ಮದ್ದೂರು ತಾಲ್ಲೂಕಿನಲ್ಲಿ ಮುಳ್ಳಂದಿ ಹಾಗೂ ಕಾಡಂದಿಗಳ ಹಾವಳಿಯಿಂದ ರೈತರ ಬೆಳೆಗಳ ನಷ್ಟವಾಗುತ್ತಿದ್ದು, ಇದಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿ ನ.29ರಂದು ಮದ್ದೂರು ತಹಶೀಲ್ದಾರ್ ಕಚೇರಿ ಎದುರು ಮದ್ದೂರಿನ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಯಲಿದೆ.
ಮದ್ದೂರು ಪಟ್ಟಣದ ಪಿ ಎಲ್ ಡಿ ಬ್ಯಾಂಕ್ ಸಭಾಂಗಣದ ಸಭಾಂಗಣದಲ್ಲಿ ಪ್ರಗತಿಪರ ಸಂಘಟನೆಯ ಸಂಚಾಲಕ ಸೊ ಶಿ ಪ್ರಕಾಶ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಹಂದಿಗಳ ಹಾವಳಿ ಬಗ್ಗೆ ಅರಣ್ಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ನಿರ್ಲಕ್ಷ್ಯ ವಹಿಸಿರುವುದು ಖಂಡನೀಯ. ಮಂಡ್ಯ ಜಿಲ್ಲೆಯಾದ್ಯಂತ ಕಾಡು ಪ್ರಾಣಿಗಳಾದ ಮುಳ್ಳಂದಿ, ಕಾಡಂದಿ ಹಾವಳಿ ಮಿತಿ ಮೀರಿದ್ದು, ತೆಂಗು, ಬಾಳೆ ಹಾಗೂ ಕಬ್ಬಿನ ಬೆಳೆ ಇದರಿಂದ ಹಾನಿಯಾಗಿ ಕೊಟ್ಯಾಂತರ ರೂ. ನಷ್ಠ ಉಂಟಾಗಿದೆ ಎಂದು ರೈತರು ಅಳಲು ತೋಡಿಕೊಂಡರು.
ಬೇಡಿಕೆಗಳು
ಹಂದಿಗಳ ನಿಯಂತ್ರಣಕ್ಕೆ ಜರೂರಾಗಿ ಕ್ರಮವಹಿಸಬೇಕು
ತೆಂಗಿನ ಬೆಳೆನಷ್ಢಕ್ಕೆ ಗಿಡವೊಂದಕ್ಕೆ 20,000 ರೂ. ಪರಿಹಾರ ಕೊಡಬೇಕು
ಕಬ್ಬು ಎಕರೆವೊಂದಕ್ಕೆ 40,000 ರೂ. ಪರಿಹಾರ ನೀಡಬೇಕು
ಬಾಳೆ ಬೆಳೆಗೆ ಎಕರೆವೊಂದಕ್ಕೆ 50,000 ರೂ. ನೀಡಬೇಕು
ಸಭೆಯಲ್ಲಿ ತೆಂಗು ಬೆಳೆಗಾರರ ಸಂಘದ ರಾಜ್ಯಾದ್ಯಕ್ಷ ಚನ್ನಸಂದ್ರ ಲಕ್ಷಣ, ಜನಾರ್ದನ್, ಹೂತಗೆರೆ ಶ್ರೀಕಾಂತ್, ಶ್ರೀನಿವಾಸ್, ಅಜ್ಜಹಳ್ಳಿ ಬಸವರಾಜ್, ಹುಲಿಗೆರೆಪುರ ರವಿ, ಬೊರಾಪುರ ಬಾಬು, ಮಹೇಶ್, ಗೋಪಾಲ್, ನಗರಕೆರೆ ಜಗದೀಶ್, ಬೇಲೂರು ಬೊಮ್ಮೆಗೌಡ, ನ.ಲಿ.ಕೃಷ್ಣ ಉಪಸ್ಥಿತರಿದ್ದರು.




