Thursday, September 19, 2024

ಪ್ರಾಯೋಗಿಕ ಆವೃತ್ತಿ

ಗೌರಿ ಗಣೇಶ ಹಬ್ಬದ ದಿನದಿಂದ ಮದ್ದೂರು ವಿಧಾನಸಭಾ ಕ್ಷೇತ್ರದ ಪರ್ವ ಆರಂಭ – ಶಾಸಕ ಉದಯ್

ವರದಿ : ನ.ಲಿ.ಕೃಷ್ಣ

ಗೌರಿ ಗಣೇಶ ಹಬ್ಬದ ದಿನದಿಂದ ಮದ್ದೂರು ವಿಧಾನಸಭಾ ಕ್ಷೇತ್ರದ ಪರ್ವ ಆರಂಭ – ಶಾಸಕ ಉದಯ
ಗೌರಿಗಣೇಶ ಹಬ್ಬದ ದಿನದಿಂದ ಮದ್ದೂರು ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿ ಪರ್ವ ಆರಂಭ ಆರಂಭವಾಗಲಿದೆ ಎಂದು ಶಾಸಕ ಉದಯ್ ಜನರಿಗೆ ಭರವಸೆ ನೀಡಿದರು.

ನಗರಕೆರೆ ಗ್ರಾಮದ ಜನಸಂಪರ್ಕ ಸಭೆಯಲ್ಲಿ ಜನರ ಕುಂದು ಕೊರತೆ ಆಲಿಸಿ ಮಾತನಾಡಿದರು.

ಕೆಮ್ಮಣ್ಣು ನಾಲೆ, ಬೈರನ್ ನಾಲೆ ಸೇರಿ ಹಲವು ನಾಲೆಗಳ ಲೈನಿಂಗ್ ಮತ್ತು ಕವರಿಂಗ್ ಡಕ್ ಹಾಕಲು‌ ಅನುಮೊದನೆ ದೊರೆತಿದೆ ಎಂದರು.

ಮದ್ದೂರು ಆಸ್ಪತ್ರೆ ಬಳಿ ಹಾಗು ಕೆಮಣ್ಣು ನಾಲೆ ಸರ್ಕಲ್ ಬಳಿ ಬಸ್ ಶೆಲ್ಟರ್ ಹಾಗೂ ಶೌಚಾಲಯ ನಿರ್ಮಾಣ ಶೀಘ್ರದಲ್ಲೆ ಮಾಡಿಕೊಡುವ ಭರವಸೆ ನೀಡಿದರು.

ಕಸಬಾ ಎರಡರ ನಾಡಕಛೇರಿ ಹೊನ್ನಲಗೆರೆಯಲ್ಲಿದ್ದು, ಸಂಪರ್ಕ ಕೊರತೆಯಿಂದ ಇದರ ಉಪಶಾಖೆ ಮದ್ದೂರು ತಹಶಿಲ್ದಾರರ ಕಛೇರಿ ಯಲ್ಲಿ ಆತಗೂರು ಹೋಬಳಿ ಮಾದರಿಯಲ್ಲಿ ಮಾಡುವ ಕುರಿತು ಪರಿಶೀಲಿಸುವಾ ಭರವಸೆ ನೀಡಿದರು.

ನಗರಕೆರೆ ಕೆರೆ ಹೂಳೆತ್ತುವ ಹಾಗೂ ಕೆರೆ ಏರಿ ಅಭಿವೃದ್ಧಿಪಡಿಸಿ ವಾಯುವಿಹಾರ ನಡಿಗೆ ಮಾಡುವ ಕುರಿತು ಈ ಹಿಂದೆಯೇ ಟೆಂಡರ್ ಕರೆದು ಏಕವ್ಯಕ್ತಿ ಟೆಂಡರ್ ಬಂದಿದ್ದರಿಂದಾಗಿ ಪ್ರಕ್ರಿಯೆ ಮೊಟಕುಗೊಂಡಿದೆ.

