರುವ ಸಮಯದಲ್ಲಿ ನಾವು ಮತ್ತೊಮ್ಮೆ ಎದುರಿಸುತ್ತಿರುವ ಹಳೆಯ ಪ್ರಶ್ನೆ ಇದು. ವಾಸ್ತವವಾಗಿ, ನಾವು ಸಾಹಿತ್ಯವನ್ನು ಏಕೆ ಅಧ್ಯಯನ ಮಾಡುತ್ತೇವೆ ಎಂಬುದರ ಕುರಿತು ಚರ್ಚೆಯು ಈ ಕಾಲಕ್ಕೆ ಅಗತ್ಯವಾಗಿದೆ ಎಂದು ಹೇಳಿದರು .

ಮುಂದುವರೆದು ಮಾತನಾಡುತ್ತ ಅವರು “ಯಾವುದೇ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಸಾಮಾನ್ಯ ಶಿಕ್ಷಣ ಅಥವಾ ಉದಾರ ಕಲೆಗಳ ಪಠ್ಯಕ್ರಮಕ್ಕೆ ನೇರವಾಗಿ ಸಂಬಂಧಿಸಿದೆ. ಈ ಕಾರ್ಯಕ್ರಮಗಳು ಸಾಹಿತ್ಯ, ತತ್ವಶಾಸ್ತ್ರ ಮತ್ತು ಕಲೆಯನ್ನು ಅಧ್ಯಯನ ಮಾಡುವುದು ನಮ್ಮನ್ನು ಉತ್ತಮ ವ್ಯಕ್ತಿಗಳನ್ನಾಗಿ ಮಾಡುತ್ತದೆ” ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

“ವಿದ್ಯಾರ್ಥಿಗಳು ಮತ್ತು ಸಾಹಿತ್ಯ ಪುಸ್ತಕ ದೊರೆತ ಅರಿವು- ಮಸ್ತಕದಿ ಬೆರೆತ ತಿಳಿವುಗಳೊಂದಾದಾಗ ಜ್ಞಾನದ ಜನನವಾಗುತ್ತದೆ. ಸುಜ್ಞಾನಿಗಳ ಒಡಲಲ್ಲಿ ಓರ್ವ ಕವಿ ಅಥವಾ ಬರಹಗಾರ ಸೃಷ್ಟಿಯಾಗಬಲ್ಲ. ಮಾತುಗಳಿಂದ, ರಚನೆಯ ಕಲೆಯಿಂದ ಅದ್ಭುತ ಸಾಹಿತ್ಯ ಲೋಕ ಸೃಷ್ಟಿಯಾಗಬಲ್ಲುದು. ಮನದ ಭಾವನೆಗಳಿಗೆ ಬರಹ ರೂಪ ನೀಡಿ, ಸಂಬಂಧ ಬೆಸೆಯುವ ವಿಶೇಷ ಶಕ್ತಿ ಸಾಹಿತ್ಯಕ್ಕಿದೆ, ಹಾಗಾಗಿ ಡಿವಿಜಿ ಮತ್ತು ಪುತಿನ ಅವರಂತಹ ಮೇರು ಸಾಹಿತಿಗಳ ಓದು ಈಗಿನ ಕಾಲಕ್ಕೆ ಅಗತ್ಯವಾಗಿದೆ ಎಂದರು.

ಕನ್ನಡಕ್ಕೆ ಕಗ್ಗವನ್ನು ಕೊಡುಗೆಯಾಗಿ ನೀಡಿದ ಮಹನೀಯ ಡಿ ವಿ ಜಿ ಹಾಗು ಜೀವನಪ್ರೀತಿಯ ಪು ತಿ ನ ಅವರ ಸಾಹಿತ್ಯ ಓದಿದವನ ಹೃದಯಕ್ಕೆ ಹಿತಾನುಭವವು, ಬುದ್ಧಿಗೆ ಬೆಳಕು ಮತ್ತು ಜೀವನಕ್ಕೆ ಸತ್ಪ್ರಯೋಜನ ಉಂಟಾಗುವಂತಹುದು ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶುಗರ್ ಸಿಟಿ ಅಲಯನ್ಸ್ ಕ್ಲಬ್ ನ ಅಲೈ ಕೆ ಟಿ ಹನುಮಂತು ಅವರು ಮಾತನಾಡಿ ಡಿವಿಜಿ ಮತ್ತು ಪುತಿನ ಅವರಂತಹ ಶ್ರೇಷ್ಠರ ಬದುಕು-ಬರಹ ನಮ್ಮ ಜೀವನಕ್ಕೆ ದಾರಿದೀಪ ಎಂದು ಬಣ್ಣಿಸಿದರು.

ಡಿವಿಜಿ ಕಗ್ಗ ಬಳಗದ ಸಂಸ್ಥಾಪಕಿ ಕವಯತ್ರಿ ಹಾಗು ನಿರೂಪಕಿ ಭವಾನಿ ಲೋಕೇಶ್ ಮಾತನಾಡುತ್ತ ಡಿವಿಜಿ ಮಂಕುತಿಮ್ಮನ ಕಗ್ಗಬಳಗ ಮಂಡ್ಯ ಕಳೆದ ಐದು ವರ್ಷಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಮಾಡಿದ್ದು, 74,000ಕ್ಕೂ ಹೆಚ್ಚು ಸದಸ್ಯರನ್ನ ಹೊಂದಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಕಗ್ಗ ಬಳಗದ ರೂಪು ರೇಷೆಗಳನ್ನು ಮತ್ತು ಉದ್ದೇಶಗಳನ್ನು ಸವಿಸ್ತಾರವಾಗಿ ವಿವರಿಸಿದರು.

ಇದೇ ಸಂದರ್ಭದಲ್ಲಿ ಪ್ರಮಥ್ ಎಸ್ ಭಾರಧ್ವಾಜ್ ಇವರಿಂದ ಕಗ್ಗ ವಚನ ನೆರೆವೇರಿತು ಹಾಗೂ ಪ್ರತಿಭಾಂಜಲಿ ಸುಗಮ ಸಂಗೀತ ಅಕ್ಯಾಡೆಮಿ ಮಂಡ್ಯ ಸಂಸ್ಥೆಯ ಡೇವಿಡ್ ಅವರಿಂದ ಗೀತಾ ಗಾಯನ ಸಂಪನ್ನಗೊಂಡಿತು.

ಕಾರ್ಯಕ್ರಮದಲ್ಲಿ ಅಲೈ ಕೆ.ಎಸ್.ಚಂದ್ರಶೇಖರ್ LMF ಜಿಲ್ಲಾ ಸಂಪುಟ ಕಾರ್ಯದರ್ಶಿ, ಅಲೈ ಎಸ್.ಎಂ. ಲೋಕೇಶ್ LMF ಅಧ್ಯಕ್ಷರು,ಅಲೈ ಬಿ.ಎ. ರಾಧಾಕೃಷ್ಣ ಕಾರ್ಯದರ್ಶಿ ಪದಾಧಿಕಾರಿಗಳು ಹಾಗೂ ಸದಸ್ಯರು ಶುಗರ್‌ಸಿಟಿ ಅಲಯನ್ಸ್ ಕ್ಲಬ್, ಉಪಸ್ಥಿತರಿದ್ದರು. ಮೊದಲಿಗೆ ಸ್ಮಿತಾ ಬಾಲು ಅವರು ಸ್ವಾಗತಿಸಿ ನಿರೂಪಿಸಿದರೆ ಕಡೆಯಲ್ಲಿ ಭವಾನಿ ಲೋಕೇಶ್ ವಂದಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