Friday, September 20, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು| ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವಲ್ಲಿ ವಿಫಲ: ಡಿ.ಸಿ.ತಮ್ಮಣ್ಣ

ಪ್ರಭು ವಿ.ಎಸ್

ಮದ್ದೂರು ತಾಲೂಕಿನ ಕೆರೆ, ಕಟ್ಟೆಗಳಿಗೆ ನೀರು ತುಂಬಿಸುವಲ್ಲಿ ಹಾಗೂ ನಾಲೆಗಳಿಗೆ ನೀರು ಹರಿಸುವಲ್ಲಿ ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲೆಯ ಶಾಸಕರು ಯಾವುದೇ ಕ್ರಮ ಕೈಗೊಳ್ಳದೆ ಕಾಲಹರಣ ಮಾಡುವ ಮೂಲಕ ರೈತ ವಿರೋಧಿ ಅನುಸರಿಸುತ್ತಿದ್ದಾರೆ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅಕ್ರೋಶ ವ್ಯಕ್ತಪಡಿಸಿದರು.

ಮದ್ದೂರು ಪಟ್ಟಣದ ಕಾವೇರಿ ನೀರಾವರಿ ನಿಗಮದ ಕಚೇರಿಗೆ ಶುಕ್ರವಾರ ರೈತರೊಂದಿಗೆ ಆಗಮಿಸಿ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ನಂಜುಂಡೇಗೌಡ, ಸಹಾಯಕ ಕಾರ್ಯಪಾಲಕ ಅಭಿಯಂತರ ನಾಗರಾಜು ಅವರನ್ನು ತರಾಟೆಗೆ ತೆಗೆದುಕೊಂಡು ನಂತರ ಪತ್ರಕರ್ತರೊಂದಿಗೆ ಮಾತನಾಡಿ, ಕೆಆರ್‌ಎಸ್ ನೀರು ವ್ಯರ್ಥವಾಗಿ ನದಿಯಲ್ಲಿ ಹರಿದು ತಮಿಳುನಾಡಿಗೆ ಸೇರುತ್ತಿದ್ದರು ಕೊನೆ ಭಾಗಕ್ಕೆ ನೀರು ಹರಿಸಲು ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ತನಿಖೆಗೆ ಆಗ್ರಹ

ಶ್ರೀ ಹೊಳೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ನಿರ್ಮಿಸಿದ್ದ ತಡೆಗೋಡೆಯನ್ನು 90 ಲಕ್ಷದಲ್ಲಿ ನಿರ್ಮಾಣವಾಗಿತ್ತು. ಆ ಕಳಪೆ ಕಾಮಗಾರಿಯಿಂದ ನದಿಯಲ್ಲಿ ನೀರು ಹೆಚ್ಚು ಹರಿದು ತಡೆ ಗೋಡೆ ಕುಸಿದು ಬಿದ್ದಿತ್ತು. ಮತ್ತೆ ಮೂರು ಕೋಟಿ ಹಣ ಬಿಡುಗಡೆ ಮಾಡಿ ಕೆಲಸ ಮಾಡಿಸುತ್ತಿದ್ದಾರೆ. ಆ ವಿಚಾರದಲ್ಲಿ ಕಳಪೆ ಕಾಮಗಾರಿ ಬಗ್ಗೆ ತನಿಖೆ ಮಾಡಿಸಿ ಸಂಬಂಧಪಟ್ಟ ಗುತ್ತಿಗೆದಾರರ ಮೇಲೆ ಕ್ರಮ ಯಾಕೆ ತೆಗೆದುಕೊಳ್ಳಲಿಲ್ಲ ಎಂದು ಪ್ರಶ್ನೆ ಮಾಡಿದರು, ಇದರ ಬಗ್ಗೆ ತನಿಖೆ ಆಗಬೇಕೆಂದು ಆಗ್ರಹಿಸಿದರು

ನಾನು ಶಾಸಕ, ಸಚಿವರಾಗಿದ್ದ ವೇಳೆ ರೈತರ ಅನುಕೂಲಕ್ಕಾಗಿ ಹಲವು ಹೊಸ ಯೋಜನೆಗಳ ಪಟ್ಟಿಮಾಡಿ ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರ ಗಮನಕ್ಕೆ ತಂದು ತುರ್ತಾಗಿ ಕಾಮಗಾರಿ ಕೈಗೊಳ್ಳುವಂತೆ ಮನವಿ ಮಾಡಿದ್ದರು ಇದುವರೆಗೂ ಯಾವುದೇ ಕಾಮಗಾರಿ ನಡೆಯುತ್ತಿಲ್ಲ. ಸಿದ್ದರಾಮಯ್ಯನವರೇ ಮತ್ತೆ ಮುಖ್ಯಮಂತ್ರಿಯಾಗಿದ್ದರು ಕಾಮಗಾರಿ ಪ್ರಾರಂಭ ಮಾಡದಿರುವುದು ಶೋಚನೀಯ ಸಂಗತಿ ಎಂದರು.

