Thursday, September 19, 2024

ಪ್ರಾಯೋಗಿಕ ಆವೃತ್ತಿ

ತಂದೆ-ತಾಯಿ ದೂರವಿಡುವವರು ವಿಕೃತ ಮನಸ್ಥಿತಿಯವರು

ಜನ್ಮ ನೀಡಿದ ಪೂಜ್ಯ ತಂದೆ-ತಾಯಿಯನ್ನು ಕುಟುಂಬ ಮತ್ತು ಸಮಾಜದಿಂದ ದೂರವಿಡುವವರು ವಿಕೃತ ಮನಸ್ಥಿತಿಯವರು ಎಂದು ಸರಗೂರು ಹೊಸಮಠದ ಶ್ರೀ ಬಸವರಾಜೇಂದ್ರ ಸ್ವಾಮಿ ಹೇಳಿದರು.

ಮಂಡ್ಯ ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಸಭಾಂಗಣದಲ್ಲಿ ಸಾಯಿಗುರು ಚಾರಿಟಬಲ್ ಟ್ರಸ್ಟ್ ವೃದ್ಧಾಶ್ರಮ ಆಯೋಜಿಸಿದ್ದ 4ನೇ ವಾರ್ಷಿಕೋತ್ಸವ ಮತ್ತು ಬಸವ ಜಯಂತಿ ಸಮಾರಂಭಕ್ಕೆ ಜಗಜ್ಯೋತಿ ಬಸವಣ್ಣರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಪ್ರತಿ ಕುಟುಂಬದಲ್ಲಿ ಸಮಸ್ಯೆಗಳು ಇದ್ದೇ ಇರುತ್ತವೆ, ಅವು ಬರುತ್ತವೆ,ಹೋಗುತ್ತವೆ. ಪರಿಹಾರ ನಮ್ಮ ಅಲೋಚನೆ ಮತ್ತು ಸಮಚಿತ್ತದಲ್ಲಿರುತ್ತದೆ, ವಿಕೃತ ಮನೋಭಾವದವರು ಹೆತ್ತ ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ದೂಡುವುದು ತಮಗೆ ತಾವೇ ವಂಚನೆ ಮಾಡಿಕೊಂಡಂತಾಗುವುದಿಲ್ಲವೇ ಎಂದು ಪ್ರಶ್ನಿಸಿದರು.

ಸಮಾಜದಲ್ಲಿ ಅನೇಕ ಆಶ್ರಮಗಳು, ಮಠಗಳು ಇವೆ. ಭಿಕ್ಷೆ ಬೇಡಿ ಆಶ್ರಮ ಮತ್ತು ಮಠ ಕಟ್ಟಿದವರೂ ಇಂದಿಗೆ ಬೆಳಕಾಗಿದ್ದಾರೆ, ಮಾರ್ಗದರ್ಶನ ನೀಡುತ್ತಿದ್ದಾರೆ, ವೃದ್ಧಾಶ್ರಮಗಳು ಹೆಚ್ಚಾಗಲಿ ಎಂದು ನಾನು ಹೇಳಲಾರೆ, ಆದರೆ ವಯೋವೃದ್ಧರನ್ನು ಪೂಜಿಸಿ, ಪೋಷಿಸು, ಆದರದಿಂದ ಗೌರವಿಸುವ ಮನಸ್ಥಿತಿ ಹೆಚ್ಚಾಗಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ವಕೀಲ ಎಂ.ಗುರುಪಸಾದ್,ಸಾಯಿಗುರು ಚಾರಿಟಬಲ್ ಟ್ರಸ್ಟ್ ವೃದ್ಧಾಶ್ರಮದ ಶಿವಕುಮಾರ್, ಮಮತಾ ಉಮೇಶ್, ಸುಧಾರಾಣಿ, ಡಾ.ಕಾಂತರಾಜು, ಮಲ್ಲಪ್ಪ, ಮಲ್ಲಿಕಾರ್ಜುನಸ್ವಾಮಿ, ಶಿವಪ್ರಕಾಶ್‌ಬಾಬು, ಪದ್ಮಮೋಹನ್, ರೂಪದರ್ಶಿ ಐಶ್ವರ್ಯಗೌಡ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!