Thursday, September 19, 2024

ಪ್ರಾಯೋಗಿಕ ಆವೃತ್ತಿ

ಫ್ಯಾಸಿಸಂ ಎಂದರೆ ಕೋಮುವಾದ ಮಾತ್ರವಲ್ಲ : ಚಿಂತಕ ಶಿವಸುಂದರ್


ಫ್ಯಾಸಿಸಂ ಎಂದರೆ ಬ್ರಾಹ್ಮಣ್ಯದ ಶ್ರೇಷ್ಠತೆಯನ್ನು ಒಪ್ಪಿಕೊಳ್ಳುವುದು

ಹಿಂದು ಮುಸ್ಲಿಂ ಇಬ್ಬರೂ ಭಾರತಾಂಬೆಯ ಕಣ್ಣುಗಳಿದ್ದಂತೆ-ಸಾವರ್ಕರ್

ಜಾತಿ ಧರ್ಮಗಳ ನಡುವೆ ಬೆಂಕಿ ಹಚ್ಚಿ ರಾಜಕಾರಣಿಗಳು ತಮ್ಮ ಚಳಿ ಕಾಯಿಸಿಕೊಳ್ಳುತ್ತಿದ್ದಾರೆ


ಫ್ಯಾಸಿಸಂ ಎಂದರೆ ಬರಿ ಕೋಮುವಾದವಲ್ಲ, ಆಥವಾ ಬಿಜೆಪಿ, ಸಂಘ ಪರಿವಾರ-ಮೋದಿ ಮಾತ್ರವಲ್ಲ. ಫ್ಯಾಸಿಸಂ ಎಂದರೆ ಬ್ರಾಹ್ಮಣ್ಯದ ಶ್ರೇಷ್ಠತೆಯನ್ನು ಒಪ್ಪಿಕೊಳ್ಳುವುದು, ಬಂಡವಾಳವಾದವನ್ನು ಒಪ್ಪಿಕೊಳ್ಳುವುದು. ಫ್ಯಾಸಿಸಂ ಭಾರತದಲ್ಲಿ ಈಗಾಗಲೇ ತನ್ನ ಕರಾಳ ಮುಖವನ್ನು ಎಲ್ಲಾ ಕಡೆ ಪಸರಿಸಿದೆ. ಫ್ಯಾಸಿಸಂ ಅತಿ ಹೆಚ್ಚು ತೀವ್ರವಾಗಿ ವೇಗವಾಗಿ ಭಾರತದಲ್ಲಿ ಹರಡುವುದು ಭಾರತದ ಜನತೆ ಆರ್ಥಿಕ ಸಾಮಾಜಿಕ ರಾಜಕೀಯ ಬಿಕ್ಕಟಿನ ಒತ್ತಡದ ಸಂದರ್ಭದಲ್ಲಿ ಎಂದರು.

ಮಂಡ್ಯದ ಪತ್ರಕರ್ತರ ಭವನದರದಲ್ಲಿ ಹಮ್ಮಿಕೊಂಡಿದ್ದ ಬಿಕ್ಕಟ್ಟಿನಲ್ಲಿ ಭಾರತದ ಬಹುಸಾಂಸ್ಕೃತಿಕ ಸಾಮರಸ್ಯ ಪರಂಪರೆ-ಹಿಂದಿನ ಇತಿಹಾಸ ಮತ್ತು ಮುಂದಿನ ಸವಾಲು ಎಂಬ ಕಾರ್ಯಗಾರದಲ್ಲಿ ಚಿಂತಕ ಶಿವಸುಂದರ್ ವಿಚಾರ ಮಂಡನೆ ಮಾಡುತ್ತಾ ಫ್ಯಾಸಿಸಂ ಎಂದರೆ ತುಳಿತಕ್ಕೊಳಗಾದ ಸಮುದಾಯವನ್ನು, ಅನ್ಯಧರ್ಮೀಯರನ್ನು ರಾಕ್ಷಸೀಕರಣಗೊಳಿಸುವುದು, ಅವರ ಇರುವಿಕೆಯನ್ನು ನಗಣ್ಯ ಮಾಡುವುದು.

