Thursday, September 19, 2024

ಪ್ರಾಯೋಗಿಕ ಆವೃತ್ತಿ

ಈ ದಿನ.ಕಾಮ್ ತನ್ನದೆ ಆಪ್ ಹೊಂದುತ್ತಿರುವುದು ಆಶಾದಾಯಕ ಬೆಳವಣಿಗೆ : ಪತ್ರಕರ್ತ ಮಲ್ಲೇಶ್ ಹರ್ಷ

ಸತ್ಯ ನ್ಯಾಯ, ಪ್ರೀತಿ ಪ್ರತಿಪಾದಿಸುತ್ತಾ ಸಮಾಜದಲ್ಲಿ‌ ಪ್ರೀತಿ ಬಿತ್ತುವ ಆಶಯದಿಂದ ಕಾರ್ಯನಿರ್ವಹಿಸುತ್ತಿದ್ದ ಈ ದಿನ.ಕಾಮ್ ಇಂದು ತನ್ನದೆ ಆಪ್ ಹೊಂದುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಪತ್ರಕರ್ತ ಮಲ್ಲೇಶ್ ಹರ್ಷ ವ್ಯಕ್ತಪಡಿಸಿದರು.

ಮದ್ದೂರಿನ ಭೂ ಬ್ಯಾಂಕ್ ಸಭಾಂಗಣದಲ್ಲಿ ಇಂದು ಏರ್ಪಡಿಸಿದ್ದ ಈ ದಿನ.ಕಾಮ್ ಡಿಜಿಟಲ್‌ ಮಾಧ್ಯಮದ ಆಪ್ ಬಿಡುಗಡೆಗೊಳಿಸಿ ಮಾತನಾಡಿದ ಅವರು ದೃಶ್ಯ ಮಾಧ್ಯಮ ಮತ್ತು ಮುದ್ರಣ ಮಾಧ್ಯಮಕ್ಕೆ ಸೀಮಿತ ವ್ಯಾಪ್ತಿಯಿದೆ, ಡಿಜಿಟಲ್ ಮಾಧ್ಯಮ ಕ್ಕೆ ಇಂತಹ ಸೀಮಿತತೆ ಇಲ್ಲಾ ಎಂದರು.

ಸಮಾಜದಲ್ಲಿ ಧರ್ಮ ಜಾತಿಗಳ ಹೆಸರಿನಲ್ಲಿ ದ್ವೇಷ ಬಿತ್ತಲಾಗುತ್ತಿದೆ ಇಂತಹ ವಾತವಾರಣದ ನಡುವೆ ಪರ್ಯಾಯ ಮಾಧ್ಯಮ ವಾಗಿ ಸತ್ಯ ನ್ಯಾಯ ಪ್ರತಿಪಾದಿಸುತ್ತಾ ಸಮಾಜದಲ್ಲಿ‌ಪ್ರೀತಿ ಬಿತ್ತುವಾ ಸಂಕಲ್ಪ ದೊಂದಿಗೆ ಈ ದಿನ ಬಳಗ ಕಾರ್ಯಪ್ರವೃತ್ತರಾಗಿರುವುದು ಉತ್ತಮ ಬೆಳವಣಿಗೆ ಎಂದರು.

ಮದ್ದೂರಿನ ಪ್ರಗತಿಪರ ಸಂಘಟನೆಗಳು ಅತ್ತಂತ ಕ್ರೀಯಾಶೀಲವಾಗಿ ಕಾರ್ಯನಿರ್ವಹಿಸುತ್ತಾ ಬಿಡಿಯಾಗಿದ್ದ ಸಂಘಟನೆಗಳನ್ನು ಒಗ್ಗೂಡಿಸಿ ಕ್ಕೊಂಡು ಸಾಂಘಿಕ ಪ್ರಯತ್ನದಿಂದ ಜನ ಸಾಮನ್ಯರಿಗೆ ನ್ಯಾಯದೊರಕಿಸುವ ಪ್ರಯತ್ನ ಶ್ಲಾಘನೀಯ ಎಂದರು. ಕುವೆಂಪು ಜನ್ಮದಿನದಂದು ಅವರ ಆಶಯಗಳ ಜಾರಿಗಾಗಿ ಈ ದಿನ.ಕಾಮ್ ಮಾಧ್ಯಮ ಬಳಗ ತನ್ನದೆ ಆಪ್ ಹೊಂದುವ ಮೂಲಕ ಈವರೆಗೆ ಕಾರ್ಪೊರೇಟ್ ಕಂಪನಿಗಳು ಮಾತ್ರ ಹೊಂದಿದೆ. ಆಪ್ ಸೌಲಭ್ಯ ಜನಸಾಮಾನ್ಯರ ದ್ವನಿಯಾದ ಈ ದಿನ.ಕಾಮ್ ಬಳಗವು ಹೊಂದಿದ್ದು ಇದರ ಪೊಷಣೆಗೆ ಜನಸಾಮಾನ್ಯರು ಮುಂದಾಗಬೇಕೆಂದರು.

ವಕೀಲರಾದ ಜಿ. ಎನ್. ಸತ್ಯ ಅವರು ಈ ದಿನ.ಕಾಮ್ ಆಪ್ ಬಿಡುಗಡೆ ಹರ್ಷಧಾಯಕ ಸಂಗತಿ ಚಳವಳಿಗಳಿಗೆ ಜನಸಾಮಾನ್ಯರ ದ್ವನಿಗೆ ಇದರಿಂದ ಬಲಬಂದಿದೆ ಎಂದರು.

ನಿವೃತ್ತ ಇಂಜಿನಿಯರ್ ಬಿ. ವಿ. ಶಂಕರೇಗೌಡ ಅವರು ರೈತರ ಸುದ್ದಿ ಚಳುವಳಿಯ ವರದಿ ಸಾಂಕೇತಿಕಗೊಳಿಸಿ ಬಂಡವಾಳಶಾಯಿಗಳ ಸುದ್ದಿಗೆ ಆದ್ಯತೆ ನೀಡುತ್ತಿದ್ದ ಮಾಧ್ಯಮಗಳು ಜನರೇ ಸೇರಿ ನಡೆಸಲು ಮುಂದಾಗಿಹ ಈ ದಿನ.ಕಾಮ್ ಡಿಜಿಟಲ್ ಮಾಧ್ಯಮ ನೋಡಿ ಎಚ್ಚತ್ತುಕ್ಕೊಳ್ಳಬೇಕೆಂದರು.

ಇದೆ ಕಾರ್ಯಕ್ರಮದಲ್ಲಿ ಡಾ ದನಂಜಯ್ಯ ಅವರು ಸರ್ಕಾರಿ ಆಸ್ಪತ್ರೆಯ ಸೇವಾತಂಡ ರಚಿಸಿಕೊಂಡಿಹ ” ಮದ್ದಿನ ಮನೆ ನೆರವಿಗರ ಕೂಟಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಪೀಕಾರ್ಡ್ ಭ್ಯಾಂಕ್ ಅಧ್ಯಕ್ಷ ಮುತ್ತುರಾಜ್ ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ ಚನ್ನಸಂದ್ರ ಲಕ್ಷ್ಮಣ್, ಹಾಲು,ಉತ್ಪಾದಕರ ಹೋರಾಟ ಸಮಿತಿಯ ತಾ ಅಧ್ಯಕ್ಷ ಜಿ. ಕೆ. ರಾಜು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!