Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಾಂಗ್ರೆಸ್‌ನಿಂದ ʼಬಿಜೆಪಿ ರೌಡಿ ಮೋರ್ಚಾʼ ವೆಬ್‌ಸೈಟ್‌ ಅನಾವರಣ

  • ಬಿಜೆಪಿಗೆ ತಿರುಗೇಟು ನೀಡಲು ‘ಕಮಲ ಅಭ್ಯರ್ಥಿಗಳ ಪಟ್ಟಿ ಸೋರಿಕೆ
  • ರೌಡಿಗಳ ರಾಜಕೀಯ ಪ್ರವೇಶ, ವಿವಾದ  ರಾಜ್ಯದ ಗಮನ  ಸೆಳೆಯುತ್ತಿದೆ

ಬಿಜೆಪಿ ಸರ್ಕಾರದ ವಿರುದ್ಧ ʼಪೇ ಸಿಎಂʼ ಅಭಿಯಾನ ಮಾಡಿ ಭಾರಿ ಸದ್ದು ಮಾಡಿದ್ದ ಕಾಂಗ್ರೆಸ್‌ ಈಗ ಹೊಸದೊಂದು ಅಭಿಯಾನಕ್ಕೆ ಮುಂದಾಗಿದೆ.

ಕೋಮು ರಾಜಕಾರಣ ಸಾಲದು ಎಂಬಂತೆ ರೌಡಿ ರಾಜಕೀಯ ಮಾಡಲು ಹೊರಟಿದೆ ಬಿಜೆಪಿ. ರಾಮರಾಜ್ಯದ ಹೆಸರು ಹೇಳುತ್ತಿದ್ದ ಬಿಜೆಪಿ ನಾಯಕರು ರೌಡಿ ರಾಜ್ಯ ಮಾಡಲು ಹೊರಟಿದ್ದಾರೆ.

ರಾಜ್ಯದಲ್ಲಿ ನಡೆಯುತ್ತಿರುವ ರೌಡಿಗಳ ರಾಜಕೀಯ ಪ್ರವೇಶ ವಿವಾದ ಗಮನ ಸೆಳೆಯುತ್ತಿದ್ದು, ಕಾಂಗ್ರೆಸ್ ತನ್ನ ಹೊಸ ಅಭಿಯಾನಕ್ಕೆ ಇದನ್ನೇ ಆಧಾರವಾಗಿಟ್ಟುಕೊಂಡಿದೆ. ಬಿಜೆಪಿಗೆ ತಿರುಗೇಟು ನೀಡಲು ‘ಕಮಲ ಅಭ್ಯರ್ಥಿಗಳ ಪಟ್ಟಿ ಸೋರಿಕೆ’ ಮಾಡುವ ಮೂಲಕ ಕಾಂಗ್ರೆಸ್ ವಿನೂತನ ಅಭಿಯಾನ ಆರಂಭಿಸಿದೆ.

‘ಬಿಜೆಪಿಯ ರೌಡಿಸಂ ರಾಜಕೀಯವನ್ನು ಬಯಲಿಗೆಳೆಯಲು ಕರ್ನಾಟಕ ಪ್ರದೇಶ ಕಾಂಗ್ರೆಸ್‌ನಿಂದ ‘ಸೋರಿಕೆಯಾದ’ ಅಭ್ಯರ್ಥಿಗಳ ಪಟ್ಟಿ’ಯೊಂದಿಗೆ ವೆಬ್‌ಸೈಟ್ ಅನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ.

