Thursday, September 19, 2024

ಪ್ರಾಯೋಗಿಕ ಆವೃತ್ತಿ

ಶಾಖಾ ಅಧಿಕಾರಿಗಳಿಂದ ಯಶಸ್ಸು ಲಭಿಸಿದೆ

ಬ್ಯಾಂಕ್ ಆಫ್ ಬರೋಡ ಶಾಖೆಯ ಅಧಿಕಾರಿಗಳ ಕಾರ್ಯ ಚಟುವಟಿಕೆಗಳಿಂದ ಯಶಸ್ಸು ಲಭಿಸಿದೆ ಎಂದು ಬೆಂಗಳೂರು ವಲಯದ ಮುಖ್ಯಸ್ಥರಾದ ಬಿ.ಶಿವರಾಂ ತಿಳಿಸಿದರು.

ಮಂಡ್ಯ ನಗರದ ಕೆಎಚ್‌ಬಿ ಕಾಲೋನಿಯಲ್ಲಿರುವ ಬ್ಯಾಂಕ್ ಆಫ್ ಬರೋಡ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಇಂದು ಬ್ಯಾಂಕ್ ಆಫ್ ಬರೋಡ ಶಾಖೆಗಳ ಮುಖ್ಯ ಶಾಖಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರಿ ಭಾಗವಹಿಸಿ ಮಾತನಾಡಿದರು.

ವ್ಯಾವಹಾರಿಕವಾಗಿ, ಬ್ಯಾಂಕಿನ ಪ್ರತಿಯೊಂದು ಉತ್ಪನ್ನಗಳ ಮಾರಾಟ ಹಾಗೂ ಗ್ರಾಹಕರಿಗೆ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಮಂಡ್ಯ ವಲಯವು ರಾಷ್ಟ್ರಮಟ್ಟದಲ್ಲಿ ತ್ತಮ ಹೆಸರು ಗಳಿಸಿದೆ. ಇದೆಲ್ಲ ಸಾಧ್ಯವಾಗಿರುವುದು ಪ್ರತಿಯೊಂದು ಶಾಖೆಗಳ ಬೆಳವಣಿಗೆಯಿಂದ ಹಾಗೂ ಶಾಖಾಧಿಕಾರಿಗಳ ಕಾರ್ಯ ಚಟುವಟಿಕೆಗಳಿಂದ ಎಂದು ತಿಳಿಸಿದ ಅವರು, ಶಾಖೆಯ ಮುಖ್ಯಸ್ಥರನ್ನು ಅಭಿನಂದಿಸಿದರು. ಗ್ರಾಹಕರ ಕುಂದು ಕೊರತೆಗಳನ್ನು ನಿಭಾಯಿಸುವುದಕ್ಕೆ ಮೊದಲ ಪ್ರಾಧಾನ್ಯತೆಯನ್ನು ನೀಡಬೇಕು ಎಂದು ತಿಳಿಸಿದರು.

ಪ್ರಗತಿ ಪರಿಶೀಲನಾ ಸಭೆಯ ಮುಖ್ಯ ಭಾಗವಾಗಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಸಾಲ ಯೋಜನೆ(MSME) ಯಡಿಯಲ್ಲಿ ಮಂಡ್ಯ ಮುಖ್ಯ ಶಾಖೆಯಿಂದ ಹಲವರಿಗೆ ಚೆಕ್ ವಿತರಿಸಲಾಯಿತು.

ಲೋಕೇಶ್ ಮಾಲಿಕತ್ವದ ಎಬಿಬಿ ಕನ್ಸ್ಟ್ರಕ್ಷನ್ ಕಂಪೆನಿಗೆ ಮಂಜೂರಾದ ಎರಡು ಕೋಟಿ ರೂ.ಸಾಲದ ಚೆಕ್ಕನ್ನು ವಿತರಿಸಲಾಯಿತು. ಹಾಗೂ ಎನ್.ಅಜಯ್ ಮಾಲೀಕತ್ವದ ಇಂಡೋಸ್ ಪೈಂಟ್ಸ್ ಉದ್ದಿಮೆಗೆ ಮಂಡ್ಯ ಶಾಖೆಯಿಂದ ಮಂಜೂರಾದ ರೂ.25 ಲಕ್ಷದ ಚೆಕ್ಕನ್ನು ವಿತರಿಸಲಾಯಿತು. ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ಯಮಿ ಯೋಜನೆ(PMFME) ಅಡಿಯಲ್ಲಿ ಪಾಂಡವಪುರ ಶಾಖೆ ವತಿಯಿಂದ ಶ್ರೀ ಕಾಳೇಶ್ವರಿ ಬೆಲ್ಲ ಸಂಸ್ಕರಣಾ ಘಟಕಕ್ಕೆ ರೂ 34,50,000 ಚೆಕ್ಕನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಬ್ಯಾಂಕ್ ಆಫ್ ಬರೋಡ ಪ್ರಾದೇಶಿಕ ಕಚೇರಿಯ ಪ್ರಧಾನ ವ್ಯವಸ್ಥಾಪಕರಾದ ರೂಪ, ಹಾಗೂ ಉಪ ಪ್ರಧಾನ ವ್ಯವಸ್ಥಾಪಕ ಶ್ರೀ ನೇತ್ರಾನಂದ, ಜಿಲ್ಲಾ ಅಗ್ರಣಿಯ ಬ್ಯಾಂಕ್ ಜಿಲ್ಲಾ ಮುಖ್ಯ ವ್ಯವಸ್ಥಾಪಕ ದೀಪಕ್ ಎಂ.ಪಿ ಬ್ಯಾಂಕ್ ಆಫ್ ಬರೋಡ ಆರ್ ಸಿ ಟಿ ಸಂಸ್ಥೆ ನಿರ್ದೇಶಕ ವಿವೇಕ್ ಹಾಗೂ ಮಂಡ್ಯ ವಲಯದ ಎಲ್ಲಾ ಬ್ಯಾಂಕ್ ಆಫ್ ಬರೋಡ ಶಾಖಾ ಮುಖ್ಯಸ್ಥರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!