Thursday, September 19, 2024

ಪ್ರಾಯೋಗಿಕ ಆವೃತ್ತಿ

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ : ಮುಖ್ಯಶಿಕ್ಷಕನಿಗೆ ಧರ್ಮದೇಟು

ಪ್ರೌಢಶಾಲೆಯ  ಆರ್.ಎಂ.ಎಸ್‌.ಎ. ವಿದ್ಯಾರ್ಥಿನಿಯರ ನಿಲಯ ವಿದ್ಯಾರ್ಥಿಗಳಿಗೆ ಹಲವಾರು ವರ್ಷಗಳಿಂದ ಕಿರುಕುಳ ನೀಡುತ್ತಿದ್ದ ಮುಖ್ಯ ಶಿಕ್ಷಕನಿಗೆ ಶಾಲಾ ವಿದ್ಯಾರ್ಥಿನಿಯರೇ ದೊಣ್ಣೆಗಳನ್ನು ಹಿಡಿದು ಥಳಿಸಿರುವುದಲ್ಲದೇ, ಗ್ರಾಮಸ್ಥರೇ ಮರಕ್ಕೆ ಕಟ್ಟಿ ಹಾಕಿ ಧರ್ಮದೇಟು ಕೊಟ್ಟಿರುವ ಘಟನೆ ಪಾಂಡವಪುರ ತಾಲ್ಲೂಕಿನ ಕಟ್ಟೇರಿ ಗ್ರಾಮದಲ್ಲಿ ನಡೆದಿದೆ.

ಕಟ್ಟೇರಿ ಗ್ರಾಮದ ಸರ್ಕಾರಿ ಪೌಢಶಾಲೆಯ ಮುಖ್ಯ ಶಿಕ್ಷಕ ಚಿನ್ಮಯಾನಂದಮೂರ್ತಿ(52) ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿ ಸಿಕ್ಕಿ ಬಿದ್ದು ಗ್ರಾಮಸ್ಥರಿಂದ ಥಳಿತಕ್ಕೊಳಗಾದವನು. ಈ ಬಗ್ಗೆ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರು ಮತ್ತು ಸದಸ್ಯರೇ ಕೆ.ಆರ್.ಎಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಎಫ್ ಐ ಆರ್ ದಾಖಲು 

ಆರ್.ಎಂ.ಎಸ್‌.ಎ. ವಿದ್ಯಾರ್ಥಿನಿಯರ ನಿಲಯದ ವಾರ್ಡನ್ ನಮಿತಾ ಕೆ.ಎಸ್. ಎಂಬುವವರು ಕೆ.ಆರ್.ಎಸ್. ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯ ಶಿಕ್ಷಕ ಚಿನ್ಮಯಾನಂದನ ಮೇಲೆ ಎಫ್ ಐ ಆರ್ ದಾಖಲಿಸಲಾಗಿದೆ. ಅಲ್ಲದೇ ಆತನನ್ನು ಪೊಲೀಸರು ವಶಕ್ಕೆ ತೆಗೆಕೊಂಡಿದ್ದಾರೆ.  ಚಿನ್ಮಯಾನಂದ ಮೂಲತಃ ಮೈಸೂರು ಜಯನಗರದ ವಾಸಿಯಾಗಿದ್ದಾನೆ.

ಕಿರುಕುಳ ನೀಡುವುದನ್ನೇ ಚಾಳಿ ಮಾಡಿಕೊಂಡಿದ್ದ ಮುಖ್ಯಶಿಕ್ಷಕ 

ಮುಖ್ಯ ಶಿಕ್ಷಕ ಚಿನ್ಮಯಾನಂದಮೂರ್ತಿ ಕಟ್ಟೇರಿ ಸರ್ಕಾರಿ ಪ್ರೌಢಶಾಲೆಗೆ ಮುಖ್ಯ ಶಿಕ್ಷಕರಾಗಿ ಒಕ್ಕರಿಸಿಕೊಂಡು ಬಂದು ಮೂರು ವರ್ಷಗಳಿಂದಲೂ ಒಂದಲ್ಲಾ ಒಂದು ಸಮಸ್ಯೆಗೆ ಕಾರಣರಾಗಿದ್ದರು. ಆರ್.ಎಂ.ಎಸ್‌.ಎ. ವಿದ್ಯಾರ್ಥಿನಿಯರ ನಿಲಯದಲ್ಲಿ ಅನೇಕ ಅವಾಂತರಗಳಿಗೆ ಕಾರಣನಾಗಿದ್ದ ಈತನ ಅಸಹ್ಯಕರ ಕೃತ್ಯಗಳ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಒಂದು ವರ್ಷದ ಹಿಂದಿನಿಂದಲೂ ಗ್ರಾಮಸ್ಥರು ಪದೇ ಪದೇ ಇಲಾಖಾ ಅಧಿಕಾರಿಗಳಿಗೆ ದೂರು ನೀಡಿದ್ದರು.