“ಕರ್ನಾಟಕ, ಬಿಜೆಪಿ ರೌಡಿ ಶೀಟರ್‌ಗಳು ಮತ್ತು ಸಮಾಜವಿರೋಧಿಗಳ ತಾಣವಾಗಿ ಮಾರ್ಪಟ್ಟ ನಂತರ, ದಿನಕ್ಕೊಬ್ಬ ಹೊಸ ರೌಡಿ ಪಕ್ಷಕ್ಕೆ ಸೇರ್ಪಡೆಗೊಂಡ ನಂತರ, ಬಿಜೆಪಿ ಅಭ್ಯರ್ಥಿಯಾಗಲು ಮಾನದಂಡಗಳ ಫೋಟೋಗಳೊಂದಿಗೆ ‘ಸೋರಿಕೆಯಾದ’ ಅಭ್ಯರ್ಥಿಗಳ ಪಟ್ಟಿ”ಯನ್ನು ಕಾಂಗ್ರೆಸ್   ವೆಬ್‌ಸೈಟ್ https://www.bjprowdymorcha.com/ ನಲ್ಲಿ ಬಿಡುಗಡೆ ಮಾಡಿದೆ.

“ಬಿಜೆಪಿಯ ಕಪಾಟಿನಿಂದ ಅಸ್ಥಿಪಂಜರಗಳು ಉರುಳುತ್ತಿರುವಾಗ, ಚುನಾವಣೆಯ ಪೂರ್ವದಲ್ಲಿ ಬಿಜೆಪಿಯ ಅನೌಪಚಾರಿಕತೆಯನ್ನು ಪ್ರದರ್ಶಿಸಲು ಸಂಪೂರ್ಣ ವೆಬ್‌ಸೈಟ್ ಅನ್ನು ಮೀಸಲಿಟ್ಟಿದೆ” ಎಂದು ಕಾಂಗ್ರೆಸ್‌ ಹೇಳಿಕೊಂಡಿದೆ. 

ಬೆಂಗಳೂರಿನ ರೌಡಿ ಶೀಟರ್‌ಗಳು ಮತ್ತು  ಸ್ಲಂ ಲಾರ್ಡ್‌ಗಳನ್ನು ಬಿಜೆಪಿ ತನ್ನ ಕಾರ್ಯಕರ್ತರನ್ನಾಗಿ ಸೇರಿಸಿಕೊಳ್ಳುವ ಮೂಲಕ ರಾಜಕೀಯವನ್ನು ಹೇಗೆ ಅಪರಾಧೀಕರಿಸುತ್ತಿದೆ ಎಂಬುದರ ಕುರಿತು ವಿವರಗಳು ಹೊಸ ವೆಬ್‌ಸೈಟ್‌ನಲ್ಲಿವೆ.

ಬೆಂಗಳೂರು ನಗರದ ದೊಡ್ಡ ಕೊಳೆಗೇರಿಯೊಂದರಲ್ಲಿ ಬಿಜೆಪಿಯ ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಹಲವು ಮುಖಂಡರು ಗ್ಯಾಂಗ್‌ಸ್ಟರ್  ಸೈಲೆಂಟ್ ಸುನೀಲನ ಜೊತೆಗೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದರು. ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ ರೌಡಿಶೀಟರ್‌ಗಳು ಬಿಜೆಪಿ ಪಕ್ಷವನ್ನು ಸೇರುತ್ತಿದ್ದಾರೆ ಎಂದು ಮಾತುಗಳು ಹರಿದಾಡಿದ್ದವು.

ಈ ಬೆಳವಣಿಗೆ ಬೆನ್ನಲ್ಲೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಒಂದು ವಾರದಿಂದ ಬಿಜೆಪಿ ಸರ್ಕಾರದ ಈ ಕ್ರಮವನ್ನು ವಿರೋಧಿಸುತ್ತಾ ಸರಣಿ ಟ್ವೀಟ್‌ ಮಾಡುತ್ತಾ ಬರುತ್ತಿದೆ; ಈಗ ಒಂದು ಹೆಜ್ಜೆ ಮುಂದೆ ಹೋಗಿ ʼಬಿಜೆಪಿ ರೌಡಿ ಮೋರ್ಚಾʼ ವೆಬ್‌ಸೈಟ್‌ ಅನಾವರಣ ಮಾಡಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!