Saturday, May 18, 2024

ಪ್ರಾಯೋಗಿಕ ಆವೃತ್ತಿ

ವಾಸ್ತವ ಸತ್ಯ ಹೇಳುವುದು ಮಾಧ್ಯಮಗಳ ಕೆಲಸವಾಗಲಿ : ಚಲುವರಾಯಸ್ವಾಮಿ


  • ಮಂಡ್ಯನಗರದಲ್ಲಿ ‘ನುಡಿ ಕರ್ನಾಟಕ.ಕಾಂ’ ಕಚೇರಿ ಉದ್ಘಾಟನೆ

  • ನುಡಿ ಕರ್ನಾಟಕ.ಕಾಂ ಮಾಧ್ಯಮಕ್ಕೆ ಶುಭ ಹಾರೈಸಿದ ಹಲವು ಗಣ್ಯರು

ದೇಶದಲ್ಲಿ ಯಾವುದೇ ಪಕ್ಷ ಹಾಗೂ ವ್ಯಕ್ತಿಗಳಿಗಿಂತ ಜನರ ಸಮಸ್ಯೆಗಳನ್ನು ಆಳುವ ಸರ್ಕಾರಗಳ ಗಮನಕ್ಕೆ ತರುವುದು ಮಾಧ್ಯಮಗಳ ಕೆಲವಾಗಲಿ ಎಂದು ಕೆಪಿಸಿಸಿ ಉಪಾಧ್ಯಕ್ಷ  ಎನ್.ಚಲುವರಾಯಸ್ವಾಮಿ ಹೇಳಿದರು.

ಮಂಡ್ಯನಗರದ ಅಶೋಕನಗರ 4ನೇ ತಿರುವಿನಲ್ಲಿ ಗುರುವಾರ ‘ನುಡಿ ಕರ್ನಾಟಕ.ಕಾಂ’ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಡಿಜಿಟಲ್ ಯುಗದಲ್ಲಿ ಮಾಧ್ಯಮಗಳು ಅತಿ ವೇಗವಾಗಿ ಜನರನ್ನು ತಲುಪುತ್ತಿವೆ. ಆದರೆ ಹಿಂದೆ ಮುದ್ರಣ ಮಾಧ್ಯಮದಲ್ಲಿ ಸರ್ಕಾರ ಅಥವಾ ಯಾವುದೆ ಜನಪ್ರತಿನಿಧಿಗಳ ವಿರುದ್ಧ ವರದಿ ಪ್ರಕವಾದ ಸಂದರ್ಭದಲ್ಲಿ ಆ ಸರ್ಕಾರವೇ ಉರುಳಿದ ಹಾಗೂ ಜನಪತ್ರಿನಿಧಿಯೇ ರಾಜೀನಾಮೆ ನೀಡಿದ ಹಲವು ನಿದರ್ಶನಗಳಿವೆ. ಆದರೆ ಪ್ರಸ್ತುತ ದಿನಗಳಲ್ಲಿ ಮಾಧ್ಯಮಗಳಿಗೆ ಹೆದರಿ ರಾಜೀನಾಮೆ ನೀಡುವ ನೈತಿಕತೆಯು ಮಾಯವಾಗಿದೆ. ಇದಕ್ಕೆ ಯಾರು ಕಾರಣರು ಎಂಬುದನ್ನು ನಾವೆಲ್ಲ ವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದು ನುಡಿದರು.

ಎಂತಹ ಸಂದರ್ಭದಲ್ಲೂ ವಾಸ್ತವ ಸತ್ಯವನ್ನು ಹೇಳುವ ಕಾರ್ಯವನ್ನು ಕೈ ಬಿಡಬಾರದು, ಹಾಗೇ ಮಾಡಿದರೆ ಮುಂದೆ ಅದೇ ಅಪಾಯಕಾರಿಯಾಗಿ ಸಂಭವಿಸುವ ದಿನಗಳು ಬರುತ್ತವೆ. ಹಾಗೂ ನ್ಯಾಯ, ನಿಷ್ಠೂರ, ಪ್ರಾಮಾಣಿಕವಾಗಿ ಮಾಧ್ಯಮಗಳು ಕಾರ್ಯ ನಿರ್ವಹಿಸಬೇಕೆಂದರು.

