Friday, September 20, 2024

ಪ್ರಾಯೋಗಿಕ ಆವೃತ್ತಿ

ಇಂದು ಪೆರಿಯಾರರ 143ನೇ ಜನ್ಮದಿನ

ದ್ರಾವಿಡ ಚಳವಳಿಯ ಅಸ್ಮಿತೆಯಾದ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ರ 143ನೇ ಜನ್ಮದಿನವಿಂದು.

ತಮಿಳುನಾಡಿನ ಈರೋಡಿನಲ್ಲಿ ಸೆಪ್ಟೆಂಬರ್ 17. 1879ರಲ್ಲಿ ಜನಿಸಿದ ಪೆರಿಯಾರರು ದ್ರಾವಿಡ ಚಳವಳಿಯನ್ನು ಗಟ್ಟಿಗೊಳಿಸುತ್ತ ತಮಿಳುನಾಡಿನ ದೇವಸ್ಥಾನಗಳಲ್ಲಿ ಬ್ರಾಹ್ಮಣೇತರ ಅರ್ಚಕರ ನೇಮಕಾತಿಗಾಗಿ ಹೋರಾಟ ಆರಂಭಿಸಿ ತಮ್ಮ ಜೀವಿತಾವಧಿಯಲ್ಲಿ ಬ್ರಾಹ್ಮಣ್ಯ ಹಾಗು ಮೌಡ್ಯದ ವಿರುದ್ಧ ಹೋರಾಡುತ್ತಲೇ ತಮಿಳುನಾಡಿನಲ್ಲಿ ವೈಚಾರಿಕ ಸಾಕ್ಷಿಪ್ರಜ್ಞೆಯಾಗಿ ಜನಮಾನಸದಲ್ಲಿ ಉಳಿದಿದ್ದಾರೆ.

ಕೋಮುವಾದಿಗಳು ಬೇರೂರುತ್ತಿರುವ ಇವತ್ತಿನ ಪ್ರತಿಕೂಲ ಪರಿಸ್ಥಿಯಲ್ಲಿ ಪೆರಿಯಾರರ ದಿಟ್ಟ ಹೋರಾಟಗಳೇ ತಮಿಳುನಾಡಿನಲ್ಲಿಂದು ಒಡೆದಾಳುವ ಮನಸ್ಥಿತಿಯ ಪಕ್ಷಗಳನ್ನು ದೂರದಲ್ಲೇ ಇಟ್ಟು ದ್ರಾವಿಡ ಹೋರಾಟವನ್ನು ಅಲ್ಲಿನ ಜನರು ಇವತ್ತಿಗೂ ಮುಂದುವರಿಸಿಕೊಂಡು ಬರುತ್ತಿದ್ದಾರೆ.

ಕರ್ನಾಟಕದಲ್ಲೂ ಪೆರಿಯಾರರ ಹೋರಾಟದ ಹೆಜ್ಜೆ ಗುರುತುಗಳು ಮೂಡಿ ಇಲ್ಲಿನ ಜನರೆಲ್ಲರು ಜಾತಿ ಧರ್ಮಗಳ ಮೀರಿ ಬದಕುವ ಬದುಕ ರೂಡಿಸಿ ಕೊಳ್ಳಲಿ ಎಂಬುದು ಪೆರಿಯಾರರನ್ನು ಅಧ್ಯನಮಾಡುವ ಇಲ್ಲಿನ ವೈಚಾರಿಕರ ಆಶಯವಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!