ಭಾರತದ ಜನತೆ ಅನ್ಯಧರ್ಮೀಯರ ವಿರುದ್ದವಾಗಿ ಚಿಂತಿಸುವ ಕ್ರಮವನ್ನು ಮತ್ತು ನೈತಿಕವಾಗಿ ಆ ಜನತೆಯನ್ನು ಮನುಷ್ಯರಲ್ಲ, ಅವರು ಸಾಯಲು ಯೋಗ್ಯರು ಎನ್ನುವ ಯೋಚನೆಯನ್ನು ಅಪ್ರಜ್ಙಾಪೂರ್ವಕವಾಗಿ ಬಿತ್ತುವುದೇ ಆಗಿದೆ ಎಂದು ತಿಳಿಸಿದರು.

ದಿನ ನಿತ್ಯದ ಜನರ ಸಮಸ್ಯೆಗಳನ್ನು ಚರ್ಚಿಸುವ ಬದಲು ಜಾತಿ ಧರ್ಮದ ಸುತ್ತಲು ಚರ್ಚಿಸುವಂತೆ, ದೇಶದ ಜನತೆ ಗಲಭೆ ಮಾಡಿಕೊಂಡು ನೈಜ ಸಮಸ್ಯೆಗಳ ಸುತ್ತಾ   ಕೇಂದ್ರಿಕರಿಸದಂತೆ ಮಾಡುವುದು. ದೇಶದ ಮಾಧ್ಯಮ ಸಂಸ್ಥೆಗಳು ಕಾವಲು ನಾಯಿಯ ರೀತಿ ಕೆಲಸ ಮಾಡುವುದಿರಲಿ, ಬಂಡವಾಳಶಾಹಿಗಳ, ಆಧಿಕಾರಸ್ಥರ ತೊಡೆಯ ಮೇಲೆ ಕುಳಿತು ಬಿಟ್ಟಿವೆ. ಎಲ್ಲಾ ಸಾರ್ವಜನಿಕ ಉದ್ಧಿಮೆಗಳನ್ನು ಖಾಸಗೀಕರಣ ಮಾಡುತ್ತಿದೆ. ಈ ಮೂಲಕ ಸರ್ಕಾರವು ತನ್ನ ಜವಾಬ್ದಾರಿಯಿಂದ ನುಣಚಿಕೊಳ್ಳುತ್ತಿದ ಗುಜರಾತ್ ಸೇರಿದಂತೆ ಇತರೆಡೆ ಅದಾನಿ-ಅಂಬಾನಿಯ ಬೊಕ್ಕಸದ ಅದಾಯಕ್ಕೆ ಅನೂಕೂಲವಾಗುವಂತೆ ಎಲ್ಲಾ ರೀತಿಯ ಸರ್ಕಾರದ ನೀತಿಗಳನ್ನು, ಬ್ಯಾಂಕಿನಿಂದ ಸಾಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದರು.

ಬ್ರೀಟಿಷರು ಬರುವ ಮುಂಚೆ ಈ ದೇಶವನ್ನು ಮೊಘಲರು ಆಳ್ವಿಕೆ ಮಾಡಿದ್ದರು, ನಂತರ ಬ್ರೀಟಿಷರ ಆಳ್ವಿಕೆಯ ಕಾಲಘಟ್ಟದಲ್ಲಿ ಬ್ರಿಟಿಷ್‌ರ ವಿರುದ್ದ ಹಿಂದು ಮತ್ತು ಮುಸ್ಲಿಂ ಜನಾಂಗ ಜೊತೆಗೆ ಸೇರಿ ಹೋರಾಟವನ್ನು ಮಾಡಿದರು. ಅಲ್ಲಿಯ ತನಕ ಇಲ್ಲದ ಹಿಂದು ಮುಸ್ಲಿಂ ಎಂಬ ಪರಿಭಾಷೆ ಆನಂತರ ಹುಟ್ಟಿಕೊಂಡಿತು.

ಭಾರತ ತನ್ನ ಸಾಂಸ್ಕೃತಿಕ ಬೇರುಗಳನ್ನು ಕಳೆದುಕೊಂಡಿತು, ಭಾರತ ಉಳಿಯಲು ವರ್ಣಾಶ್ರಮವೆ ಕಾರಣ ಎಂದು ಬಿಂಬಿಸಲಾಯಿತು. ಮ್ಯಾಜಿನಿ ಚರಿತ ಫಸ್ಟ್ ವಾರ್ ಆಫ್ ಇಂಡಿಯನ್ಸ್ 1909 ರಲ್ಲಿ ಸಾವರ್ಕರ್ ಹಿಂದು ಮುಸ್ಲಿಂ ಇಬ್ಬರೂ ಭಾರತಾಂಬೆಯ ಕಣ್ಣುಗಳಿದ್ದಂತೆ ಎಂದು ಹೇಳಿದಾತ. ಅದಾದ ನಂತರ ಕೆಲವೇ ವರ್ಷಗಳಲ್ಲಿ ಇದು ಬದಲಾವಣೆಯಾಯಿತು. ಇದು ಸಾವರ್ಕರ್ ಗೆ ಮಾಡುತ್ತಿರುವ ಅವಮಾನ ಎಂದರು.

