Thursday, September 19, 2024

ಪ್ರಾಯೋಗಿಕ ಆವೃತ್ತಿ

ಕೇಂದ್ರದಿಂದ ಬರಬೇಕಾದ ₹ 70,000 ಕೋಟಿ ಪಾಲು ಪಡೆಯಲು ಬಿಜೆಪಿ ಸರ್ಕಾರ ವಿಫಲ : ಸಂಸದ ಜಿ.ಸಿ.ಚಂದ್ರಶೇಖರ್

ಕೇಂದ್ರದ ಬಿಜೆಪಿ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಸುಮಾರು ₹ 70 ಸಾವಿರ ಕೋಟಿ ಗಳ ಪಾಲನ್ನು ಪಡೆಯಲು ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಆರೋಪಿಸಿದರು.

ಮಂಡ್ಯದಲ್ಲಿ ಸುದ್ದಿಗೋ‍ಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಅತೀ ಹೆಚ್ಚು ಜಿಎಸ್ಟಿ ಸಂದಾಯ ಮಾಡುವ 2ನೇ ರಾಜ್ಯ ಕರ್ನಾಟಕವಾಗಿದೆ. ಆದರೆ ಇಷ್ಟು ಹಣ ಕಟ್ಟಿದರೂ ನಮ್ಮ ಪಾಲು ನಮಗೆ ದೊರೆಯುತ್ತಿಲ್ಲ, 14ನೇ ಹಣಕಾಸು ಆಯೋಗ ಶಿಫಾರಸ್ಸಿನಂತೆ ರಾಜ್ಯಕ್ಕೆ 14,000 ಕೋಟಿ ಜಿಎಸ್ಟಿ ಹಣ ಕೇಂದ್ರದಿಂದ ದೊರೆಯಬೇಕಿದೆ. ಇದನ್ನು ಪಡೆದುಕೊಳ್ಳಲು ಸಿಎಂ ಬಸವರಾಜ ಬೊಮ್ಮಾಯಿ ನಿರ್ಲಕ್ಷ್ಯೆ ವಹಿಸುತ್ತಿದ್ದಾರೆ ಎಂದು ದೂರಿದರು.

ರೂಪಾಯಿ ಆಧಾರದಲ್ಲಿ ನೋಡಿದರೆ ರಾಜ್ಯವು ಕೇಂದ್ರಕ್ಕೆ 1 ರೂ. ಜಿಎಸ್ಪಿ ಪಾವತಿಸಿದರೆ ಕೇವಲ 29 ಪೈಸೆಯಷ್ಟೆ ನಮಗೆ ಕೇಂದ್ರದಿಂದ ಮರು ಸಂದಾಯವಾಗುತ್ತಿದೆ. ಅದರೆ ಉತ್ತರ ಭಾರತದ ರಾಜ್ಯವಾದ ಉತ್ತರ ಪ್ರದೇಶ 1 ರೂ.ತೆರಿಗೆ ಪಾವತಿಸಿ ಕೇಂದ್ರದಿಂದ 3.70 ರೂಪಾಯಿಯನ್ನು ಪಡೆದುಕೊಳ್ಳುತ್ತಿದೆ, ಬಿಹಾರವು 1 ರೂಪಾಯಿ ಪಾವತಿಸಿದರೆ ಕೇಂದ್ರದಿಂದ 3.20 ರೂ. ಪಡೆದುಕೊಳ್ಳುತ್ತದೆ. ಆಂದರೆ ದಕ್ಷಿಣ ರಾಜ್ಯಗಳ ತೆರಿಗೆ ಹಣದಲ್ಲಿ ಉತ್ತರದ ರಾಜ್ಯಗಳನ್ನು ಕೇಂದ್ರ ಸರ್ಕಾರ ಉದ್ದಾರ ಮಾಡುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.

