Thursday, September 19, 2024

ಪ್ರಾಯೋಗಿಕ ಆವೃತ್ತಿ

ರಾಜಕೀಯ ಧ್ರುವೀಕರಣ ಕ್ಕಾಗಿ ಪ್ರಸನ್ನ ಎನ್.ಗೌಡರನ್ನು ಆಯ್ಕೆ ಮಾಡಿ

ಪ್ರಸ್ತುತ ರಾಜಕಾರಣ ಬಂಡವಾಳ ಹಾಕಿ ಬಂಡವಾಳ ತೆಗೆಯುವ ಕೇಂದ್ರವಾಗಿದೆ. ಇದಕ್ಕೆ ಕಡಿವಾಣ ಹಾಕಲು ಹಾಗೂ ರಾಜಕೀಯ ಧ್ರುವೀಕರಣಕ್ಕಾಗಿ ರಾಜ್ಯ ರೈತ ಸಂಘ ಹಾಗೂ ದಲಿತ ಸಂಘರ್ಷ ಸಮಿತಿಯ ಒಮ್ಮತದ ಅಭ್ಯರ್ಥಿ ಪ್ರಸನ್ನ ಎನ್.ಗೌಡ ಅವರನ್ನು ಆಯ್ಕೆ ಮಾಡುವಂತೆ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಮನವಿ ಮಾಡಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಸ್ತುತ ದಿನದಲ್ಲಿ ಎಲ್ಲಾ ಪಕ್ಷದ ಅಭ್ಯರ್ಥಿಗಳು ಚುನಾ ವಣೆಗೆ ಬಂದು ಹಣ ಚೆಲ್ಲಾಡಿ ಮತ್ತೆ ಹಣವನ್ನು ಸಂಪಾದನೆ ಮಾಡಲು ಮುಂದಾಗಿರುವುದು ದುರಂತದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ರಾಜಕಾರಣ ಅಭಿವೃದ್ಧಿ ಕೆಲಸಗಳಿಗೆ ಸೀಮಿತವಾಗ ಬೇಕೇ ವಿನಃ ಬಂಡವಾಳ ಹಾಕಿ ಬಂಡವಾಳ ಮಾಡುವ ಕೇಂದ್ರ ವಾಗಬಾರದು.ಪದವೀಧರರ ಹಾಗೂ ರೈತರ ಸಮಸ್ಯೆಗೆ ಸ್ಪಂದಿಸುವ ಪ್ರಸನ್ನ ಎಂ ಗೌಡರನ್ನು ರೈತಸಂಘದ ಅಭ್ಯರ್ಥಿಯಾಗಿ ಕಣ ಕ್ಕಿಳಿಸಲಾಗಿದ್ದು, ಇವರು ಸದನದ ಒಳಗೆ ಹಾಗೂ ಹೊರಗೂ ಹೋರಾಟ ಮಾಡಲಿದ್ದಾರೆ.ಇವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಿ ಕೊಡಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಸರ್ಕಾರ ರೈತರು ಬೆಳೆದಿರುವ ಬೆಳೆಗಳಿಗೆ ಬೆಲೆ ನಿಗದಿ ಮಾಡುತ್ತದೆ. ಆದರೆ ಸರಿ ಯಾದ ಸಮಯದಲ್ಲಿ ಖರೀದಿ ಕೇಂದ್ರ ತೆರೆಯದೆ ರೈತರನ್ನು ಬೀದಿಗೆ ಹಾಕುತ್ತಾರೆ. ಮಧ್ಯ ವರ್ತಿಗಳು ಅವರು ಬೆಳೆದ ಬೆಳೆಗಳನ್ನು ಕಡಿಮೆ ದರಕ್ಕೆ ಕೊಂಡು ಖರೀದಿ ಕೇಂದ್ರ ತೆರೆದ ಮೇಲೆ ಹಣ ಮಾಡು ತ್ತಾರೆ.ಇಲ್ಲಿ ರೈತ ಬೀದಿ ಪಾಲಾಗುತ್ತಾನೆ.ಇದು ಕೇಂದ್ರ ಸರ್ಕಾರದ ಕಾರ್ಯವೈಖರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಮುಖಂಡ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ರೈತ ಸಂಘದಿಂದ ಪ್ರಸನ್ನ ಗೌಡರನ್ನು ಆಯ್ಕೆ ಮಾಡಲಾಗಿದೆ. ರೈತರ ಪರ ಅನೇಕ ಹೋರಾಟ ಗಳನ್ನು ಮಾಡಿರುವ ಇವರಿಗೆ ಪ್ರಜ್ಞಾವಂತರು ಮತನೀಡಿ ಗೆಲ್ಲಿಸಿ ಕೊಡಬೇಕು ಎಂದು ಮನವಿ ಮಾಡಿದರು.

ರೈತರ ಸಂಘದೊಂದಿಗೆ 40ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿದೆ. ರೈತಸಂಘಕ್ಕೆ ಪದವೀಧರರು ಶಕ್ತಿ ತುಂಬಲು ಮುಂದಾಗಬೇಕು ಎಂದು ಹೇಳಿದರು.
ಮಧು ಚಂದನ್, ಕೆಂಪೇಗೌಡ, ಮಲ್ಲೇಗೌಡ, ಬಾಲು, ಚಂದ್ರ ಗೋಷ್ಠಿಯಲ್ಲಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!