Monday, May 20, 2024

ಪ್ರಾಯೋಗಿಕ ಆವೃತ್ತಿ

ಮೋದಿ ಏಟಿಗೆ ರಾಹುಲ್ ಗಾಂಧಿಯ ಆತ್ಮವಿಶ್ವಾಸದ ತಿರುಗೇಟು!!

ತೆಲಂಗಾಣದ ವೇಮುಲವಾಡದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರಾಹುಲ್ ಗಾಂಧಿಯ ವಿರುದ್ಧ ಸುಳ್ಳಿನ ವಾಗ್ದಾಳಿ ನಡೆಸಿದ್ದರು. ಮೋದಿಯವರ ಸುಳ್ಳಿನ ಏಟಿಗೆ ರಾಹುಲ್ ಗಾಂಧಿ ನೀಡಿದ ಸತ್ಯದ ತಿರುಗೇಟನ್ನು ಕಂಡು ದೇಶದ ಮಾಧ್ಯಮಗಳೇ ಹೊಗಳುತ್ತಿವೆ. ಚುನಾವಣೆ ಸಂದರ್ಭದಲ್ಲಿ ಮೋದಿಯವರು ಹತಾಶರಾಗಿ ತನ್ನದೇ ಸ್ನೇಹಿತರನ್ನು ಚುನಾವಣಾ ಕಣದಲ್ಲಿ ಎಳೆದು ತಂದು ಹಾಸ್ಯಾಸ್ಪದರಾಗಿದ್ದಾರೆ ಎಂಬುದನ್ನು ದೇಶದ ಮಾಧ್ಯಮಗಳೇ ವಿಶ್ಲೇ‍ಷಣೆ ಮಾಡುತ್ತಿವೆ.

ಕಳೆದ ಹತ್ತು ವರ್ಷಗಳ ಹಿಂದೆ ಕೆಲವೇ ಸಾವಿರ ಕೋಟಿಗಳ ಒಡೆಯ ಗುಜರಾತಿನ ಗೌತಮ್ ಅದಾನಿ,  ಮೋದಿಯವರ ಸಹಕಾರದಿಂದ ಇಂದು ದೇಶದ ಪ್ರಥಮ ಶ್ರೀಮಂತ ಎನಿಸಿಕೊಂಡಿದ್ದಾರೆಂಬುದು ದೇಶದ ಜನರಿಗೆ ಗೊತ್ತಿರುವ ಸಂಗತಿ. ಅಂಬಾನಿ ಕೂಡ ಮೋದಿಯವರ ಪರಮಾಪ್ತ, ಇದೆಲ್ಲ ಗೊತ್ತಿದ್ದರೂ ಮೋದಿಯವರು ನಿನ್ನೆ ತೆಲಂಗಾಣದಲ್ಲಿ ಆಡಿದ ಮಾತುಗಳನ್ನು ಪ್ರಧಾನ ಮಂತ್ರಿ ಹುದ್ದೆಗೆ ಶೋಭೆ ತರುವುದಿಲ್ಲ ಎನ್ನುವುದಂತೂ ಸತ್ಯ.

ಮೋದಿಯವರ ಮಾತಿಗೆ ಕೆರಳಿರುವ ಕಾಂಗ್ರೆಸ್ ನಾಯಕರು ಮೇ ಒಂದರಿಂದ ಇದುವರೆಗೂ ನಡೆದ ಎಲ್ಲಾ ಚುನಾವಣಾ ಸಭೆಗಳಲ್ಲಿ ರಾಹುಲ್ ಗಾಂಧಿಯವರು ಅದಾನಿ, ಅಂಬಾನಿ ವಿರುದ್ಧ ಮಾತನಾಡಿರುವ ವೀಡಿಯೋಗಳನ್ನು ದೇಶದ ಜನರ ಮುಂದಿಡುವ ಮೂಲಕ ಮೋದಿಯವರ ಸುಳ್ಳನ್ನು ಬಹಿರಂಗ ಮಾಡಿದ್ದಾರೆ.

ಮೋದಿಯವರ ತೆಲಂಗಾಣದಲ್ಲಿ “ಕಳೆದ 5 ವರ್ಷಗಳಿಂದ ರಾಹುಲ್ ಗಾಂಧಿ ಅಂಬಾನಿ – ಅದಾನಿ ಜಪ ಮಾಡುತ್ತಿದ್ದರು. ಆದರೆ, ಚುನಾವಣೆ ಘೋಷಣೆಯಾದ ಬಳಿಕ ಅಂಬಾನಿ-ಅದಾನಿಗೆ ಗುಂಡು ಹೊಡೆಯುವುದನ್ನು ನಿಲ್ಲಿಸಿದ್ದಾರೆ. ನಾನಿವತ್ತು ತೆಲಂಗಾಣದ ಮಣ್ಣಿನಿಂದ ಕೇಳುತ್ತಿದ್ದೇನೆ… ಉತ್ತರ ಹೇಳಿ, ಈ ಚುನಾವಣೆಗೆ ಅಂಬಾನಿ-ಅದಾನಿಯಿಂದ ಎಷ್ಟು ಹಣ ಪಡೆದಿದ್ದೀರಿ? ಎಷ್ಟು ಕಪ್ಪು ಹಣ ಬಂದಿದೆ. ಅಂಬಾನಿ-ಅದಾನಿ ಟೆಂಪೋದಲ್ಲಿ ಹಣ ತುಂಬಿ ಕಳಿಸಿದ್ದಾರಾ? ಯಾಕೆ ಮೌನವಾಗಿದ್ದೀರಾ?” ಎಂದು ಪ್ರಶ್ನಿಸಿದ್ದರು.

