Thursday, September 19, 2024

ಪ್ರಾಯೋಗಿಕ ಆವೃತ್ತಿ

ಕನ್ನಡ ಸಾಹಿತ್ಯ ಜಾತ್ರೆ | ಸ್ವಯಂ ಸೇವಕರಿಗೆ ಪೂರ್ಣ ಪ್ರಮಾಣದ ತರಬೇತಿ : ವಿವೇಕಾನಂದ

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಪರಿಣಾಮಕಾರಿಯಾಗಿ ಜರುಗಲು ಮಂಡ್ಯ ಜಿಲ್ಲೆಯಲ್ಲಿರುವ ಎನ್ ಸಿಸಿ, ಎನ್ ಎಸ್ ಎಸ್ ಹಾಗೂ ಸ್ಕೌಟ್ ಮತ್ತು ಗೈಡ್ಸ್ ತಂಡಗಳ ಸ್ವಯಂ ಸೇವಕರಿಗೆ ಪೂರ್ಣ ಪ್ರಮಾಣದ ತರಬೇತಿ ನೀಡುವುದು ಬಹುಮುಖ್ಯವಾಗಿದೆ ಎಂದು ವಿಧಾನಪರಿಷತ್ ಶಾಸಕ ಹಾಗೂ ಸ್ವಯಂ ಸೇವಕರು ಮತ್ತು ಉಸ್ತುವಾರಿ ಸಮಿತಿಯ ಅಧ್ಯಕ್ಷ ಕೆ ವಿವೇಕಾನಂದ ತಿಳಿಸಿದರು.

ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಸ್ವಯಂ ಸೇವಕರು ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿರುವ ಪದವಿ ಕಾಲೇಜುಗಳು, ಪಿಯು ಕಾಲೇಜು, ಪ್ರೌಢಶಾಲೆಯ ಎನ್ ಸಿ ಸಿ, ಎನ್ ಎಸ್ ಎಸ್ ತಂಡಗಳು, ಸ್ಕೌಟ್ ಅಂಡ್ ಗೈಡ್ಸ್ ತಂಡಗಳು, ಬಿಎಡ್ ಕಾಲೇಜು ವಿದ್ಯಾರ್ಥಿಗಳನ್ನು ಸ್ವಯಂ ಸೇವಕರುಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಅವರಿಗೆ ಬ್ಯಾಡ್ಜ್, ಟೀ ಶರ್ಟ್, ಟೋಪಿ ಹಾಗೂ ಕಾರ್ಯಕ್ರಮದ ಕೊನೆಯಲ್ಲಿ ಅಭಿನಂದನಾ ಪತ್ರವನ್ನು ನೀಡುವಂತೆ ತಿಳಿಸಿದರು.

ಮಂಡ್ಯ ಜಿಲ್ಲೆಯಲ್ಲಿ ಬರುವ ಪಿ ಯು ಕಾಲೇಜಿನ ಸ್ವಯಂ ಸೇವಕರುಗಳ ತಂಡಕ್ಕೆ ಒಬ್ಬ ಸದಸ್ಯರನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡಿ ಜವಾಬ್ದಾರಿಯನ್ನು ವಹಿಸಬೇಕು. ಅದರಂತೆಯೇ ಪದವಿ ಕಾಲೇಜಿನ ಸ್ವಯಂ ಸೇವಕರ ತಂಡ, ವಿಶ್ವ ವಿದ್ಯಾನಿಲಯದ ಅಡಿಯಲ್ಲಿ ಬರುವ ಎನ್ ಸಿಸಿ, ಎನ್ ಎಸ್ ಎಸ್ ತಂಡ, ಬಿಎಡ್ ವಿದ್ಯಾರ್ಥಿಗಳು, ಭಾರತೀಯ ರೆಡ್ ಕ್ರಾಸ್ ಸಂಸ್ಥೆಗಳ ಮುಖ್ಯಸ್ಥರನ್ನು ಸಂಪರ್ಕಿಸಿ ಪ್ರತಿ ತಂಡಕ್ಕೂ ಉಪ ಸಮಿತಿಗಳ ಸದಸ್ಯರಿಗೆ ಜವಾಬ್ದಾರಿ ವಹಿಸಲಾಗುವುದು ಎಂದರು.

ಜಿಲ್ಲೆಯಲಿ ಆಸಕ್ತಿಯುಳ್ಳ ವಿವಿಧ ಸಂಘ ಸಂಸ್ಥೆಗಳ ಹಾಗೂ ಸ್ವಯಂ ಪ್ರೇರಿತವಾಗಿ ಸಮ್ಮೇಳನದಲ್ಲಿ ಕಾರ್ಯ ನಿರ್ವಹಿಸುವವವರಿಗೂ ಅಭಿನಂದನಾ ಪತ್ರ ಹಾಗೂ ಸಮವಸ್ತ್ರವನ್ನು ನೀಡಬೇಕು ಎಂದರು.

