Thursday, September 19, 2024

ಪ್ರಾಯೋಗಿಕ ಆವೃತ್ತಿ

ಗ್ರಾಮ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮದ್ದೂರು ತಾಲ್ಲೂಕಿನ ಕೊಪ್ಪ-3ನೇ ಹೋಬಳಿಯ ಹೊಸಕೆರೆ (ಈ ವೃತ್ತಕ್ಕೆ ಹೊಸಕೆರೆ ಮತ್ತು ಕೊತ್ತನಹಳ್ಳಿ ಗ್ರಾಮಗಳು ಒಳಪಟ್ಟಿರುತ್ತದೆ) ಮತ್ತು ಕಸಬಾ-2ನೇ ಹೋಬಳಿಯ ಗೊರವನಹಳ್ಳಿ ವ್ಯಾಪ್ತಿಯ ಗ್ರಾಮ ಲೆಕ್ಕಿಗರ ವೃತ್ತಗಳಲ್ಲಿ ಗ್ರಾಮ ಸಹಾಯಕ ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಈ ಹುದ್ದೆಯು ತಾತ್ಕಾಲಿಕ ಹುದ್ದೆಯಾಗಿದ್ದು, ನೇಮಕಾತಿಯಾದ ಅಭ್ಯರ್ಥಿಗಳು ಕೆಲಸದ ಬಗ್ಗೆ ಅಸಡ್ಡೆ, ಹಾಗೂ ದುರ್ನಡತೆ ತೋರಿದ್ದಲ್ಲಿ ಕೆಲಸದಿಂದ ವಜಾ ಮಾಡಲಾಗುವುದು, ಸರ್ಕಾರದ ಆದೇಶದಂತೆ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅರ್ಹ ಅಭ್ಯರ್ಥಿಗಳು ಡಿಸೆಂಬರ್ 1 ರಿಂದ 31 ರೊಳಗಾಗಿ ಕಚೇರಿಗೆ ಖುದ್ದಾಗಿ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂ.ಸಂ.08232-200200 ಸಂಪರ್ಕಿಸಬಹುದೆಂದು ಮದ್ದೂರು ತಾಲ್ಲೂಕು ತಹಶೀಲ್ದಾರ್ ಪ್ರಕಟಣೆಗೆ ತಿಳಿಸಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!