ವಿದ್ಯಾಭ್ಯಾಸದ ಜೊತೆ ಎಲ್ಲಾ ಮನರಂಜನಾ ಕಾರ್ಯಕ್ರಮಗಳಲ್ಲಿ ಸಕ್ರಿಯ ಭಾಗವಹಿಸಿ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಿ ಎಂದು ಚಿತ್ರನಟಿ ಭವ್ಯ ತಿಳಿಸಿದರು.
ಪಟ್ಟಣದ ಶಾಂತಿ ಸಮುದಾಯ ಭವನದಲ್ಲಿ ಶಾಂತಿ ಪದವಿ ಪೂರ್ವ ಕಾಲೇಜು ವತಿಯಿಂದ ನಡೆದ ಕ್ರೀಡಾ ಮತ್ತು ಸಾಂಸ್ಕೃತಿಕ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಜೀವನದಲ್ಲಿ ಶ್ರದ್ಧೆ ಮೌಲ್ಯ ಆದರ್ಶಗಳನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿಶಾಸಕಿ ನಾಗಮಣಿನಾಗೇಗೌಡ, ಉಪಾಧ್ಯಕ್ಷ ಮಹದೇವಸ್ವಾಮಿ, ಕಾರ್ಯದರ್ಶಿ ಕೆಂಪಯ್ಯ, ಪುಟ್ಟೀರೇಗೌಡ, ನಾಯಕ ನಟ ವಿನಯ್ ಕಾರ್ತಿಕ್, ನಾಯಕಿ ಕು .ಸನ್ಮಿತ , ದಡದಪುರಶಿವಣ್ಞ, ಪ್ರಾಂಶುಪಾಲ ಶಿವಪ್ಪ, ಜಗನ್ನಾಥ ಸೇರಿದಂತೆ ಹಲವರು ಇದ್ದರು




