Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ| ಚಾಂಷುಗರ್‍ಸ್ ವಿರುದ್ದ ರೈತರ ಆಕ್ರೋಶ

ನೀರಿಲ್ಲದೆ ಒಣಗುತ್ತಿರುವ ಕಬ್ಬು ಕಟಾವು ಮಾಡಿ ಸಾಗಾಣಿಕೆ ಮಾಡಲು ಅಡ್ಡಿಪಡಿಸುತ್ತಿರುವ ಚಾಂಷುಗರ್ ಕಾರ್ಖಾನೆ ವಿರುದ್ಧ ಕಬ್ಬು ಬೆಳೆಗಾರರು ಮಳವಳ್ಳಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಳೆ ಅಭಾವ ದಿಂದ ಜಲಾಶಯದಲ್ಲಿ ನೀರಿಲ್ಲದೆ ನಾಲೆಗಳಲ್ಲಿ ನೀರು ಹರಿಯದ ಪರಿಣಾಮ ಬೆಳೆದು ನಿಂತಿರುವ ಕಬ್ಬು ಒಣಗುತ್ತಿದ್ದು,ಇದೇ ಪರಿಸ್ಥಿತಿ ಮುಂದುವರೆದರೆ ಕಬ್ಬು ಕರಕಲಾಗಿ ನಷ್ಟವಾಗುತ್ತದೆ ಹಾಗಾಗಿ ಕಬ್ಬನ್ನು ಅವಧಿಪೂರ್ವ ವಾಗಿ ಕಟಾವು ಮಾಡಿ ಬೇರೆ ಕಾರ್ಖಾನೆಗೆ ಸಾಗಾಣಿಕೆ ಮಾಡಲು ರೈತರು ಮುಂದಾಗಿದ್ದಾರೆ, ಆದರೆ ಒಪ್ಪಿಗೆ ಪಡೆದುಕೊಂಡಿರುವ ಚಾಂಷುಗರ್ ಕಾರ್ಖಾನೆ ಅಡ್ಡಿಪಡಿಸಿ ಜೂನ್, ಜುಲೈನಲ್ಲಿ ಕಬ್ಬು ಅರೆಯುವಿಕೆ ಪ್ರಾರಂಭಿಸಲಾಗುವುದು ಆ ಸಂದರ್ಭದಲ್ಲಿ ಕಬ್ಬು ಕಟಾವು ಮಾಡಿ ಎಂದು ಹೇಳುತ್ತಿದ್ದು ನೀರಿಲ್ಲದೆ ಸೊರುಗುತ್ತಿರುವ ಕಬ್ಬು ಉಳಿಯಲಿದೆಯಾ ಎಂಬುದು ರೈತರ ಆತಂಕಕ್ಕೆ ಕಾರಣವಾಗಿದೆ ಎಂದರು.

ಈಗಾಗಲೇ ತಾಲೂಕಿನ ತಳಗವಾದಿ ದೇವಿಪುರ ನೆಲಮಾಕನಹಳ್ಳಿ ಇತರೇ ಗ್ರಾಮಗಳಲ್ಲಿ ಕಬ್ಬು ಕಟಾವು ಮಾಡಿದ್ದು, ಸಾಗಾಣಿಕೆಗೆ ಅವಕಾಶ ಮಾಡಿಕೊಡದ ಹಿನ್ನೆಲೆಯಲ್ಲಿ ಮೂರು ನಾಲ್ಕು ದಿನಗಳಿಂದ ದಿನಗಳಿಂದ ಒಣಗಿ ಹಾಳಾಗುತ್ತಿದೆ.

ಬರ ಪರಿಸ್ಥಿತಿಯಿಂದ ನೀರಿಲ್ಲದೆ ಒಣಗಿರುವ ಕಬ್ಬು ಕಟಾವು ಮಾಡಿ ನಂಜನಗೂಡಿನ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗೆ ಸರಬರಾಜು ಮಾಡಲು ರೈತರು ಮುಂದಾಗಿರುವುದಕ್ಕೆ ಚಾಮುಂಡೇಶ್ವರಿ ಸಕ್ಕರೆ ಕಂಪನಿಯ ಆಡಳಿತ ಮಂಡಳಿ ಅಡ್ಡಿ ಪರಿಸುತ್ತಿರುವ ಧೋರಣೆಯನ್ನು ಖಂಡಿಸಿರುವ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಚಾಲಕ ಎನ್ ಎಲ್ ಭರತ್ ರಾಜ್ ಕಬ್ಬು ಬೆಳೆಗಾರರ ಹಿತ ಕಾಪಾಡಲು ಜಿಲ್ಲಾಡಳಿತ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಳವಳ್ಳಿ ತಾಲೂಕಿನ ತಳಗವಾದಿ ದೇವಿಪುರ ನೆಲಮಾಕನಹಳ್ಳಿ ಮುಂತಾದ ಗ್ರಾಮಗಳಲ್ಲಿ ಕಟಾವಾದ ಕಬ್ಬು
ಮೂರ್ನಾಲ್ಕು ದಿನಗಳಿಂದ ಒಣಗಿ ಹಾಳಾಗುತ್ತಿದ್ದು,ತಳಗವಾದಿ ಗ್ರಾಮದ ರೈತ ಹನುಮಂತು ಕಟಾವು ಮಾಡಿರುವ ಕಬ್ಬು . 25 ಟನ್ ಒಣಗಿ ಹಾಳಾಗಿದೆ ಇದೇ ರೀತಿ ಹಲವು ರೈತರ ಪರಿಸ್ಥಿತಿ ಸಹ ಇದೆ ಆದರೂ ಸಹ ರೈತನ ರಕ್ಷಣೆಗೆ ಬರೆದಿರುವುದು ರೈತ ವಿರೋದಿ ಆಡಳಿತಕ್ಕೆ ಸಾಕ್ಷಿಯಾಗಿದೆ.

