ಭಾರತ ಸೇನೆಗೆ ಅಲ್ಪಾವಧಿಗೆ ಯೋಧರನ್ನು ನೇಮಕ ಮಾಡುವ ಅಗ್ನಿಪಥ ಯೋಜನೆ ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮಂಡ್ಯದ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸ ಗೀಕರಣ ಮಾಡುವ ಮೂಲಕ ನಿರುದ್ಯೋಗ ಸೃಷ್ಟಿಗೆ ಕಾರಣವಾಗಿರುವ ಪ್ರಧಾನಿ ಮೋದಿ ಜನವಿರೋಧಿ ನೀತಿಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.
ಭಾರತ ಸೇನೆಯ ಘನತೆ- ಗೌರವಕ್ಕೆ ಧಕ್ಕೆಯುನ್ನುಂಟು ಮಾಡುವ ಮತ್ತು ನೇಮಕ ಗೊಳ್ಳುವ ಸೈನಿಕರ ಜೀವನಕ್ಕೆ ಭದ್ರತೆ ಇಲ್ಲದ ಕೇಂದ್ರ ಸರ್ಕಾರದ ಅಗ್ನಿಪಥ” ಯೋಜನೆ ಅವೈಜ್ಞಾನಿಕವಾಗಿದ್ದು,ಈ ಯೋಜನೆ ಅನುಷ್ಠಾನಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರದ ನಡೆ ಖಂಡನೀಯ ಎಂದರು.
ಜೂ.24ರಿಂದಲೇ ನೇಮ ಕಾತಿಗೆ ಮುಂದಾಗಿರುವ ವಾಯುಪಡೆ, ಭೂಸೇನೆ, ನೌಕಾಪಡೆಗಳು ಅಗ್ನಿಪಥ ಯೋಜನೆಯಡಿ ಅಗ್ನಿ ವೀರರಿಗೆ ಜೀವನ ಭದ್ರತೆಯನ್ನಾಗಲಿ, ಪಿಂಚಣೆಯನ್ನಾಗಲಿ ನೀಡದೇ ಅಲ್ಪಾವಧಿಗೆ ಮಾತ್ರ ನೇಮಕಾತಿ ಮಾಡಿ, ನಿರುದ್ಯೋಗಿಗಳಿಗೆ ಮತ್ತು ದೇಶ ಸಂರಕ್ಷಕರಿಗೆ ದ್ರೋಹ ಮಾಡಲಿದೆ.ಇದು ಪ್ರಧಾನಿ ನರೇಂದ್ರ ಮೋದಿಯವರ ಜನ ವಿರೋಧಿ ನೀತಿಯಾಗಿದೆ ಎಂದು ಕಿಡಿಕಾರಿದರು.
ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿ, ಭಾರತೀಯ ನಿರುದ್ಯೋಗಿಗಳಿಗೆ ವೇತನ, ಭದ್ರತೆಯ ನೌಕರಿಯನ್ನು ವಂಚಿಸುತ್ತಿರುವುದಲ್ಲದೆ, ಬಂಡವಾಳ ಶಾಹಿ ಪ್ರಭುತ್ವದ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಗುಲಾಮಗಿರಿಗೆ ಭಾರತಿಯ ನಿರುದ್ಯೋ ಗಿಗಳನ್ನು ದೂಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಯವರ ಸ್ವಾಭಿಮಾನ ಶೂನ್ಯತೆಯ ನೀತಿ ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಭಾರತೀಯ ನಿರುದ್ಯೋಗಿ ಗಳಿಗೆ ವಿರೋಧಿಯಾಗಿರುವ ಕೇಂದ್ರದ ಅಗ್ನಿಪಥ ಯೋಜನೆಯನ್ನು ಕೂಡಲೇ ಕೈ ಬಿಡಬೇಕು.ಹಿಂದಿನ ಸೇನಾ ನೇಮಕಾತಿಯಂತೆ ನೇಮಕಾತಿ ಪ್ರಕ್ರಿಯೆ ಮಾಡಿ, ಭಾರತ ಸೇನೆಯ ಘನತೆ-ಗೌರವವನ್ನು ಸಂರಕ್ಷಿಸ ಬೇಕು ಎಂದು ಒತ್ತಾಯ ಮಾಡಿದರು.
ಈ ಕೂಡಲೇ ಅಗ್ನಿಪಥ ಕೈ ಬಿಡಲು ಪ್ರಧಾನಿ ಮೋದಿಗೆ ಗೌರವಾನ್ವಿತ ರಾಷ್ಟ್ರಪತಿಗಳು ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.
ಸಂಘದ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ರಾಜ್ಯ ಸಂಚಾಲಕ ಅಂದಾನಿ, ಶಿವು ಮದ್ದೂರು, ಕುಮಾರ್, ಮಂಜುನಾಥ್, ಗೀತಾ, ಹೊನ್ನಯ್ಯ, ಜಯಶಂಕರ್, ಕುಮಾರ್, ಶ್ರೀನಿವಾಸ್ ಸೇರಿ ದಂತೆ ಅನೇಕರು ಪಾಲ್ಗೊಂ ಡಿದ್ದರು.