Thursday, September 19, 2024

ಪ್ರಾಯೋಗಿಕ ಆವೃತ್ತಿ

ಅವಧಿ ಮೀರಿದ ಔಷಧಿ ನಾಶಪಡಿಸದ ವೈದ್ಯರ ವಿರುದ್ಧ ನ್ಯಾಯಾಧೀಶೆ ತರಾಟೆ

✍️ಮಾಕವಳ್ಳಿ ಮನು

ಕೆ.ಆರ್.ಪೇಟೆ ತಾಲೂಕು ಸಾರ್ವಜನಿಕರ ಆಸ್ಪತ್ರೆಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಎಂ. ನಳಿನ ಕುಮಾರಿಯವರು ದಿಢೀರ್ ಭೇಟಿ ನೀಡಿ ಅವಧಿ ಮೀರಿದ ಔಷಧಿಗಳನ್ನು ಕಂಡು ವೈದ್ಯರನ್ನು ತರಾಟೆಗೆ ತೆಗೆದುಕೊಂಡರು.

ಆಸ್ಪತ್ರೆಯ ಔಷಧ ಸಂಗ್ರಹಾಲಯದಲ್ಲಿ ಹಲವು ಔಷಧಿಗಳು ಅವಧಿ ಮೀರಿದ್ದವು. ಅವನ್ನು ಪರಿಶೀಲಿಸಿದ ನ್ಯಾಯಾಧೀಶರಾದ ನಳಿನ ಕುಮಾರಿಯವರು, ಏಕೆ ಇಷ್ಟೊಂದು ಅವಧಿ ಮೀರಿದ ಔಷಧಗಳನ್ನು ಇಲ್ಲಿಟ್ಟುಕೊಂಡಿದ್ದೀರಿ, ಏಕೆ ಇನ್ನೂ ನಾಶ ಮಾಡಿಲ್ಲ.ಒಂದು ವೇಳೆ ಜನರಿಗೆ ನೀಡಿದರೆ ಹೇಗೆ, ವಿಷವಾಗುವುದಿಲ್ಲವೇ ಎಂದು ಆಸ್ಪತ್ರೆಯ ವೈದ್ಯರನ್ನು ತರಾಟೆಗೆ ತೆಗೆದುಕೊಂಡು, ಮೊದಲು ಅವಧಿ ಮೀರಿದ ಔಷಧಗಳನ್ನು ನಾಶಪಡಿಸಲು ಸೂಚನೆ ನೀಡಿದರು.

ನಂತರ ಹೆರಿಗೆ ವಿಭಾಗ, ಶಸ್ತ್ರ ಚಿಕಿತ್ಸೆ ವಿಭಾಗ,ಆಸ್ಪತ್ರೆ ದಾಖಲಾತಿ ವಿಭಾಗದ ಸ್ಥಳ ಪರಿಶೀಲನೆ ನಡೆಸಿ ತುರ್ತು ಚಿಕಿತ್ಸಾ ವಿಭಾಗದಲ್ಲಿ ಸ್ವಚ್ಛತೆ ಇಲ್ಲದನ್ನು ಕಂಡು ಸ್ವಚ್ಛತೆಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ನ್ಯಾಯಾಧೀಶರಾದ ಓಂಕಾರ ಮೂರ್ತಿ, ಸಮೀರ್ ಪಿ. ನಂದ್ಯಾಲ, ಆಸ್ಪತ್ತೆ ಆಡಳಿತ ಅಧಿಕಾರಿ ಡಾ. ಶಿವಕುಮಾರ್, ತಾಲೂಕು ವೈದ್ಯಾಧಿಕಾರಿ ಡಾ. ಮಧುಸೂದನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!