Friday, September 20, 2024

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ| ಸೋಮನಹಳ್ಳಿ, ಆಲಂಬಾಡಿಕಾವಲು ಗ್ರಾ.ಪಂ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ

ಕೆ.ಆರ್.ಪೇಟೆ ತಾಲ್ಲೂಕಿನ ಸೋಮನಹಳ್ಳಿ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಜಯಲಕ್ಷ್ಮಮ್ಮ ಚಂದ್ರೇಗೌಡ, ಉಪಾಧ್ಯಕ್ಷರಾಗಿ ಕೋಕಿಲಾ ಪುಟ್ಟಸ್ವಾಮಿಗೌಡ ಆಯ್ಕೆಯಾದರು.

ಎರಡನೇ ಅವಧಿಯ ಅಧ್ಯಕ್ಷ ಗಾದಿಗೆ ಜಯಲಕ್ಷ್ಮಮ್ಮ ಹಾಗೂ ಉಪಾಧ್ಯಕ್ಷ ಗಾದಿಗೆ ಕೋಕಿಲಾ ಪುಟ್ಟಸ್ವಾಮಿ ಅವರನ್ನು ಬಿಟ್ಟರೆ ಉಳಿದ ಯಾವ ಸದಸ್ಯರು ನಾಮಪತ್ರವನ್ನು ಸಲ್ಲಿಸದ ಕಾರಣ ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಡಾ.ಹೆಚ್ ಎಸ್ ದೇವರಾಜು ಚುನಾವಣಾ ಅಯ್ಕೆಯನ್ನು ಘೋಷಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಹಿರಿಯ ಮುಖಂಡ ಕೆ ಟಿ ಚಂದ್ರೇಗೌಡ ಮಾತನಾಡಿ, ಗ್ರಾಮ ಪಂಚಾಯತಿಯ  ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಮೂರು ಪಕ್ಷಗಳ ಬೆಂಬಲಿತ ಸರ್ವ ಸದಸ್ಯರು ಸೇರಿ ಅವಿರೋಧವಾಗಿ ಆಯ್ಕೆಮಾಡಿ ಮಾದರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಪುಟ್ಟಸ್ವಾಮಿ ಹಾಗೂ ಬೆಳತೂರು ಪುಟ್ಟೇಗೌಡ ಮಾತನಾಡಿದರು. ತಾ.ಪಂ.ಮಾಜಿ ಸದಸ್ಯ ಅಶೋಕ್, ಮಾಜಿ ಅಧ್ಯಕ್ಷ ಸತೀಶ್, ವಿ ಎಸ್ ಎಸ್ ಎನ್ ಬ್ಯಾಂಕ್ ಮಾಜಿ ಅಧ್ಯಕ್ಷ ಕಾಂತರಾಜು, ಮಾಜಿ ಅಧ್ಯಕ್ಷ ಆಂಜಿನಿಗೌಡ, ಗ್ರಾ.ಪಂ.ಸದಸ್ಯರಾದ ಲತಾಮಣಿ,ಜೆ ಚಂದ್ರಯ್ಯ,ಆರತಿ,ರೇಖಾ, ಸತ್ಯಕುಮಾರಿ, ಕಾಂತರಾಜು, ಮಂಜುಳಾ, ಪ್ರಕಾಶ್, ವಸಂತಕುಮಾರ್ ,ಗಣೇಶ್, ರಾಜಮ್ಮ,ಉಮೇಶ್, ಲಕ್ಷ್ಮಮ್ಮ, ರಾಮಕೃಷ್ಣೇಗೌಡ,ನಿಂಗರಾಜು,ಮಹದೇವಮ್ಮ,ನಾರಾಯಣಯ್ಯ ಉಪಸ್ಥಿತರಿದ್ದರು.