ಇದಕ್ಕೆ ವಿಡಿಯೋ ಹೇಳಿಕೆಯ ಮೂಲಕ ತಿರುಗೇಟಿನ ಉತ್ತರ ನೀಡಿರುವ ರಾಹುಲ್ ಗಾಂಧಿ, “ನಮಸ್ಕಾರ ಮೋದಿಜೀಯವರೇ ಏನು ಸ್ವಲ್ಪ ಹೆದರಿದ್ದೀರಾ? ಸಾಮಾನ್ಯವಾಗಿ ನೀವು ಯಾವಾಗಲೂ ನಾಲ್ಕು ಗೋಡಿ ಮಧ್ಯೆ ಅಂಬಾನಿ- ಅದಾನಿ ಬಗ್ಗೆ ಮಾತನಾಡುತ್ತಿದ್ದಿರಿ. ಆದರೆ, ಇಂದು ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ್ದೀರಿ. ಅವರು ಟೆಂಪೋದಲ್ಲಿ ಹಣ ಕಳಿಸ್ತಾರೆ ಎಂದು ನಿಮಗೆ ಗೊತ್ತು. ಇದು ನಿಮ್ಮ ಸ್ವಂತ ಅನುಭವನಾ?

ಒಂದು ಕೆಲಸ ಮಾಡಿ, ಇದನ್ನು ಸಿಬಿಐ,ಇಡಿಗೆ ಕೊಡಿ. ಸಂಪೂರ್ಣ ತನಿಖೆ ನಡೆಸಿ. ಆದಷ್ಟು ಬೇಗ ಈ ಕೆಲಸ ಮಾಡಿಸಿ,ಪೂರ್ತಿ ವಿಷಯ ತಿಳಿದುಕೊಳ್ಳಿ. ಹೆದರಬೇಡಿ. ನಾನು ಮತ್ತೊಮ್ಮೆ ಹೇಳುತ್ತೇನೆ, ಮೋದಿಯವರು ಅಂಬಾನಿ-ಅದಾನಿಗೆ ಎಷ್ಟು ಹಣ ಕೊಟ್ಟಿದ್ದಾರೋ, ಅಷ್ಟೇ ಹಣವನ್ನು ನಾವು ಭಾರತದ ಬಡಜನರಿಗೆ ನೀಡುತ್ತೇವೆ. ಮಹಾಲಕ್ಷಿ ಯೋಜನೆ, ಉದ್ಯೋಗ ಖಾತರಿ ಯೋಜನೆಗಳ ಮೂಲಕ ಕೋಟ್ಯಾಂತರ ಲಕ್ಷಾಧಿಪತಿಗಳನ್ನು ಸೃಷ್ಟಿಸುತ್ತೇವೆ. ನರೇಂದ್ರ ಮೋದಿಯವರೇ ನೀವು 22 ಜನರನ್ನು ಕೋಟ್ಯಾಧಿಪತಿ ಮಾಡಿದ್ದಾರೆ.

ಆದರೆ, ನಾವು ಕೋಟ್ಯಾಂತರ ಜನರನ್ನು ಲಕ್ಷಾಧಿಪತಿ ಮಾಡಲಿದ್ದೇವೆ” ಎಂದು ಪ್ರಧಾನಿಗೆ ತಿರುಗೇಟು ನೀಡುವ ಮೂಲಕ ಸತ್ಯದ ಅನಾವರಣ ಮಾಡಿರುವುದರ ಮೂಲಕ ದಿಟ್ಟ ನಾಯಕ ಎನ್ನುವುದನ್ನು ಜನರಿಗೆ ಮುಟ್ಟಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ,ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.

ರಾಹುಲ್ ಗಾಂಧಿಯ ಈ ವಿಡಿಯೋವನ್ನು ಸಾವಿರಾರು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ರಾಹುಲ್ ಗಾಂಧಿಯ ಅಧಿಕೃತ ಎಕ್ಸ್ ಖಾತೆಯಲ್ಲಿ ಅಪ್ಲೋಡ್ ಮಾಡಲಾದ ವಿಡಿಯೋ 3.7 ಮಿಲಿಯನ್‌ಗೂ ಅಧಿಕ ಜನರಿಗೆ ತಲುಪಿದೆ.

ಮೋದಿಯವರು ರಾಹುಲ್ ಗಾಂಧಿಯ ಮೇಲೆ ಆರೋಪ ಹೊರಿಸಲು ತನ್ನದೇ ಮಿತ್ರರನ್ನು  ಬಳಸಿಕೊಳ್ಳುತ್ತಿರುವು ದನ್ನು ನೋಡಿದರೆ, ಅವರು ಎಂತಹ ಕೆಳದರ್ಜೆಯ ರಾಜಕಾರಣ ಮಾಡುತ್ತಿದ್ದಾರೆ ಎಂಬುದನ್ನು ಜನರೇ ಪ್ರಶ್ನೆ ಮಾಡುತ್ತಿರುವುದಂತು ಸುಳ್ಳಲ್ಲ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!