Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಛಾಯಾಚಿತ್ರಗ್ರಾಹಕರಿಗೆ ಸರ್ಕಾರದ ಸವಲತ್ತು: ಚಲುವರಾಯಸ್ವಾಮಿ

ಛಾಯಾಚಿತ್ರಗ್ರಾಹಕರಿಗೆ ಸರ್ಕಾರದಿಂದ ಸಿಗಬೇಕಾದ ಸವಲತ್ತುಗಳನ್ನು ನೀಡುವ ಪ್ರಾಮಾಣಿಕವಾಗಿ ದೊರಕಿಸುವ ಕೆಲಸ ