Friday, September 20, 2024

ಪ್ರಾಯೋಗಿಕ ಆವೃತ್ತಿ

ಲಲಿತ ಪ್ರಬಂಧ ಆಕರ್ಷಿಸುವಂತಿರಲಿ


  • ಡಾ.ಶುಭಶ್ರೀ ಪ್ರಸಾದ್ ಅವರ ಮೂರು ಪುಸ್ತಕಗಳ ಬಿಡುಗಡೆ ಸಮಾರಂಭ

  • ಲಲಿತ ಪ್ರಬಂಧ ಯುವ ಬರಹಗಾರರನ್ನು ಆಕರ್ಷಿಸುವಂತಿರಬೇಕು ನಿವೃತ್ತ ಪ್ರಾಧ್ಯಾಪಕಿ ಭುವನೇಶ್ವರಿ ಹೆಗಡೆ
  • ಬೇಲಿ ಕವನ ಸಂಕಲನ, ಮಂಜಿನ ಮಧುಪಾತ್ರೆ ಪ್ರವಾಸ ಕಥನ, ಕಲ್ಲು ಹಾಸಿನ ಮೇಲೆ ತಕಧಿಮಿ ಮೂರು ಕೃತಿ

ಲಲಿತ ಪ್ರಬಂಧ ನಮ್ಮ ಚಿಂತನೆಯನ್ನು ವ್ಯಕ್ತಪಡಿಸುವ ಒಂದು ಸಾಹಿತ್ಯದ ಪ್ರಕಾರವಾಗಿದ್ದು, ಇದು ಯುವ ಬರಹಗಾರರನ್ನು ಆಕರ್ಷಿಸುವಂತಿರಬೇಕು ಎಂದು ಹಾಸ್ಯ ಲೇಖಕಿ, ನಿವೃತ್ತ ಪ್ರಾಧ್ಯಾಪಕಿ ಭುವನೇಶ್ವರಿ ಹೆಗಡೆ ಅಭಿಪ್ರಾಯಪಟ್ಟರು.

ಐಡಿಯಲ್ ಪಬ್ಲಿಕೇಶನ್ಸ್ ವತಿಯಿಂದ ಮಂಡ್ಯ ನಗರದ ಕರ್ನಾಟಕ ಸಂಘದಲ್ಲಿ ನಡೆದ ಡಾ.ಶುಭಶ್ರೀ ಪ್ರಸಾದ್ ಅವರ ಮೂರು ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

ಜೀವನದ  ಕಷ್ಟದ, ಜಂಜಾಟದ ಬದುಕನ್ನು ಸಹ ಸಹಜವಾದ ಕಣ್ಣಿನಿಂದ ನೋಡಿ ಬರೆಯಲು ಸಾಧ್ಯ ಎಂಬುದನ್ನು ಲಲಿತ ಪ್ರಬಂಧಕಾರರು ತೋರಿಸಿಕೊಟ್ಟಿದ್ದಾರೆ. ಅಂತಹವರಲ್ಲಿ ರಾ.ಶಿ, ನಾ.ಕಸ್ತೂರಿ, ಕೈಲಾಸಂ, ಅಪರಂಜಿ ಇವರ ಬರಹಗಳು ಓದುಗರನ್ನು ಮೋಡಿ ಮಾಡಿದೆ ಎಂದು ತಿಳಿಸಿದರು.

ಹಿರಿಯ ಸಾಹಿತಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ತೈಲೂರು ವೆಂಕಟಕೃಷ್ಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರಕೃತಿಯಿಲ್ಲದೆ ಯಾವುದೇ ಕೃತಿಯನ್ನು ಬರೆಯಲು ಸಾಧ್ಯವಿಲ್ಲ, ಕಾಂಕ್ರೀಟ್ ಕಾಡಿನಲ್ಲಿ ಕುಳಿತು ಕೆಲವರು ಅದೇನು ಬರೆಯುತ್ತಾರೋ ಎಂಬುದು ಗೊತ್ತಿಲ್ಲ ಆದರೂ ಅವರು ಬರೆದು ಪುಸ್ತಕವನ್ನು ಹೊರತರುತ್ತಾರೆ.

ನಾನು ಗ್ರಂಥಾಲಯ ಪ್ರಾಧಿಕಾರದ ಸದಸ್ಯನಾಗಿದ್ದೇನೆ. ಅಲ್ಲಿ ನಡೆಯುವ ರಹಸ್ಯಗಳನ್ನು ನಾನು ನೋಡಿದ್ದೇನೆ ಎಂತೆಂತಹ ಕವಿಗಳ ಪುಸ್ತಕಗಳು ಅಲ್ಲಿರುತ್ತವೆ ಎಂದರು. ಇಂದಿನ ಯುವ ಜನತೆ ಗ್ರಂಥಾಲಯಕ್ಕೆ ಬರುತ್ತಿಲ್ಲ. ಟಿವಿ ಮತ್ತು ಆಧುನಿಕ ತಂತ್ರಜ್ಙಾನದ ಪ್ರಭಾವದಿಂದ ಹೀಗಾಗಿದೆ. ಶುಭಶ್ರೀ ಪ್ರಸಾದ್ ರವರು ಬ್ಯಾಂಕಿನಲ್ಲಿ ಉದ್ಯೋಗ ಮಾಡಿಕೊಂಡು ಸಾಹಿತ್ಯ ರಚನೆ ಮಾಡುವುದು ತುಂಬಾ ಸಂತೋಷದ ವಿಷಯ ಎಂದು ಹರ್ಷ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಲೇಖಕಿ ಶುಭಶ್ರೀ ಪ್ರಸಾದ್ ಅವರ ಹೂ ದಂಡೆಯ ಬೇಲಿ ಕವನ ಸಂಕಲನ, ಮಂಜಿನ ಮಧುಪಾತ್ರೆ ಪ್ರವಾಸ ಕಥನ ಹಾಗೂ ಲಲಿತ ಪ್ರಬಂಧ ಸಂಕಲನವಾದ ಕಲ್ಲು ಹಾಸಿನ ಮೇಲೆ ತಕಧಿಮಿ ಎಂಬ ಮೂರು ಕೃತಿಗಳನ್ನು ಲೋಕಾರ್ಪಣೆ ಗೊಳಿಸಲಾಯಿತು.

ಸಮಾರಂಭದಲ್ಲಿ ಐಡಿಯಲ್ ಪಬ್ಲಿಕೇಶನ್ಸ್ ಎಂ.ಎಸ್.ಶಿವಪ್ರಕಾಶ್, ಕೃತಿ ಕರ್ತೃ ಶುಭಶ್ರೀ ಪ್ರಸಾದ್, ಭವಾನಿ ಲೋಕೇಶ್, ಪ್ರಸಾದ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!