ಶ್ರೀರಂಗಪಟ್ಟಣ ತಾಲ್ಲೂಕಿನ ದರಸಗುಪ್ಪೆ ಬಳಿ ರಸ್ತೆಯಲ್ಲಿ ಸ್ಕೂಟರ್ ಚಾಲನೆ ಮಾಡುತ್ತಿದ್ದ ವೇಳೆ ದಿಢೀರ್ ಎಂದು ಹೋಂಡಾ ಸ್ಕೂಟರ್ ಹೊತ್ತಿ ಉರಿದ ಪರಿಣಾಮ ಇಬ್ಬರು ಸವಾರರು ಬೆಂಕಿಯಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೈಸೂರಿನ ನಿವಾಸಿಗಳಾದ ಶಿವರಾಮ(73)ವರ್ಷ ಹಾಗೂ ಅನಂತರಾಮಯ್ಯ (50) ಬೆಂಕಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡವರು.
ಮೈಸೂರಿನ ನಿವಾಸಿಗಳಾದ ಇವರಿಬ್ಬರು ಇಂದು ಮಧ್ಯಾಹ್ನ ದರಸಗುಪ್ಪೆ
ರಸ್ತೆ ಮದ್ಯೆ ಹೋಗುತ್ತಿದ್ದ ವೇಳೆ ಏಕಾಏಕಿ ಸ್ಕೂಟರ್ ಗೆ ಬೆಂಕಿ ಹೊತ್ತಿಕೊಂಡಿದೆ.ಕೂಡಲೇ ರಸ್ತೆಯಲ್ಲಿದ್ದ ಜನರು ಬೆಂಕಿ ಆರಿಸಿದ್ದಾರೆ.ಆದರೂ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸುಟ್ಟ ಗಾಯದಿಂದ ನರಳುತ್ತಿದ್ದ ಸವಾರರನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಲಾಗಿದೆ.
ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.