ಆದರೆ ಡಿ.31, 2018ರಲ್ಲಿ ಪಾಂಡವಪುರ ಶಿಕ್ಷಣಾಧಿಕಾರಿ ಅವರು ಈತನ ಮೇಲೆ ಲೈಂಗಿಕ ಕಿರುಕುಳದ ದೂರು ಕೇಳಿ ಬಂದ ಹಿನ್ನಲೆಯಲ್ಲಿ ಇಲಾಖಾ ವಿಚಾರಣೆಗಾಗಿ ಮೂವರು ಅಧಿಕಾರಿಗಳನ್ನು ವಿಚಾರಣೆಗೆ ನೇಮಿಸಿದ್ದರು.  ಈ ಮಧ್ಯದಲ್ಲಿಯೇ ಮುಖ್ಯ ಶಿಕ್ಷಕರು ತಮ್ಮ ತಪ್ಪು ಸಾಬೀತಾಗುತ್ತಿರುವುದನ್ನು ಮನಗಂಡು ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಉಪಾಯ ಮಾಡಿದ.

 

“>

 

ಜನವರಿ 2019 ರೊಳಗೆ ನಾನು ಸ್ವ ಇಚ್ಛೆಯಿಂದ ಈ ಶಾಲೆಯಿಂದ ವರ್ಗಾವಣೆ ಮಾಡಿಸಿಕೊಂಡು ಹೊಗುತ್ತೇನೆ’ ಎಂದು ಲಿಖಿತವಾಗಿ ವಿಚಾರಣಾ ಅಧಿಕಾರಿಗಳ ಸಮ್ಮುಖದಲ್ಲಿಯೇ ಬರೆದುಕೊಟ್ಟಿದ್ದ. ಇದರಿಂದ ಸಮಾಧಾನಕೊಂಡಿದ್ದ ಗ್ರಾಮಸ್ಥರು ಆತನ ಮೇಲೆ ನಂಬಿಕೆ ಇಟ್ಟು ಸುಮ್ಮನಾಗಿದ್ದರು. ಆ ನಂತರ ಮುಖ್ಯ ಶಿಕ್ಷಕ ಚಿನ್ಮಯಾನಂದಮೂರ್ತಿ ಗ್ರಾಮದ ಕೆಲವರನ್ನು ಪ್ರಚೋದಿಸಿ ಶಾಲೆಗೆ ಕರೆತಂದು ತಾನೂ ಜೊತೆಗೂಡಿ ಶಾಲಾ ಅವಧಿಯಲ್ಲಿಯೇ ಶಾಲಾ ಕೊಠಡಿಯಲ್ಲಿ ಶಾಲಾ ಮಕ್ಕಳಿಗೆ ಕೇಳಿಸುವಂತೆ ಅವಾಚ್ಯ ಪದಗಳಿಂದ ಶಾಲಾ ಎಸ್‌.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಸದಸ್ಯರನ್ನು ಹೀನಾಮಾನವಾಗಿ ನಿಂದಿಸುತ್ತಿದ್ದ.

ವಿದ್ಯಾರ್ಥಿನಿಯರಿಗೆ ಕಿರುಕುಳ 

ಇಲ್ಲಿನ ಎರ್.ಎಂ.ಎಸ್.ಎ. ವಿದ್ಯಾರ್ಥಿನಿಯರ ನಿಲಯದ ಮೇಲ್ವಿಚಾರಣೆ ಜವಾಬ್ದಾರಿ ಹೊತ್ತಿದ್ದ ಈ ಮುಖ್ಯಶಿಕ್ಷಕ  ಅಲ್ಲಿನ ಮಕ್ಕಳಿಗೆ ಕನಿಷ್ಠ ಮೂಲ ಸೌಲಭ್ಯ ನೀಡದೇ, ಪ್ರಾಣಿಗಳಂತೆ ನಡೆಸಿಕೊಳ್ಳುತ್ತಿದ್ದ ಎಂದು ಎಸ್.ಡಿ.ಎಂ.ಸಿ ಯು ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ದೂರು ನೀಡಿದೆ.

nudikarnataka.com

ಈತ ವಿದ್ಯಾರ್ಥಿನಿಲಯದಲ್ಲಿ ಲಕ್ಷಾಂತರ ರೂ. ಲೂಟಿ ಮಾಡಿ ಹಣ ತಿಂದುಹಾಕಿದ್ದಾನೆ. ಕಳೆದ ಡಿ.29, 2018ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಅಪರಾಹ್ನ ಹಾಸ್ಟೆಲ್ ಗೆ ಭೇಟಿ ನೀಡಿದಾಗ ವಿದ್ಯಾರ್ಥಿನಿಯರು ಮುಖ್ಯ ಶಿಕ್ಷಕರ ಕರ್ತವ್ಯ ಲೋಪದ ಬಗ್ಗೆ ದೂರುಗಳ ಸುರಿಮಳೆಗೈದಿದ್ದರು. ಈ ಹಿನ್ನೆಲೆಯಲ್ಲಿ ಉಪನಿರ್ದೇಶಕರು ಮುಖ್ಯ ಶಿಕ್ಷಕರಿಗೆ ಛೀಮಾರಿ ಹಾಕಿದ್ದರು. ಆದರೂ ಸಹ ಆತನ ವರ್ತನೆ ಬದಲಾವಣೆಯಾಗಿರಲಿಲ್ಲ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!