ಈ ನೆಲದಲ್ಲಿ ಬಹುಸಂಸ್ಕೃತಿಯ ಬದಲಿಗೆ ಎಲ್ಲವನ್ನು ಏಕಮುಖವಾಗಿ ನಿರ್ಮಿಸಲು ಪ್ರಯತ್ನಿಸಲಾಗುತ್ತಿದೆ, ಒಂದೇ ರಾಷ್ಟ್ರ,ಒಂದೇ ಭಾಷೆ,ಒಂದೇ ಧರ್ಮ ಎಂಬ ಪರಿಭಾಷೆಯನ್ನು ತಂದು ಐಕ್ಯತೆಗೆ ದಕ್ಕೆ ತರುವ ಪ್ರಯತ್ನಗಳು ನಡೆಯುತ್ತಿದೆ, ಎಲ್ಲವನ್ನೂ ಬ್ರಾಹ್ಮಣಿ ಕರಿಸಲಾಗುತ್ತಿದೆ. ಆ ಕಾಲದಲ್ಲಿ ಗಣಪತಿ ಎಂಬುದು ಬುಡಕಟ್ಟು ಜನಾಂಗದ ದೇವರು, ಎಲ್ಲಾ ಗಣಗಳಿಗೆ ಅಧಿಪತಿ ಗಣಪತಿ ಎಂದು ಆದರೆ ಅದನ್ನು ಗಣೇಶನನ್ನಾಗಿ ಬದಲಾಯಿಸಿ ಅದನ್ನು ಬ್ರಾಹ್ಮಣಿಕರಿಸಲಾಯಿತು. ಹೀಗೆ ವ್ಯವಸ್ಥೆಯನ್ನು ತಿರುಚಲಾಯಿತು‌. ಇದರಿಂದಾಗಿ ಮೇಲು ಕೀಳು ತಾರತಮ್ಯಗಳನ್ನು ಸೃಷ್ಟಿ ಸಲಾಯಿತು.

ಸಾರ್ವತ್ರಿಕ ಶಿಕ್ಷಣ ವ್ಯವಸ್ಥೆಯಲ್ಲಿ ಮಹಿಳೆಯರಿಗೆ, ಶೂದ್ರರಿಗೆ ಶಿಕ್ಷಣ ದೊರೆತರೆ ಅಸಮಾನತೆ ಉಂಟಾಗುತ್ತದೆ ಎಂದು ಬಿಂಬಿಸಲಾಯಿತು. ಇದರ ವಿರುದ್ದವಾಗಿ ಅಂದು ಬುದ್ದ ಹೇಳಿದ್ದು ಮತ್ತು ಮಾರ್ಕ್ ಹೇಳಿದ್ದು ಕಾಲಘಟಕ್ಕೆ ಬೇರೆಯಾದರು ಅರ್ಥ ಒಂದೇ ಆಗಿದೆ. ಆದ್ದರಿಂದ ಅಂಬೇಡ್ಕರ್ ರವರು ಬುದ್ದ ನಂತರ ಮಾರ್ಕ್ಸ್ ಸಿದ್ದಾಂತ ಎಂದು ಹೇಳಿದರು.

ಸತ್ಯ ಮತ್ತು ಜ್ಞಾನವನ್ನು ಸಾರುವುದೇ ಬುದ್ದನ ಆಶಯ,ಜ್ಞಾನ ಶೀಲವಿರಬೇಕು ಅದರ ಜೊತೆಗೆ ಕರುಣೆ ಮತ್ತು ಮೈತ್ರಿಯ ಗುಣವಿರಬೇಕು ಎಂಬ ಸಿದ್ದಾಂತವನ್ನು ಬುದ್ದ ಸಾರಿದ್ದ. ಇದಕ್ಕೆ ತದ್ವುರುದ್ದವಾಗಿ ವೈದಿಕ ಸಿದ್ದಾಂತ, ಶೂದ್ರನನ್ನು ಬ್ರಾಹ್ಮಣ್ಯದ ಅಧಿಪತ್ಯದೊಳಗೆ ಗುಲಾಮರಂತೆ ಇಟ್ಟು ಕೊಳ್ಳುವುದನ್ನು ಸಾರಿತ್ತು.

