Thursday, September 19, 2024

ಪ್ರಾಯೋಗಿಕ ಆವೃತ್ತಿ

ರೈತರ 11 ಬೇಡಿಕೆ ಈಡೇರಿಸಲು ಸಿಎಂ ಅಸ್ತು : ಪ್ರತಿಭಟನೆ ಸ್ಥಗಿತ

ರೈತರ 11 ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿರುವುದರಿಂದ ಮಾ.12ರಂದು ಮಂಡ್ಯದಲ್ಲಿ ನಡೆಸಲು ಉದ್ದೇಶಿಸಿದ್ದ ಬೃಹತ್ ಚಳವಳಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಸರ್ವೋದಯ ಕರ್ನಾಟಕ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎನ್.ಗೌಡ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮಾ.8ರಂದು ಸಿಎಂ ಬೊಮ್ಮಾಯಿ ಅವರು ಕರೆದಿದ್ದ ಸಭೆಗೆ ಹಲವು ರೈತ ಮುಖಂಡರು ಭಾಗವಹಿಸಿ, ಒಟ್ಟು 17 ಬೇಡಿಕೆಗಳನ್ನು ಮುಂದಿಟ್ಟಿದ್ದೇವು, ಇವುಗಳ ಪೈಕಿ 11 ಬೇಡಿಕೆಗಳನ್ನು ಈಡೇರಿಸಲು ಸಮ್ಮತಿ ಸೂಚಿಸಿದರು ಎಂದು ವಿವರಿಸಿದರು.

ಕೊಳ್ಳೇಗಾಲದ ಜಾಗೇರಿಯಲ್ಲಿ 4,500 ಎಕರೆ ಪ್ರದೇಶದ ಬಗರ್ ಹುಕುಂ ಸಕ್ರಮವಾಗಿ ನಿರಂತರವಾಗಿ ಮಾಡುತ್ತಿದ್ದಹೋರಾಟಕ್ಕೆ, ತಲೆಬಾಗಿದ ಮುಖ್ಯಮಂತ್ರಿಗಳು ಈ ಪ್ರದೇಶದ ಸರ್ವೇ ಕಾರ್ಯವನ್ನು ಶೀರ್ಘದಲ್ಲಿ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಅದರ ವಿವರವನ್ನು ಕ್ಯಾಬಿನೇಟ್ ಗೆ ನೀಡಲು ಹೇಳಿದರು. ಇದರಿಂದ 2,500 ರೈತ ಕುಟುಂಬಗಳಿಗೆ ಅನುಕೂಲವಾಗಲಿದೆ. ಕರ ನಿರಾಕರಣೆ ಚಳವಳಿಯ ಸಂದರ್ಭದಲ್ಲಿ ಉಳಿಸಿಕೊಂಡಿದ್ದ ಬಾಕಿ ವಿದ್ಯುತ್ ಬಿಲ್ ಅನ್ನು ಮನ್ನಾ, ಮಂಡ್ಯದ ಮೈಷುಗರ್ ಸಶಕ್ತೀಕರಣಕ್ಕಾಗಿ ಅವಶ್ಯಕತೆ ಇರುವ ಹಣವನ್ನು ತ್ವರಿತಗತಿಯಲ್ಲಿ ಬಿಡುಗಡೆ ಮಾಡಿ ಕಾರ್ಖಾನೆಯಲ್ಲಿ ಎಥನಾಲ್ ಘಟಕವನ್ನು ಸ್ಥಾಪನೆ ಮಾಡಲು ಮುಖ್ಯಮಂತ್ರಿಗಳು ಒಪ್ಪಿದರು ಎಂದು ವಿವರಿಸಿದರು.

ಬಾಗಲಕೋಟೆಯ ಬಾದಾಮಿಯಲ್ಲಿರುವ ಶ್ರೀವೀರ ಪುಲಿಕೇಶಿ ಸಹಕಾರಿ ಬ್ಯಾಂಕ್‌ ರೈತರಿಗೆ ನೀಡುತ್ತಿದ್ದ ಕಿರುಕುಳದ ಬಗ್ಗೆ ಗಮನಕ, ತಂದಾಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕಬ್ಬು ಬೆಳೆಗೆ “Harvesting & Cutting ಸಂಬಂಧಿಸಿದಂತೆ ಕಾರ್ಖಾನೆಯವರಿಂದ “Ex-field” ಮಾಡಿಸಲು ಒಪ್ಪಿಕೊಂಡರು. ಪ್ರಸರಣ ತಂತಿಗಳನ್ನು ತ್ವರಿತಗತಿಯಲ್ಲಿ ಸರಿಮಾಡುವುದರ ಮೂಲಕ ಬೇಸಿಗೆಯಲ್ಲಿ ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಅಭಾವ ಕಾಡದಂತೆ ಮುನ್ನೆಚ್ಚರಿಕೆ ವಹಿಸುವುದಾಗಿ ಹೇಳಿದರು.

ಗೋ‍ಷ್ಠಿಯಲ್ಲಿ ಸರ್ವೋದಯ ಕರ್ನಾಟಕ ಪಕ್ಷದ  ಮಂಡ್ಯ ವಿಧಾನಸಭಾ ಅಭ್ಯರ್ಥಿ ಎಸ್.ಸಿ.ಮಧುಚಂದನ್, ಮುಖಂಡರಾದ ಲಿಂಗಾಪ್ಪಾಜಿ, ಚಂದ್ರು, ಕೆ.ಜಿ.ರಾಮಕೃಷ್ಣ, ರವಿಕುಮಾರ್ , ಜಿ.ವಿ.ಶಂಕರ್, ವಿಜಯಕುಮಾರ್ ಹಾಗೂ ಸಂತೋಷ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!