ಇದೀಗ ಮತ್ತೆ ಅನುದಾನ ಪಡೆದು ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಜನಸಂಪರ್ಕ ಸಭೆಯಲ್ಲಿದ್ದ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ನಾಗರಾಜು ಸಭೆಗೆ ಮಾಹಿತಿ ನೀಡಿದರು.

ಕಛೇರಿಗಳಲ್ಲಿ ಸಕಾಲ ಕಾಯ್ದೆಅಡಿ ಅರ್ಜಿ ಸಲ್ಲಿಸಿ ಕಂಪ್ಯೂಟರಿಕೃತ ಸ್ವಿಕೃತಿ ಪಡೆಯುವುದನ್ನು ಕಡ್ಡಾಯಗೊಳಿಸಿ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಬೇಕೆಂದು ಕಛೇರಿಗಳಲ್ಲಿ ದೂರು ಮತ್ತು ಸಲಹಾ ಪೆಟ್ಟಿಗೆ ಇಟ್ಟು ನಿಯಮಿತವಾಗಿ ನಿರ್ವಹಿಸಬೇಕು ಎಂದು ಸಭೆಯಲ್ಲಿ ಆಗ್ರಹ ಕೇಳಿಬಂತು.

ಈ ಕುರಿತು ಸಕಾಲದಡಿ ಅರ್ಜಿ ಪಡೆಯುತ್ತಿರುವುದಾಗಿ ಗ್ರಾಮಲೆಖ್ಖಿಗರಾದ ವರಲಕ್ಷ್ಮಿ ಸಭೆಗೆ ಮಾಹಿತಿ ನೀಡಿದರು.

ತಾ. ಪಂ. ಸಹಾಯಕ ನಿರ್ದೆಶಕ ಮಂಜುನಾಥ ರವರು ಗ್ರಾ. ಪಂ. ನ ಎಲ್ಲಾ ಅರ್ಜಿಗಳನ್ನು ನೂತನ ತಂತ್ರಾಂಶದಡಿ ಸಲ್ಲಿಸಲಾಗುತ್ತಿದೆ ಎಂದರು. ನೂತನ ಗ್ರಾಮಗಸ್ತು ವ್ಯವಸ್ಥೆ ಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕೆಂದು ಜನರು ಒತ್ತಾಯಿಸಿದರು. ಗ್ರಾ. ಪಂ. ಗೆ ಸಂಬಂದಿಸಿದ ಸಮಸ್ಯೆಗಳಿಗೆ ಪಿಡಿಓ ಮಧುಸೂದನ್ ಪರಿಹರಿಸುವ ಭರವಸೆ ನೀಡಿದರು.

ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ವಳಗೆರೆಹಳ್ಳಿ ಬಿ. ವಿ. ಶಂಕರೇಗೌಡ, ಗ್ರಾ ಪಂ ಅಧ್ಯಕ್ಷೆ ಉಮಾ, ಜಿ. ಪಂ. ಮಾಜಿ ಅಧ್ಯಕ್ಷ ಕಂಠಿ ಸುರೇಶ್, ಯಾಜಮಾನ್ ಶಿವರಾಮ್, ಶಿವಲಿಂಗಯ್ಯ ಮತ್ತು ಎನ್ ಎಸ್ ಪುಟ್ಟೇಗೌಡ, ರೀತೇಶ್, ಪ್ರವೀಣ್, ಮಹೇಶ್, ನಂದೀಶ್,  ಮಹೇಶ್ ನಾಗರಾಜ್, ಎನ್ ಎಮ್ ರಮೇಶ್, ಎನ್. ಎಮ್. ಕೃಷ್ಣ, ಪಶುಪತಿ, ಎನ್ ಎಸ್ ಗಂಗಾಧರ್, ಸ್ಪೂರ್ತಿ ಮತ್ತಿತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!