ಚಾಮುಂಡೇಶ್ವರಿ ಸಕ್ಕರೆ ಕಂಪನಿ ವ್ಯಾಪ್ತಿಗೆ ಒಳಪಡುವ ಮದ್ದೂರು ಮತ್ತು ಮಳವಳ್ಳಿ ತಾಲೂಕು ಹಾಗೂ ಇತರ ಕಡೆಗಳಲ್ಲಿ ಎಂಟತ್ತು ತಿಂಗಳ ಬೆಳೆದಿರುವ ಕಬ್ಬನ್ನ ನೀರಿಲ್ಲದ ಕಾರಣದಿಂದಾಗಿ ರೈತರು ಕಟಾವು ಮಾಡಲು ಮುಂದಾಗಿರುವ ಸಂದರ್ಭದಲ್ಲಿ ಸರಬರಾಜು ಮಾಡಬಾರದು ನಾವು ಮುಂದೆ ಕಾರ್ಖಾನೆ ಪ್ರಾರಂಭಸಿದಾಗ ನಮಗೆ ಕಬ್ಬು ಬೇಕು ಎಂದು ಅಡ್ಡಿ ಮಾಡುತ್ತಿದ್ದಾರೆ.ಇವರು ಜೂನ್ .ಜುಲೈ ನಲ್ಲಿ ಕಾರ್ಖಾನೆ ಪ್ರಾರಂಭ ಮಾಡುತ್ತಾರೆ ಅಲ್ಲಿಯ ತನಕ ರಣ ಬಿಸಲಿನಲ್ಲಿ ಒಣಗಿ ತರಗಾಗದೆ ಕಬ್ಬು ಉಳಿಯುತ್ತದೆಯೆ ಎಂದು ಪ್ರಶ್ನಿಸಿದ್ದಾರೆ.
ಕಬ್ಬನ್ನು ಈಗಲೇ ಅರೆಯಿರಿ ಇಲ್ಲವೇ ಎಕರೆಗೆ ಐವತ್ತು ಟನ್ ಗೆ ನೀಡಲಾಗುವ ಹಣ ನೀಡುವ ಭರವಸೆ ನೀಡಲಿ ಇಲ್ಲವೆ ನೀರು ಕೊಡಿಸಲಿ ಅಲ್ಲಿಯ ತನಕ ನಾವು ಕಾಯುತ್ತವೆ ಇಲ್ಲವೆ ಇದ್ದರೆ ಕಾರ್ಖಾನೆ ಪ್ರಾರಂಭ ಮಾಡಿ ಕಬ್ಬು ಅರೆಯಲಿ ಎಂದು ಹೇಳಿದ್ದಾರೆ.

ಈಗಾಗಲೇ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರೂ ಸಹ ಕಬ್ಬು ಬೆಳಗಾರರ ಬಗ್ಗೆ ಕಾಳಜಿ ವಹಿಸದಿರುವುದು ಸರಿಯಲ್ಲ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯೂ ಸಹ ಕಾರ್ಖಾನೆಯನ್ನು ಸ್ಥಗಿತ ಮಾಡಿರುವುದರಿಂದ ಇದೀಗ ಕಡಿದಿರುವ ಕಬ್ಬು ಒಣಗಿ ರೈತ ಮತ್ತಷ್ಟು ನೋವಿಗೊಳಗಾಗಿದ್ದಾನೆ ಇವರ ಕಬ್ಬನ್ನ ಚಾಲ್ತಿಯಲ್ಲಿರುವ ಕಾರ್ಖಾನೆಗೆ ಸಾಗಿಸಿ ಎಂಟತ್ತು ತಿಂಗಳ ಬೆಳೆದಿರುವ ಕಬ್ಬು ಬೆಳೆ ಎಷ್ಟಿದೆ ಎಂಬ ಬಗ್ಗೆ ಸರ್ವೇ ಸರ್ವೆ ಮಾಡಿಸಿ ವರದಿ ಆದರಿಸಿ ರೈತರಿಗೆ ಕಟಾವು ಮಾಡಿಕೊಳ್ಳಲು ಯಾವುದೇ ಅಡ್ಡಿ ಮಾಡದಂತೆ ಕಾರ್ಖಾನೆಗೆ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!