Wednesday, April 17, 2024

ಪ್ರಾಯೋಗಿಕ ಆವೃತ್ತಿ

ಜುಲೈ 10 ರಂದು ‘ಗೌಡ್ರ ಗದ್ಲ’ ನಾಟಕ ಪ್ರದರ್ಶನ

ರಂಗಭೂಮಿ ಕಲಾವಿದರು ಮತ್ತು ಅನಾಥ ಮಕ್ಕಳ ಶಿಕ್ಷಣ ಸಹಾಯಾರ್ಥ ಮಂಡ್ಯದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜುಲೈ 10ರಂದು “ಗೌಡ್ರ ಗದ್ಲ” ಹಾಸ್ಯ ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ಬೆಂಗಳೂರಿನ ಮಾತೃಶ್ರೀ ಕಲಾ ಸಂಘದ ಅಧ್ಯಕ್ಷೆ, ನಟಿ ಪಂಕಜಾ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,
ಮಾತೃಶ್ರೀ ಕಲಾ ಸಂಘ ಮತ್ತು ಸಾಯಿ ಸೇವಾ ಅಂಡ್ ಕಲ್ಚರಲ್ ಟ್ರಸ್ಟ್ ಸಹಯೋಗದಲ್ಲಿ ಎರಡು ಷೋಗಳಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ. ಮಧ್ಯಾಹ್ನ 3.30 ಹಾಗೂ ಸಂಜೆ 6.30ಕ್ಕೆ ನಾಟಕ ಪ್ರದರ್ಶನ ಆರಂಭಗೊಳ್ಳಲಿದ್ದು, ಕಲಾಪ್ರೇಮಿಗಳು ತಲಾ 150 ರೂ. ಸಹಾಯಧನ ಪಾವತಿಸಿ ನಾಟಕ ‌ವೀಕ್ಷಣೆ ಮಾಡಬಹುದು‌ ಎಂದು ತಿಳಿಸಿದರು.

ತಾವು ಈಗಾಗಲೇ ಕುರುಕ್ಷೇತ್ರ, ಪ್ರಚಂಡ ರಾವಣ,ದಕ್ಷಯಜ್ಞ ಸೇರಿದಂತೆ ಹಲವಾರು ನಾಟಕಗಳನ್ನು ಪ್ರದರ್ಶಿಸಿದ್ದು,ಇದರಲ್ಲಿ
“ಗೌಡ್ರ ಗದ್ಲ” ಹಾಸ್ಯನಾಟಕ ಕೂಡ ಒಂದಾಗಿದೆ.

ಈ ನಾಟಕದಲ್ಲಿ ನಟ ಸುಧೀರ್ ಅವರು ನಟಿಸುತ್ತಿದ್ದ ಪಾತ್ರವನ್ನು ಮಾಲತಿ ಸುಧೀರ್ ಅವರ ಒತ್ತಾಸೆಯಂತೆ ನಾನು ನಿರ್ವಹಿಸುತ್ತಿದ್ದೇನೆ. ನಾಟಕ ಪ್ರದರ್ಶನದಿಂದ ಬರುವ ಹಣದಲ್ಲಿ ತಲಾ ಶೇ.25 ರಷ್ಟು ಹಣವನ್ನು ಕಲಾವಿದರ ಮಕ್ಕಳು, ರೈತರ ಮಕ್ಕಳ ಶಿಕ್ಷಣಕ್ಕಾಗಿ ಹಾಗೂ ಶೇ.25ರಷ್ಟನ್ನು ಅಸಕ್ತ ಕಲಾವಿದರಿಗೆ ನೀಡಲಾಗುವುದು. ಉಳಿದ ಶೇ.25ರಷ್ಟು ಹಣವನ್ನು ನಾಟಕ ಪ್ರದರ್ಶನದ ಖರ್ಚು- ವೆಚ್ಚಕ್ಕಾಗಿ ಬಳಸಿಕೊಳ್ಳಲಾಗುವುದು ಎಂದು ವಿವರಿಸಿದರು.

ಕಲಾವಿದರಿಗೆ ಸರಕಾರ ಕೇವಲ 2000 ಮಾಸಾಶನ ನೀಡುತ್ತಿದೆ. ಈ ಹಣ ಯಾವುದಕ್ಕೂ ಸಾಲದಾಗಿದ್ದು, ಸರಕಾರ ಮಾಸಾಶನ ಮೊತ್ತವನ್ನು ಹೆಚ್ಚಿಸಬೇಕು. ಮೂರು ವರ್ಷದಿಂದ ‌ತಡೆಹಿಡಿದಿರುವ ಅನುದಾನವನ್ನು ಬಿಡುಗಡೆ ಮಾಡಬೇಕು. ಎಷ್ಟೋ ಕಲಾವಿದರಿಗೆ ವಾಸಿಸಲು ಮನೆ ಇಲ್ಲ. ಹೀಗಾಗಿ ತಮಿಳುನಾಡು ಮಾದರಿಯಲ್ಲಿ ಕರ್ನಾಟಕ ಸರಕಾರವು ರಾಜ್ಯದ ಎಲ್ಲಾ ಕಲಾವಿದರಿಗೆ ನಿವೇಶನ, ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಕಲಾವಿದ ಜಯರಾಮು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!