ದೈಹಿಕ ಶಿಕ್ಷಕರು ಹಾಗೂ ಬಿ ಎಡ್ ಕಾಲೇಜಿನ ಶಿಕ್ಷಕರನ್ನು ಸಮ್ಮೇಳನದಲ್ಲಿ ತೊಡಗಿಸಿಕೊಳ್ಳುವುದರಿಂದ ಅವರು ಚಟುವಟಿಕೆಯಿಂದ ಹಾಗೂ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಾರೆ ಎಂದು ಚರ್ಚಿಸಲಾಯಿತು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಹಾಗೂ ಸಮಿತಿಯ ಸದಸ್ಯ ಕಾರ್ಯದರ್ಶಿ ಶಿವಮೂರ್ತಿ, ಕಸಾಪ ಸಮ್ಮೇಳನನದ ಸಂಚಲಾಕಿ ಡಾ ಮೀರಾಶಿವಲಿಂಗಯ್ಯ, ಸ್ಕೌಟ್ ಅಂಡ್ ಗೈಡ್ಸ್ ನ ಮುಖ್ಯಸ್ಥ ಭಕ್ತವತ್ಸಲ, ಶಿಕ್ಷಣ ಇಲಾಖೆಯ ವಿಜಯಕುಮಾರ್, ಕಂದಾಯ ಇಲಾಖೆಯ ತಮ್ಮಣ್ಣಗೌಡ, ಡಾ ಹುಸ್ಕೂರು ಕೃಷ್ಣೆಗೌಡ, ವಿ ಹರ್ಷ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಬಹುಕಾಲ ನೆನಪಿಡುವಂತಹ ಸ್ಮರಣಿಕೆ

87 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಆಗಮಿಸುವವ ಗಣ್ಯರಿಗೆ ಬಹುಕಾಲ ನೆನಪಿಡುವಂತಹ ಸ್ಮರಣಿಕೆಯನ್ನು ನೀಡಬೇಕು ಎಂದು ಸ್ಮರಣಿಕೆ ಸಮಿತಿಯ ಅಧ್ಯಕ್ಷರು ಕೆ ವಿವೇಕಾನಂದ ತಿಳಿಸಿದರು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪ್ರತಿಯೊಬ್ಬರ ಪಾತ್ರವು ಬಹುಮುಖ್ಯವಾಗಿದೆ. ಆದ್ದರಿಂದ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಿಸೋಣ ಎಂದರು.

ಸಮ್ಮೇಳನದಲ್ಲಿ ಸಮಿತಿಗಳ ಅಧ್ಯಕ್ಷರುಗಳಿಗೆ, ಗಣ್ಯರಿಗೆ, ಕಲಾವಿದರಿಗೆ ಹಾಗೂ ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸುವ ಅತಿಥಿಗಳಿಗೆ ಸೇರಿದಂತೆ ಕನಿಷ್ಠ 4,000 ಪ್ರಶಸ್ತಿ ಪತ್ರಗಳ ಅವಶ್ಯಕತೆ ಇದೆ. ಅದರ ಜೊತೆಗೆ 3000 ಬ್ಯಾಗ್ ಗಳ ವ್ಯವಸ್ಥೆಯನ್ನು ಮಾಡಬೇಕು. ಎಲ್ಲಾ ಸ್ವಯಂ ಸೇವಕರಿಗೆ ಪ್ರಶಸ್ತಿ ಪತ್ರ ಹಾಗೂ ಮುಖಂಡರುಗಳಿಗೆ ಸ್ಮರಣಿಕೆಯನ್ನು ನೀಡಬೇಕು ಎಂದು ತಿಳಿಸಿದರು.

ಹೊರ ಜಿಲ್ಲೆಯಿಂದ ಬರುವ ಕನ್ನಡಿಗರು ಹೊಗಳುವ ರೀತಿಯಲ್ಲಿ ಸ್ಮರಣಿಕೆಯನ್ನು ನೀಡಬೇಕು. ಎಲ್ಲಾ ಜಿಲ್ಲಾಧ್ಯಕ್ಷರಿಗೆ ಸನ್ಮಾನ ಹಾಗೂ ನೆನಪಿನ ಕಾಣಿಕೆಯನ್ನು ನೀಡಬೇಕು. ಪ್ರತಿ ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಇರಬೇಕು. ಸ್ಮರಣಿಕೆಯು ಪರಿಸರ ಸ್ನೇಹಿಯಾಗಿರಬೇಕು ಎಂದರು.

ಸ್ಮರಣಿಕೆ ಸಮಿತಿಯ ಉಪ ಸಮಿತಿಗಳನ್ನು ರಚಿಸಿ ಮುಂದಿನ ದಿನಗಳಲ್ಲಿ ಸಭೆ ನಡೆಸಿ ಚರ್ಚಿಸಲಾಗುವುದು. ಇದಕ್ಕೆ ಪ್ರತಿಯೊಬ್ಬರ ಸಹಕಾರ ಮುಖ್ಯವಾಗಿದೆ ಎಂದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಶಿವಮೂರ್ತಿ, ಕಸಾಪ ಸಮ್ಮೇಳನನದ ಸಂಚಾಲಕಿ ಡಾ ಮೀರಾಶಿವಲಿಂಗಯ್ಯ, ಸ್ಮರಣಿಕೆ ಸಮಿತಿಯ ಕಾರ್ಯಾಧ್ಯಕ್ಷ ಜಿ ಟಿ ವೀರಪ್ಪ, ಉಪನ್ಯಾಸಕ ಮುತ್ತೇಗೆರೆ ಮಂಜು, ಮುಜರಾಯಿ ಇಲಾಖೆಯ ತಹಶೀಲ್ದಾರ್ ತಮ್ಮಣ್ಣಗೌಡ, ಡಾ ಹುಸ್ಕೂರು ಕೃಷ್ಣೆಗೌಡ, ವಿ ಹರ್ಷ ಚಂದ್ರಲಿಂಗು, ಮುಖಂಡರುಗಳಾದ ಕುಮಾರ್, ನಾಗೇಶ್, ಸೋಮು, ಕೃಷ್ಣ ಸ್ವರ್ಣಸಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!