ಪರಿಸರ ದಿನಾಚರಣೆಯ ದಿವಸ ಗಿಡ ನೆಡುವುದರೊಂದಿಗೆ ಅದನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.ಪರಿಸರದ ಉಳಿವಿಗಾಗಿ ಎಲ್ಲರೂ ಕೈ ಜೋಡಿಸೋಣ ಎಂದು ಪಿ.ಇ.ಟಿ.ಕಾರ್ಯದರ್ಶಿ ಶಿವಪ್ರಸಾದ್ ತಿಳಿಸಿದರು.
ಮಂಡ್ಯ ನಗರದ ಪಿ.ಇ.ಎಸ್ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಪೀಪಲ್ಸ್ ಎಜುಕೇಶನ್ ಟ್ರಸ್ಟ್, ರಾಷ್ಟ್ರೀಯ ಸೇವಾ ಯೋಜನೆ,ಯುವ ರೆಡ್ ಕ್ರಾಸ್ ಒ.ಎಸ್.ಬಿ.ಐ ಇವರ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಇಂದು ಮಾನವ ಅಗತ್ಯ ಮೀರಿ ಪರಿಸರವನ್ನು ನಾಶ ಮಾಡುತ್ತಿದ್ದಾನೆ.ಪರಿಸರ ಜಲ,ವಾಯು,ಆಕಾಶವನ್ನು ರಕ್ಷಣೆ ಮಾಡಬೇಕಿದೆ. ನೀರನ್ನು ಅವಶ್ಯಕತೆಗಿಂತ ಮೀರಿ ಬಳಸಬಾರದು. ಮುಂದಿನ ಪೀಳಿಗೆ ಬಗ್ಗೆ ನಮಗೆ ಗಮನವಿರಬೇಕು. ಪರಿಸರ ಸಂರಕ್ಷಣೆಯನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಎಸ್.ಬಿ.ಐ ಪ್ರಾದೇಶಿಕ ವ್ಯವಸ್ಥಾಪಕಿ ಎ.ಕೆ. ಸಂಧ್ಯಾ,ಪ್ರಾಂಶುಪಾಲರಾದ ಡಾ.ಆರ್.ಎಂ.ಮಹಾಲಿಂಗೇಗೌಡ, ಎಸ್‌ಬಿಐ, ಕೆಜಿಎಲ್ ಶಾಖಾ ವ್ಯವಸ್ಥಾಪಕ ವಿ.ಸಿ.ವಲ್ಲೀಶ್,ಇಂದ್ರೇಶ್, ಸಿ.ಭವ್ಯಾ ಡಾ. ಬಿ.ಎಸ್ ಶಿವಕುಮಾರ್, ಡಾ.ಜಯಶಂಕರ್ ಬಾಬು, ಡಾ.ಎಚ್.ಸಿ.ಚೌಡೇಗೌಡ,ಪ್ರೊ.ಮಧುಸೂಧನ್ ಎಂ.ಎಸ್. ಸೇರಿದಂತೆ ಇತರರು ಉಪಸ್ಥಿತರಿದ್ದರು.