ಮಿತಿ ಮೀರಿದ ಭ್ರಷ್ಟಾಚಾರ

ರಾಜ್ಯ ಬಿಜೆಪಿ ಸರ್ಕಾರವು ರಾಜ್ಯದಲ್ಲಿ 40% ಕಮಿಷನ್ ಸರ್ಕಾರ ಎಂದೇ ಕುಖ್ಯಾತಿಯಾಗಿದೆ. ಪಿಎಸ್ಐ ನೇಮಕಾತಿ ಹಗರಣ, ಗುತ್ತಿಗೆ ಕಾಮಗಾರಿಗಳಲ್ಲಿ 40% ಕಮಿಷನ್, ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಧಂದೆ ಹೀಗೆ ಹಲವು ಹಗರಣಗಳಲ್ಲಿ ಭಾಗಿಯಾಗಿದೆ, ಮಿತಿ ಮೀರಿದ ರಸಗೊಬ್ಬರಗಳ ಬೆಲೆಯನ್ನು ಇತ್ತಿಚೇಗೆ ಮತ್ತೆ ಹೇರಿಕೆ ಮಾಡಿ ರೈತರನ್ನು ಇನ್ನಷ್ಟು ಶೋಷನೆ ಮಾಡಲು ಬಿಜೆಪಿ ಸರ್ಕಾರ ಹೊರಟಿದೆ. ಇದರಿಂದ ರಾಜ್ಯದ ಜನತೆ ಬಿಜೆಪಿ ಸರ್ಕಾರದ ವಿರುದ್ಧ ಬೇಸತ್ತು. ಕಾಂಗ್ರೆಸ್ ಪರವಾದ ಒಲವು ತೋರಿದ್ದಾರೆ ಎಂದರು.

ಬಿಜೆಪಿಯಲ್ಲೂ ಕುಟುಂಬ ರಾಜಕಾರಣ

ಬೇರೆ ಪಕ್ಷಗಳನ್ನು ಟೀಕಿಸುವ ಬಿಜೆಪಿ ಸ್ವತಃ ಕುಟುಂಬ ರಾಜಕಾರಣದಲ್ಲಿ ಮುಳುಗಿದೆ. ಇದನ್ನು ಗಣನೆಗೆ ತೆಗೆದುಕೊಳ್ಳುವುದೇ ಆದರೆ ಬೇರಲ್ಲ ಪಕ್ಷಗಳಿಂತ ಬಿಜೆಪಿಯಲ್ಲೇ ಹೆಚ್ಚು ಕುಟುಂಬ ರಾಜಕಾರಣವಿದೆ ಎಂದು ಹೇಳಿದರು.

ನಂದಿನಿ ಕರ್ನಾಟಕದ ಅಸ್ಮಿತೆ

ನಂದಿನಿ ಮಂಡ್ಯ ಜನರ ಉಸಿರಾಗಿದೆ, ಸಮಸ್ತ ಕನ್ನಡಿಗೆ ಆಸ್ಮಿತೆ ಆಗಿದೆ. ಆದರೆ ನಂದಿನಿ ಹಾಲಿನ ಉದ್ಪಾದನೆ ಕಡಿಮೆಯಾಗಿದೆ ಎಂದು ತೋರಿಸಿ, ಗುಜರಾತಿಗೆ ಅಮೂಲ್ ಹಾಲನ್ನು ರಾಜ್ಯದ ಮಾರುಕಟ್ಟೆ ಬಿಡಲಾಗಿದೆ. ಈ ಮೂಲಕ ಬಿಜೆಪಿ ಪಕ್ಷಕ್ಕೆ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ ಎಂದರು.

ಗೋಷ್ಠಿಯಲ್ಲಿ ಶಾಸಕ ಮಧು ಮಾದೇಗೌಡ, ಮಳವಳ್ಳಿ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಪಿ.ಎಂ.ನರೇಂದ್ರಸ್ವಾಮಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಜಿ.ಪಂ. ಮಾಜಿ ಅಧ್ಯಕ್ಷ ಸುಧಾ ಚಂದ್ರಶೇಖರ್, ಮುಖಂಡ ಚಂದ್ರಶೇಖರ್, ಮಂಡ್ಯ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಮಳವಳ್ಳಿ ಪುರಸಭೆ ಅಧ್ಯಕ್ಷೆ ಪ್ರಮೀಳಾ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!