Friday, April 19, 2024

ಪ್ರಾಯೋಗಿಕ ಆವೃತ್ತಿ

ಕಲಾವಿದರಿಗೆ ಐದು ಸಾವಿರ ಮಾಸಾಶನ ನೀಡಲು ಒತ್ತಾಯ

ರಾಜ್ಯದಲ್ಲಿರುವ ವಿವಿಧ ಪ್ರಕಾರಗಳ ಕಲಾವಿದರು ಬಡವರಾಗಿದ್ದು,ನಾಡು-ನುಡಿ ಉಳಿಸುವ ಕಾರ್ಯದಲ್ಲಿ ತೊಡಗಿರುವ ಇವರಿಗೆ 5 ಸಾವಿರ ಮಾಸಾಶನ ನೀಡಬೇಕೆಂದು ರಾಜ್ಯ ಕಲಾವಿದರ ಒಕ್ಕೂಟದ ರಾಜ್ಯಾಧ್ಯಕ್ಷ ವೀರೇಶ ಪ್ರಸಾದ್ ಒತ್ತಾಯಿಸಿದರು.

ಮಂಡ್ಯ ನಗರದ ಗಾಂಧಿಭವನದಲ್ಲಿ ರಾಜ್ಯ ಕಲಾವಿದರ ಒಕ್ಕೂಟ ಆಯೋಜಿಸಿದ್ದ ಜಿಲ್ಲಾ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ನಾಡಿನಲ್ಲಿರುವ ನಾನಾ ಪ್ರಕಾರಗಳ ಕಲಾವಿದರು ಬಡವರು.ನಾಡು-ನುಡಿ ಸಂಸ್ಕೃತಿ ಉಳಿಸಿ ಬೆಳೆಸುವ ಕಲಾವಿದರಿಗೆ 5 ಸಾವಿರ ಮಾಸಾಸನ ನೀಡಿದರೆ ಸರ್ಕಾರಕ್ಕೇನು ನಷ್ಟವಾಗದು.ಕಷ್ಟದಲ್ಲಿರುವ ಕಲಾವಿದರ ಜೀವನ ಕಾಯುವುದು ಸರ್ಕಾರ ಜವಬ್ದಾರಿಯಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೋಂದಣಿ ಮಾಡಿಸಿಕೊಂಡು ಮಾಶಾಸನ ನೀಡಬೇಕು ಎಂದರು.

ಕೋವಿಡ್ ಸಂಕಷ್ಟದ ದಿನಗಳಲ್ಲಿ ಯಾವುದೇ ಸಂಪಾದನೆಯಿಲ್ಲದೆ ಕಲಾವಿದರ ಕುಟುಂಬ ನಿರ್ವಹಣೆಗೆ ಕಷ್ಟವಾಗಿದ್ದು, ಹೀಗಾಗಿ ಸರ್ಕಾರ 100 ಕೋಟಿ ರೂ.ಗಳನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೇ ಸಂಘಟನೆಯೊಂದಿಗೆ ವಿಧಾನ ಸೌಧ ಮತ್ತು ಮುಖ್ಯಮಂತ್ರಿಗಳ ಮನೆ ಮುಂದೆ ಧರಣಿ ನಡೆಸುವ ಮೂಲಕ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ನಾಡಿನಲ್ಲಿ ವೃತ್ತಿಪರ ಕಲಾವಿದರು ರಂಗಭೂಮಿ, ಜಾನಪದ, ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ, ವೇಷ ಭೂಷಣ, ವಾದ್ಯ ಪರಿಕಾರಗಳು ಯಾವುದೇ ಪ್ರಾಯೋಜಿತ ಕಾರ್ಯಕ್ರಮಗಳು ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಸರ್ಕಾರ ಸುಮಾರು 1500 ಕೋಟಿ ಹಣ ಕರ್ನಾಟಕ ರಾಜ್ಯಕ್ಕೆ ಮಂಜೂರು ಮಾಡಿದ್ದು ,ಅದರಲ್ಲಿ 100 ಕೋಟಿಯನ್ನು ಕಲಾವಿದರಿಗಾಗಿ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದರೂ ಸಾಧ್ಯವಾಗಿಲ್ಲ ಎಂದು ವಿಷಾದಿಸಿದರು.

ಕಲಾ ಪೋಷಕ ಬಿ.ಎಂ. ಅಪ್ಪಾಜಪ್ಪ, ರಾಜ್ಯ ಕಲಾವಿದರ ಒಕ್ಕೂಟದ ಜಿಲ್ಲಾಧ್ಯಕ್ಷ ಸಾದೊಳಲು ಶಿವಣ್ಣ ಹೆಮ್ಮಿಗೆ, ಸಾಹಿತಿ ಪ್ರೊ.ಜಿ.ಟಿ. ವೀರಪ್ಪ, ಸಾಹಿತಿ ಪ್ರೊ.ಹುಲ್ಕೆರೆ ಮಹದೇವು, ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಮತ್ತು ಜಾನಪದ ಗಾಯಕರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!