Thursday, September 19, 2024

ಪ್ರಾಯೋಗಿಕ ಆವೃತ್ತಿ

ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮಕ್ಕೆ ಆಗ್ರಹ : ರಾಜ್ಯ ಒಕ್ಕಲಿಗರ ಎಂಪ್ಲಾಯಿಸ್ ಅಸೋಸಿಷಿಯನ್

ಪ್ರಸ್ತುತ ರಾಷ್ಟ್ರಕವಿ ಕುವೆಂಫು ಅವರಿಗೆ ರೋಹಿತ್ ಚಕ್ರತೀರ್ಥ ಎಂಬ ವ್ಯಕ್ತಿಯಿಂದ ಆಗಿರತಕ್ಕಂಹ ಅವಮಾನದ ವಿರುದ್ದ ಇಡೀ ಕನ್ನಡ ನಾಡು ಪ್ರತಿಭಟಿಸುತ್ತಿದೆ.

ಆದಿ ಚುಂಚನಗಿರಿಯ ಸ್ವಾಮೀಜಿಗಳು ಈ ವ್ಯಕ್ತಿಯ ವಿರುದ್ದ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ. ರಾಜ್ಯ ಒಕ್ಕಲಿಗರ ಸಂಘದ ಎಂಪ್ಲಾಯಿಸ್ ಅಸೋಸಿಷಿಯನ್ ಪರವಾಗಿ ಅಧ್ಯಕ್ಷ ಡಾ. ಬಸವರಾಜು ಬಿ. ಸಿ.
ರೋಹಿತ್ ಚಕ್ರತೀರ್ಥನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸುತ್ತದೆ ಎಂದು ತಿಳಿಸಿದ್ದಾರೆ.

ಕುವೆಂಪು ಕೇವಲ ಪ್ರಖ್ಯಾತ ಕವಿ ಮಾತ್ರವಲ್ಲ, ಯುಗದ ಕವಿ, ಜಗದ ಕವಿಯು ಕೂಡ ಆಗಿದ್ದಾರೆ. ಕುವೆಂಪು ನಮ್ಮನ್ನಗಲಿ ಹಲವು ವರ್ಷಗಳಾಗಿದ್ದರೂ ಕೂಡಾ, ಕುವೆಂಪುರವರು ಇಂದಿಗೂ ಕೂಡಾ ಕನ್ನಡ ನಾಡಿನ ಯಾವುದೇ ಜನಪರ ಚಳುವಳಿಯಾಗಿರಲಿ, ರೈತ ಚಳುವಳಿ, ಭಾಷಾ ಚಳುವಳಿ, ಮಹಿಳಾ ಚಳುವಳಿ ಅಗಿರಲಿ ಪ್ರತಿಯೊಂದು ಜನಪರ ಚಳುವಳಿಯ ಹಿಂದೆ ಒಂದು ಮಟ್ಟದ ಪ್ರೇರಕ ಶಕ್ತಿಯಾಗಿ ಕುವೆಂಪು ಕೆಲಸ ಮಾಡುತ್ತಿದ್ದಾರೆ, ಮುಂದೆಯೂ ಕೂಡ ಒಂದು ಪ್ರೇರಕ ಶಕ್ತಿಯಾಗಿ ಕುವೆಂಪುರವರು ಉಳಿದುಕೊಂಡಿರುತ್ತಾರೆ.

ಕುವೆಂಪುರವರ ನಾಡ ಗೀತೆ ‘ಜೈ ಭಾರತ ಜನನಿಯ ತನುಜಾತೆ’ಯನ್ನು ಬರೆದಿದ್ದಾರೆ. ಕನ್ನಡ ನಾಡಿನ ಘನತೆಯನ್ನು, ಆದ್ಭುತವನ್ನು ಎತ್ತಿಹಿಡಿದಿರುವ ನಾಡಗೀತೆಯನ್ನು ಬೇರೆ ಯಾವುದೇ ರಾಜ್ಯದಲ್ಲೂ ಇರುವುದು ಅನುಮಾನವಾಗಿದೆ. ಅಷ್ಟು ಅದ್ಭುತವಾದ ನಾಡ ಗೀತೆಯನ್ನು ಕುವೆಂಪುರವರು ಈ ನಾಡಿಗೆ ಕೊಟ್ಟಿದ್ದಾರೆ.

ಇಂತಹ ಅದ್ಭುತ ನಾಡ ಗೀತೆಯನ್ನು ಕೆಟ್ಟದಾಗಿ ತಿರುಚಿದಂತಹ ಒಂದು ಪೋಸ್ಟ್ ನ್ನು ರೋಹಿತ್ ಚಕ್ರತೀರ್ಥ ತನ್ನ ಫೇಸ್ ಬುಕ್ ವಾಲ್ ನಲ್ಲಿ ಹಾಕಿಕೊಳ್ಳುವಂತಹ ಉದ್ದೇಶ ಏನು? ಇಂತಹ ಪೋಸ್ಟಗಳು ಕುವೆಂಪುರವರಿಗೆ, ನಾಡಗೀತೆ, ಕನ್ನಡನಾಡಿಗೆ ಅವಮಾನ ಎಸಗಿದಂತಲ್ಲವೆ? ಹೀಗೆ ಅವಮಾನ ಮಾಡಿರುವಂತಹ ರೋಹಿತ್ ಚಕ್ರತೀರ್ಥ ಇಡೀ ಕನ್ನಡ ನಾಡಿನ ಜನತೆಯಲ್ಲಿ ಸಾರ್ವಜನಿಕ ಕ್ಷಮೆಯನ್ನು ಕೇಳಬೇಕು, ಅಷ್ಟೇ ಅಲ್ಲಾ ಇತನನ್ನು ಪಠ್ಯಪುಸ್ತಕ ಪರಿಷ್ಕರಣ ಸಮಿತಿಯ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕೆಂದು ಎಲ್ಲಾ ಕನ್ನಡಿಗರ ಪರವಾಗಿ ರಾಜ್ಯ ಒಕ್ಕಲಿಗರ ಸಂಘದ ಎಂಪ್ಲಾಯಿಸ್ ಅಸೋಷಿಯನ್ ಆಗ್ರಹಿಸುತ್ತದೆ ಎಂದು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!