Thursday, September 19, 2024

ಪ್ರಾಯೋಗಿಕ ಆವೃತ್ತಿ

ಉತ್ತಮ ಅಡಳಿತ : ಮದ್ದೂರಿನ ಹಿರಿಯ ಉಪ ನೋಂದಣಾಧಿಕಾರಿ ದಿನೇಶ್ ಗೆ ಪ್ರಶಂಸೆ

ವರದಿ : ನ.ಲಿ.ಕೃಷ್ಣ

ಜನಸ್ನೇಹಿ ಕಾವೇರಿ ತಂತ್ರಾಂಶ 2-0 ನ ಅಳವಡಿಸಿ ಯಶಸ್ವಿ ಕಾರ್ಯನಿರ್ವಹಣೆ ಹಾಗೂ ಪ್ರಸ್ತುತ ಸಾಲಿನ  ಸ್ತಿರಾಸ್ತಿಗಳ ದರಪಟ್ಟಿ ಕುರಿತು ಮಾರ್ಗಸೂಚಿ ಪ್ರಕಟ ಮತ್ತು ಇಲಾಖೆ ನಿಗಧಿಪಡಿಸಿದ್ದ ರಾಜಸ್ವ ಸಂಗ್ರಹಣೆಯಲ್ಲಿ ಶೇಕಡಾ ನೂರಕ್ಕೂಮೀರಿದ ಸಾಧನೆಗೈದು ಇಲಾಖೆಯ ಪ್ರಶಂಸೆ ಹಾಗು ಅಭಿನಂದನೆಗೆ ಮದ್ದೂರಿನ ಹಿರಿಯ ಉಪ ನೋಂದಣಾಧಿಕಾರಿ ದಿನೇಶ್ ಎಸ್. ಪಾತ್ರರಾಗಿದ್ದಾರೆ.

ಬೆಂಗಳೂರಿನ ಯುವನಿಕಾ ಸಭಾಂಗಣದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅಭಿನಂದನಾ ಪತ್ರ ನೀಡಿ ದಿನೇಶ್ ಅವರ ಉತ್ತಮ ಆಡಳಿತ ಕುರಿತು‌ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿನ ವ್ಯವಹರಣೆ ಸುಗಮಗೊಳಿಸುವ ಹಾಗೂ ವಿಳಂಬರಹಿತ ಸೇವೆ ಒದಗಿಸುವ ದೃಷ್ಟಿಯಿಂದ ಕಾವೇರಿ ತಂತ್ರಾಂಶ ಅಭಿವೃದ್ಧಿ ಪಡಿಸಲಾಗಿದ್ದು ಅದರ ಯಶಸ್ವಿ ಅನುಷ್ಠಾನದಿಂದ ಆಸ್ತಿಗಳ ನೋಂದಣಿ ಪ್ರಕ್ರಿಯೆಗೆ ವೇಗ ದೊರೆತು ಜನಸ್ನೇಹಿ ವಾತವಾರಣದಲ್ಲಿ ಕೆಲಸ ನಿರ್ವಹಿಸಲು ಸಾಧ್ಯವಾಗಿದ್ದಲ್ಲದೆ
ಕೆಲಸದ ಪ್ರಗತಿ ಕಾರಣದಿಂದ ರಾಜಸ್ವ ಸಂಗ್ರಹದಲ್ಲೂ ಗುರಿ ಮೀರಿದ ಸಾಧನೆಗೂ ನೇರವಾಗಿದೆ.  ಈ ಹಿನ್ನಲೆಯಲ್ಲಿ ದಿನೇಶ್ ಅವರ ಸಾಧನೆ ರಾಜ್ಯಮಟ್ಟದಲ್ಲಿ ಗುರುತಿಸಲ್ಪಟ್ಟು ಇಂದು ಪ್ರಸಂಸಗೆ ಒಳಗಾಗಿದೆ.

ಕಾರ್ಯಕ್ರಮದಲ್ಲಿ ಐಎಎಸ್ ಅಧಿಕಾರಿಗಳಾದ ರಶ್ಮಿ, ಮಹೇಶ್ , ನೋಂದಣಿ ಮಹಾ ನೀರಿಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು ಹಾಗೂ ಅತೀಕ್ ರವರು, ಡಾ. ಮಮತಾ ಡಾ. ಕೆ. ವಿ. ತಿಲಕ್ ಚಂದ್ರ ,ಮೋಹನ್ ರಾಜ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!