Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯದಲ್ಲಿ ಪರಿಣಾಮಕಾರಿ ಭಾಷಣ ಕಲೆ ಕಾರ್ಯಾಗಾರ……

ಸಮಾಜ ಸೇವೆ ಹಾಗೂ ನಾಯಕತ್ವ ಬೆಳವಣಿಗೆಯಲ್ಲಿ ಗಣನೀಯ ಕೊಡುಗೆ ನೀಡುತ್ತಿರುವ ವಿಶ್ವದ ಅಗ್ರಮಾನ್ಯ ಸಂಸ್ಥೆಗಳಲ್ಲಿ ಒಂದಾದ ಜ್ಯೂನಿಯರ್ ಛೇಂಬರ್ ಇಂಟರ್ನ್ಯಾಷನಲ್ (ಜೆಸಿಐ) ಸಂಸ್ಥೆಯ ಜನಪ್ರಿಯ ತರಬೇತಿ ಕಾರ್ಯಕ್ರಮ ಪರಿಣಾಮಕಾರಿ ಭಾಷಣ ಕಲೆ (Effective Public Speaking) ಕಾರ್ಯಾಗಾರವು ಡಿ.10 ರಂದು ಮಂಡ್ಯದ ಪಿಇಎಸ್ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ನಡೆಯಲಿದೆ.

ಶಿಕ್ಷಕರು, ಉಪನ್ಯಾಸಕರು, ಅಧಿಕಾರಿಗಳು, ರಾಜಕಾರಣಿಗಳು, ಆಡಳಿತಗಾರರು, ಮಾಧ್ಯಮ ಪ್ರತಿನಿಧಿಗಳು, ವ್ಯಾಪಾರಿಗಳು, ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ಎಲ್ಲ‌ ವಿಭಾಗ/ ವರ್ಗಗಳಿಗೆ ಉಪಯುಕ್ತವಾಗುವ ಈ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬಹುದು, ಹೆಚ್ಚಿನ ವಿವರಗಳಿಗೆ ಅಜೇಯ್ ಬಿಪಿ ಮೊ. 9141505921, ರಾಜೀವ್ ರಾಮ್ ಮೊ.98451 52099 ಹಾಗೂ ಸುನೀಲ್ ಎಂ.ಬಿ ಮೊ.78298 51699, ನೋಂದಣಿಗಾಗಿ ಕಿರಣ್ ಮೊ. 9845552558, ಕಾಲ್ವಿನ್ ಮೊ.9740076626 ಸಂಪರ್ಕಿಸಬಹುದು.

ಉಮ್ಮಡಹಳ್ಳಿಯಲ್ಲಿ ಕನ್ನಡ ರಾಜ್ಯೋತ್ಸವ

ಜೆಸಿಐ  ಅಂತಾರಾಷ್ಟ್ರೀಯ ಸಂಸ್ಥೆ ವತಿಯಿಂದ ಮಂಡ್ಯದ ಉಮ್ಮಡಹಳ್ಳಿ ಸರ್ಕಾರಿ ಪ್ರೌಢಶಾಲಾ ವಿಧ್ಯಾರ್ಥಿಗಳಿಗೆ ರಸಪ್ರಶ್ನಾ ಸ್ಪರ್ಧೆಯನ್ನೇರ್ಪಡಿಸಿ ಗೆದ್ದವರಿಗೆ ಬಹುಮಾನವಾಗಿ ಕನ್ನಡ ಪುಸ್ತಕಗಳನ್ನು ವಿತರಿಸಲಾಯಿತು ಎಂದು ಜೆಸಿಐ ಅಧ್ಯಕ್ಷ ಕಿರಣ್ ಕುಮಾರ್ ತಿಳಿಸಿದ್ದಾರೆ.

ನಮ್ಮ ಸಂಸ್ಥೆ ಭಾರತದ ಉದ್ದಗಲಕ್ಕೆ ಸ್ಥಳೀಯ ಶಾಖಾ ಸಂಘಗಳನ್ನು ಹೊಂದಿದೆ ಮತ್ತು ನಿಮ್ಮ‌ ವೈಯಕ್ತಿಕ ಹಾಗೂ ಉದ್ಯಮ ವ್ಯವಹಾರಗಳ ಬೆಳವಣಿಗೆಗೆ ಸಹಕರಿಸುವಂತಹ ಅತ್ಯುತ್ತಮ ನೆಟ್ ವರ್ಕ್ ಒದಗಿಸುತ್ತದೆ. ಸ್ಥಳೀಯವಾಗಿ ಬಹಳಷ್ಟು ತರಬೇತಿ ಮತ್ತು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಸಮಾಜಮುಖಿ ಸೇವೆಗಳಲ್ಲಿ ತೊಡಗಬಹುದು. ಸಮಯ ಮಾಡಿಕೊಂಡು ಭಾಗವಹಿಸಿ, ಸಮಗ್ರವಾಗಿ ತಿಳಿದುಕೊಳ್ಳಿ ಮತ್ತು ನಮ್ಮ ಜೊತೆ ಕೈ ಜೋಡಿಸಿ ಎಂದು ಮನವಿ ಮಾಡಿದರು.

ಸಿರಿಗನ್ನಡಂ ಗೆಲ್ಗೆ!!! ಸಿರಿಗನ್ನಡಂ ಬಾಳ್ಗೆ!!! ಎಂಬ ನಾಣ್ಣುಡಿಯಿಂದ ಸ್ಫೂರ್ತಿಗೊಂಡು, ಕನ್ನಡ ಪುಸ್ತಕವನ್ನೋದುವ ಹವ್ಯಾಸವನ್ನು ಎಳೆಯ ಮಕ್ಕಳ ಮನದಲ್ಲಿ ಮೂಡಿಸಬೇಕೆನ್ನುವ ಉದ್ದೇಶದೂಂದಿಗೆ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ ಎಂದರು.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಇಬ್ಬರು ಹಿರಿಯ ವಿದ್ಯಾರ್ಥಿಗಳಿಗೆ ಸಿದ್ದತೆಗನುಗುಣವಾಗಿ ಅಧ್ಯಯನ ಪುಸ್ತಕಗಳನ್ನು ವಿತರಿಸಲಾಯಿತು. ಶಾಲಾ ಗ್ರಂಥಾಲಯಕ್ಕೆ ಅವಶ್ಯವಿರುವ ಪುಸ್ತಕಗಳನ್ನೂ ಕೂಡುಗೆ ನೀಡಲಾಯಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!