ಆದ್ದರಿಂದಲೆ ಅಂಬೇಡ್ಕರ್ ರವರು ನಾನು ಹಿಂದುವಾಗಿ ಹುಟ್ಟಿದ್ದರು, ಹಿಂದುವಾಗಿ ಸಾಯಲಾರೆ ಎಂದು ಹೇಳಿದರು. ಇಂದಿನ ಯುವ ಜನತೆ ಕಣ್ಣು ತೆರೆಯಬೇಕಿದೆ, ಜಾತಿ ಧರ್ಮದ ಹೊಡೆದಾಟವನ್ನು ಬಿಟ್ಟು ಈ ದೇಶದ ಆರ್ಥಿಕ ಪ್ರಗತಿ ಎತ್ತಸಾಗುತ್ತಿದೆ, ನಮ್ಮ ದಿನನಿತ್ಯದ ಬದುಕಿನಲ್ಲಿ ಎದುರಾಗಿರುವ ಸಂಕಷ್ಟಗಳ ಬಗ್ಗೆ ಗಮನ ಹರಿಸಬೇಕಿದೆ. ಯಾವುದೇ ರಾಜಕೀಯ ಪಕ್ಷಗಳೂ ಅಧಿಕಾರಕ್ಕೆ ಬಂದರು ಜನರ ಬದುಕು ಸುದಾರಿಸುವುದು ಸುಲಭವಿಲ್ಲ. ಮೊದಲು ಪ್ರಜ್ಞಾವಂತರಾಗಿ ಪ್ರಶ್ನಿಸುವ ಮನೋಭಾವನೆ ಬೆಳಸಿಕೊಳ್ಳಬೇಕು ಜೊತೆಗೆ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ನಂತರ ಫ್ರೊ. ಹುಲ್ಕೆರೆ ಮಹದೇವು ಮಾತನಾಡಿ ಈ ದಿನ ಜಾತಿ ಧರ್ಮಗಳ ನಡುವೆ ಬೆಂಕಿ ಹಚ್ಚಿ ರಾಜಕಾರಣಿಗಳು ತಮ್ಮ ಚಳಿ ಕಾಯಿಸಿಕೊಳ್ಳುತ್ತಿದ್ದಾರೆ, ನಾವು ಎಲ್ಲಾ ಭೇದವನ್ನು ತೊರೆದು ಒಂದಾಗುವ ಹೋರಾಡುವ ಅಗತ್ಯವಿದೆ ಎಂದು ತಿಳಿಸಿದರು.

ಕರ್ನಾಟಕ ಜನಶಕ್ತಿಯ ಕೃಷ್ಣಪ್ರಕಾಶ್ ಮಾತನಾಡಿ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ,ಸಂಘಟನೆ ಹೋರಾಟವೆ ಇದಕ್ಕೆ ದಾರಿ. ಸಂಘಟನೆಗಳು ಒಡೆದು ಹಂಚಿಹೊಗುವ ಬದಲು ಒಗ್ಗಟ್ಟಿನಿಂದ ಒಂದಾಗಿ ಹೋರಾಟ ಮಾಡುತ್ತಾ ಜನರನ್ನು ಜಾಗೃತರಾಗಿಸುವ ಹೊಣೆ ನಮ್ಮ ಮೇಲಿದೆ. ಇದನ್ನು ನಾವೆಲ್ಲರೂ ಜೊತೆಯಾಗಿ ಜವಾಬ್ದಾರಿಯುತವಾಗಿ ನಿರ್ವಹಿಸೋಣ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಎಂ.ವಿ.ಕೃಷ್ಣ, ವಕೀಲರಾದ ಬಿ.ಟಿ.ವಿಶ್ವನಾಥ್, ವಕೀಲರಾದ ಶ್ರೀನಿವಾಸ್, ಕರ್ನಾಟಕ ಜನಶಕ್ತಿಯ ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು, ಮಹಿಳಾ ಮುನ್ನಡೆಯ ಪೂರ್ಣಿಮ, ಶ್ರಮಿಕ ನಗರ ನಿವಾಸಿಗಳ ಒಕ್ಕೂಟದ ಪ್ರಕಾಶ್,  ಶಿಲ್ಪಾ, ಅರ್‍ಮುಗಂ, ನವೀನ, ನಂದಕಿಶೋರ್ ‍ಸೇರಿದಂತೆ ಮತ್ತಿತ್ತರು  ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!