ಕೆಆರ್‌ಎಸ್‌ನಿಂದ ನದಿಗೆ ಬಿಡುವ ನೀರನ್ನು ಜಿಲ್ಲೆಯ ನಾಲೆಗಳಿಗೆ ಹರಿಸಿದ್ದರೆ ಕೆರೆಗಳು ತುಂಬುತ್ತಿತ್ತು, ನೀರಿಗೆ ಈ ರೀತಿಯ ಹಾಹಾಕಾರ ಬರುತ್ತಿರಲಿಲ್ಲ. ರೈತರ ಜಮೀನುಗಳಿಗೆ ನೀರು ಬಿಡಲು 1 ತಿಂಗಳ ಕಾಲ ಸಮಯ ಬೇಕೇ ಎಂದರು.

ಕೆರೆಗೆ ನೀರು ತುಂಬಿಸಲು ಯಾವುದೇ ಯೋಜನೆ ತಂದಿಲ್ಲ. 90 ಕೋಟಿ ರೂ. ವೆಚ್ಚದಲ್ಲಿ ನಾಲೆಗಳ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಹಾಗೂ ಪ್ರತ್ಯೇಕವಾಗಿ ಪೈಪ್ ಲೈನ್ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಸಿದ್ಧಪಡಿಸಿ ತಾಲೂಕಿಗೆ 8.22 ಕೋಟಿ ಅನುದಾನದಲ್ಲಿ ಪೈಪ್ ಲೈನ್ ಅಳವಡಿಸಿ ಅಭಿವೃದ್ಧಿಗೊಳಿಸಬೇಕೆಂಬ ಹೊಸ ಯೋಜನೆಯನ್ನು ಕೈಗೊಂಡಿತಾದರೂ ಹಣ ಬಿಡುಗಡೆ ಯಾಗದೆ ಕಾರ್ಯರೂಪಕ್ಕೆ ಬರದೆ ನೀರಾವರಿ ಇಲಾಖೆಯಲ್ಲಿ ಸಿದ್ಧಪಡಿಸಿದ ಕ್ರಿಯಾ ಯೋಜನೆ ನೀರಾವರಿ ನಿಗಮದಲ್ಲೇ ದೂಳು ಹಿಡಿಯುತ್ತಿದೆ ಅದು ಜಾರಿಗೆ ಬಂದಿದ್ದರೆ ಕಡಿಮೆ ಅವಧಿಯಲ್ಲಿ ಮದ್ದೂರು ತಾಲೂಕಿನ ಎಲ್ಲಾ ಕೆರೆಗಳಿಗೆ ಬೇಗ ನೀರು ತುಂಬಿಸಬಹುದಾಗಿತ್ತು ಎಂದರು.

ರೈತರ ಕೃಷಿ ಬಗ್ಗೆ, ನೀರಾವರಿ, ಅಭಿವೃದ್ಧಿ ಬಗ್ಗೆ ಯಾರೊಬ್ಬರೂ ಚರ್ಚಿಸುತ್ತಿಲ್ಲ ಭೂಮಿಯ ಪರಿಸ್ಥಿತಿ ಏನಾಗಿದೆ ಎಂಬುದರ ಅರಿವಿದೆಯಾ 30 ಸಾವಿರ ಹೆಕ್ಟೇರ್ ಜೋಳು ಭೂಮಿಯಾಗಿದೆ ಅದನ್ನು ಸರಿಪಡಿಸಲು ಏನು ಕ್ರಮ ತೆಗೆದುಕೊಂಡಿದ್ದಾರೆ ಎಂಬುವುದರ ಬಗ್ಗೆ ಕೃಷಿ ಸಚಿವರಿಗೆ ಗೊತ್ತಿದೆಯೇ ಎಂದರು.

ಮಾಲಗಾರನಹಳ್ಳಿ ಗ್ರಾಮದ ರಾಮಲಿಂಗಯ್ಯ, ಪ್ರಸನ್ನ, ಸುರೇಶ, ಕೆಂಪಣ್ಣ, ಸುಧೀರ್, ರಾಜೇಶ, ಶೇಖರ, ಶಿವಣ್ಣ, ಮರಿಅಂಕ, ಕೃಷ್ಣಸ್ವಾಮಿ, ಮಲ್ಲವರಾಜು, ಶಂಕರ್, ಅಮರ್‌ದೇವರಾಜು, ಕಾಳಿರಯ್ಯ, ನಾಗರಾಜು, ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!