Thursday, November 19, 2026

ಪ್ರಾಯೋಗಿಕ ಆವೃತ್ತಿ

ಮದ್ದೂರು | ಮೂಲ ಜನಪದ ಸಂಸ್ಕೃತಿ ಉಳಿಸಿ – ಕುಮಾರ್

ಒಂದು ದೇಶದ ಆರ್ಥಿಕ ಸಮಸ್ಯೆ ಉಂಟಾದರೆ ಬೇರೆ ದೇಶದಿಂದ ಹಣ ತಂದು ಸರಿ ಮಾಡಿಕೊಳ್ಳಬಹುದು, ನಮ್ಮ ಮೂಲ ಸಂಸ್ಕೃತಿ ನಾಶವಾದರೆ ಬೇರೆ ದೇಶದ ಸಂಸ್ಕೃತಿಯನ್ನು ನಮ್ಮ ದೇಶದ ಸಂಸ್ಕೃತಿಯನ್ನಾಗಿ ಅಳವಡಿಸಿಕೊಳ್ಳಲು ಸಾಧ್ಯವಿಲ್ಲ, ಆದ್ದರಿಂದ ಮೂಲ ಜನಪದವನ್ನು ಉಳಿಸಿ ಎಂದು ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತ ಸಬ್ಬನಹಳ್ಳಿ ಎಸ್.ಎಂ.ಕುಮಾರ್ ಹೇಳಿದರು.

ಮದ್ದೂರು ತಾಲ್ಲೂಕಿನ ಸಬ್ಬನಹಳ್ಳಿಯಲ್ಲಿ ಸೌಹಾರ್ದ ಸಾಂಸ್ಕೃತಿಕ ಕಲಾಸಂಘ ಹನಿಯಂಬಾಡಿ ಇವರ ವತಿಯಿಂದ ನಡೆದ ”ಕಲಿ ಮಗು ನಮ್ಮ ಜನಪದ ಕಾರ್ಯಕ್ರಮ”ವನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಮಕ್ಕಳು ಸಿನಿಮಾ ಮತ್ತು ಟಿವಿಯ ಮಾಧ್ಯಮಗಳಿಗೆ ಮಾರು ಹೋಗುತ್ತಿದ್ದಾರೆ. ಅರ್ಥವಿಲ್ಲದಂತಹ ಸಿನಿಮಾ ಗೀತೆಗಳನ್ನು ಗುನುಗುತ್ತಿರುತ್ತಾರೆ. ಅದರ ಬದಲು ನಮ್ಮ ಹಿರಿಯರು ಹಾಡುತ್ತಿದ್ದ ಜನಪದವನ್ನು ಮಕ್ಕಳೂ ಹಾಡಿದರೆ, ಮುಂದಿನ ಪೀಳಿಗೆಗೆ ಜನಪದ ಉಳಿಯುತ್ತದೆ ಎಂದು ತಿಳಿಸಿದರು.

ಹಿರಿಯ ಪರ್ತಕರ್ತ ದೇವರಾಜು ಕೊಪ್ಪ ಮಾತನಾಡಿ, ಮಕ್ಕಳು ಜನಪದ ಗೀತೆಗಳನ್ನು ಕಲಿಯುವುದರಿಂದ ನಿಮ್ಮ ಶಾಲೆಯಲ್ಲಿ ನಡೆಯುವಂತಹ ಪ್ರತಿಭಾ ಕಾರಂಜಿ, ಸಾಂಸ್ಕೃತಿಕ ವೇದಿಕೆಗಳಲ್ಲಿ ಹಾಡಿದರೆ ಜನಪದ ಉಳಿದಂತಾಗುತ್ತದೆ ಎಂದರು.

ಹನಿಯಂಬಾಡಿ ಸೌಹಾರ್ದ ಸಾಂಸ್ಕೃತಿಕ ಕಲಾಸಂಘದ ಕಲಾವಿದರಿಂದ ಮಕ್ಕಳಿಗೆ ಮೂಲ ಜನಪದ ಗೀತೆಗಳನ್ನು ಹೇಳಿಕೊಡುವುದರ ಜೊತೆಗೆ, ಗೀತೆಗಳನ್ನು ಹಾಡಿ ರಂಜಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕ ಶಿವಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ಸಂಗೀತ ನೃತ್ಯ ಕಲಾನಿಕೇತನ ಅಧ್ಯಕ್ಷೆ ಪಿ.ಶೋಭ ಗೌಡ, ಶಿಕ್ಷಕರಾದ ಮೋಹನ್, ಶಿವಲಿಂಗಯ್ಯ, ಅಂಗನವಾಡಿ ಕಾರ್ಯಕರ್ತೆ ಭಾಗ್ಯ, ಮಕ್ಕಳ ಮನೆ ಶಿಕ್ಷಕಿ ನವ್ಯಶ್ರೀ, ಕಲಾವಿದರಾದ ಹನಿಯಂಬಾಡಿ ಎನ್.ಶೇಖರ್, ಸಂತಕಸಲಗೆರೆ ಬಸವರಾಜು, ಹೆಚ್.ಪಿ.ವೈರಮುಡಿ, ಹೆಚ್.ಬಿ.ರಾಮಕೃಷ್ಣ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