ಆಲಂಬಾಡಿಕಾವಲು ಗ್ರಾ.ಪಂ ಗೆ ಆಯ್ಕೆ

ಆಲಂಬಾಡಿಕಾವಲು ಗ್ರಾ.ಪಂ.ನೂತನ ಅಧ್ಯಕ್ಷರಾಗಿ ಎಸ್.ಬೀರೇಶ್‌ಬಾಬು ಮತ್ತು ಉಪಾಧ್ಯಕ್ಷರಾಗಿ ಭಾಗ್ಯಮ್ಮಸ್ವಾಮೀಗೌಡ ಅವರು ಅವಿರೋಧವಾಗಿ ಆಯ್ಕೆಯಾದರು.

ಎರಡನೆಯ ಅವಧಿಯ ಚುನಾವಣೆಗೆ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಸ್.ಬೀರೇಶ್ ಬಾಬು ಮತ್ತು ಉಪಾಧ್ಯಕ್ಷರ ಸ್ಥಾನ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಭಾಗ್ಯಮ್ಮ ಸ್ವಾಮಿಗೌಡ  ಹೊರತುಪಡಿಸಿ ಬೇರೆ ಯಾರು ಅರ್ಜಿ ಸಲ್ಲಿಸದೇ ಇರುವ ಕಾರಣ ಅವಿರೋಧವಾಗಿ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ಡಾ.ಎ.ಎಸ್.ದೇವರಾಜು ಕಾರ್ಯ ನಿರ್ವಹಿಸಿದರು. ಸಹ ಚುನಾವಣಾಧಿಕಾರಿಯಾಗಿ ಪಿಡಿಓ ಶಿವಕುಮಾರ್ ಕಾರ್ಯ ನಿರ್ವಹಿಸಿದರು.

ನೂತನ ಅಧ್ಯಕ್ಷ ಬೀರೇಶ್‌ಬಾಬು ಮಾತನಾಡಿ, ನನ್ನನ್ನು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಲು ಶ್ರಮಿಸಿದ ಮುಖಂಡರಿಗೆ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿ, ನಿಮ್ಮ ನಂಬಿಕೆ ವಿಶ್ವಾಸಕ್ಕೆ ಧಕ್ಕೆ ಬಾರದ ಹಾಗೆ ಸರ್ವ ಸದಸ್ಯರು ಹಾಗೂ ಅಧಿಕಾರಿ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮವಾದ ಕೆಲಸ ಮಾಡಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ನಾಗೇಂದ್ರ ಕುಮಾರ್, ತಾ.ಪಂ. ಮಾಜಿ ಅಧ್ಯಕ್ಷ ನಂಜುಂಡೇಗೌಡ, ತಾ.ಪಂ. ಮಾಜಿ ಸದಸ್ಯ ಸಂಜೀವಪ್ಪ, ಮುಖಂಡರಾದ ಜಿ.ಎ.ರಾಯಪ್ಪ, ಜವರೇಗೌಡ, ಅಬ್ದುಲ್ ಸಿದ್ದಿಕ್, ನಂದಕುಮಾರ್, ರಘುನಾಥ್, ಚಂದ್ರಶೇಖರ್, ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಮೋಹನ್ ಕುಮಾರ್, ಶಿವರಾಜು, ಅಪ್ಪಾಜಿ, ಗೋವಿಂದೇಗೌಡ, ಕುಮಾರಸ್ವಾಮಿ, ಸದ್ಯಸರಾದ ಎ.ಟಿ.ಕರಿಶೆಟ್ಟಿ, ಚಂದ್ರಕಲಾ, ಸುಮ, ಅತೀಕ್ ಅಹಮದ್, ಮುಜಾಯಿದ್ ಖಾನ್, ರೂಪ, ಇಶ್ರತ್ ಉನ್ನಿಸಾ, ವೆಂಕಟೇಶ್, ನಾಗೇಶ್, ಸರೋಜಮ್ಮ, ವೇದಾಂಬ, ಎ.ರಾಜು, ಸಾಕಮ್ಮ, ನಾಗಮ್ಮ ಸೇರಿದಂತೆ ಉಪಸ್ಥಿತರಿದ್ದು, ಅಭಿನಂದಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!