ಕಾಂಗ್ರೆಸ್ ಮುಖಂಡ ರವಿಕುಮಾರ್ ಗಣಿಗ ಮಾತನಾಡಿ, ಇತ್ತೀಚೆಗೆ ಉದ್ಯಮಿ ಅದಾನಿ ವಿರುದ್ಧ ಪ್ರಕಟವಾದ ಹಿಂಟೆನ್ ಬರ್ಗ್ ವರದಿಯಿಂದಾಗಿ ಷೇರು ಪೇಟೆಯಲ್ಲಿ ಅಲ್ಲೋಲ ಕಲ್ಲೋಲ ಸಂಬವಿಸಿ, ಅದಾನಿಯ 11 ಲಕ್ಷ ಕೋಟಿ ರೂ.ಗಳ ಸಂಪತ್ತು ಕರಗಿ ಹೋಯಿತು. ಇದು ಮಾಧ್ಯಮ ಕ್ಷೇತ್ರಕ್ಕೆ ಇರುವ ತಾಕತ್ತು. ಮಾಧ್ಯಮಗಳು ಸತ್ಯ ಹೇಳಿದಾಗ ಜನರು ಅದಕ್ಕೆ ಉತ್ತಮ ರೀತಿಯಲ್ಲಿ ಸ್ಪಂದನೆ ನೀಡುತ್ತಾರೆ ಎಂದು ಹೇಳಿದರು.

ಸಮಾರಂಭದಲ್ಲಿ ಈದಿನ.ಕಾಂ ನ ಮುಖ್ಯಸ್ಥ ಡಾ.ಹೆಚ್.ವಿ.ವಾಸು ಪ್ರಧಾನ ಭಾ‍ಷಣ ಮಾಡಿದರು. ಸಮಾರಂಭದಲ್ಲಿ ಶಾಸಕರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ ಭಾಗವಹಿಸಿ ಮಾತನಾಡಿ ‘ನುಡಿ ಕರ್ನಾಟಕ.ಕಾಂ’ಗೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡರಾದ ಉಮ್ಮಡಹಳ್ಳಿ ಶಿವಪ್ಪ, ವಿಜಯ್ ರಾಮೇಗೌಡ, ಅಮರಾವತಿ ಚಂದ್ರಶೇಖರ್, ಬಿಜೆಪಿ ಮುಖಂಡ ಅಶೋಕ್ ಜಯರಾಂ, ಪ್ರಗತಿಪರ ವಕೀಲ ಬಿ.ಟಿ.ವಿಶ್ವನಾಥ್, ಗ್ರಾ.ಪಂ. ಮಾಜಿ ಅಧ್ಯಕ್ಷ ನ.ಲಿ.ಕೃಷ್ಣ, ಕರ್ನಾಟಕ ಜನಶಕ್ತಿ ಸಂಘಟನೆಯ ಪೂರ್ಣಿಮ, ನೆಲದನಿ ಬಳಗದ ಮಂಗಲ ಲಂಕೇಶ್, ಕನ್ನಡ ಸೇನೆಯ ಮಂಜುನಾಥ್, ನುಡಿ ಕರ್ನಾಟಕ.ಕಾಂ ಸಂಪಾದಕ ಎನ್.ನಾಗೇಶ್, ಸಹ ಸಂಪಾದಕರಾದ ಸಂತೋಷ್ ಜಿ., ಸುಬ್ರಮಣ್ಯ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಸಿ.ಮಂಜುನಾಥ್ ಗಣ್ಯರನ್ನು ಸ್ವಾಗತಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!