Thursday, September 19, 2024

ಪ್ರಾಯೋಗಿಕ ಆವೃತ್ತಿ

ತಮಿಳಿನಲ್ಲಿ ಬಿಡುಗಡೆಯಾದ ಗಾಡ್‌‌ ಫಾದರ್‌‌ ಸಿನಿಮಾ


  • ಜಗತ್ತಿನಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ ಮೆಗಾಸ್ಟರ್ ಸಿನಿಮಾ
  •  ಗಾಡ್‌‌ ಫಾದರ್‌‌ ತಮಿಳು ಅವತರಣಿಕೆ ಬಿಡುಗಡೆ

ಮತ್ತು ಬಾಲಿವುಡ್‌‌ನ ಸ್ಟಾರ್ ನಟ ಸಲ್ಮಾನ್ ಖಾನ್ ಕಾಂಬಿನೇಷನ್‌‌ನ ‘ಗಾಡ್ ಫಾದರ್’ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಸಖತ್ ಸದ್ದು ಮಾಡುತ್ತಿದೆ. ತೆರೆಕಂಡ ಮೊದಲ ವಾರವೇ ₹100 ಕೋಟಿಗೂ ಅಧಿಕ ಮೊತ್ತ ಕಲೆ ಹಾಕಿದ್ದ ಈ ಚಿತ್ರ ಇದೀಗ ತಮಿಳುನಲ್ಲೂ ತೆರೆಗೆ ಬಂದಿದೆ.

‘ಗಾಡ್‌‌ ಫಾದರ್‌‌’ ಚಿತ್ರ ಮೊದಲ ಹಂತದಲ್ಲಿ ಕೇವಲ ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ತೆರೆಕಂಡಿತ್ತು. ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಹಿನ್ನೆಲೆ ತಮಿಳು ಅವತರಣಿಕೆಯನ್ನು ಕೂಡ ಬಿಡುಗಡೆ ಮಾಡಿದೆ. ಅಕ್ಟೋಬರ್ 14ರಂದು ‘ಗಾಡ್‌‌ ಫಾದರ್‌‌’ ತಮಿಳು ಆವೃತ್ತಿ ಬಿಡುಗಡೆಯಾಗಿದ್ದು, ಚಿತ್ರವನ್ನು ಕನ್ನಡದಲ್ಲಿ ಬಿಡುಗಡೆ ಮಾಡುವ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ.

ಇತ್ತೀಚೆಗೆ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಕೂಡ ‘ಗಾಡ್‌‌ ಫಾದರ್‌‌’ ಚಿತ್ರವನ್ನು ವೀಕ್ಷಿಸಿ ಚಿತ್ರತಂಡವನ್ನು ಅಭಿನಂದಿಸಿದ್ದರು. ಇದಾದ ಬೆನ್ನಲ್ಲೇ ಚಿತ್ರ ತಮಿಳಿನಲ್ಲಿ ಬಿಡುಗಡೆಯಾಗುತ್ತಿದೆ ಎನ್ನುವುದು ಗಮನಾರ್ಹ.

ಮೋಹನ್ ರಾಜ ನಿರ್ದೇಶನದಲ್ಲಿ ಮೂಡಿ ಬಂದಿರುವ ʼಗಾಡ್ ಫಾದರ್ʼ, ಮಲಯಾಳಂನ ʼಲೂಸಿಫರ್ʼ ಸಿನಿಮಾದ ರೀಮೇಕ್. ಪೃಥ್ವಿರಾಜ್‌ ಸುಕುಮಾರನ್‌ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಚಿತ್ರದಲ್ಲಿ ಹಿರಿಯ ನಟ ಮೋಹನ್‌ ಲಾಲ್‌ ಮುಖ್ಯ ಭೂಮಿಕೆ ಅಭಿನಯಿಸಿದ್ದರು. ಪೃಥ್ವಿರಾಜ್‌ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!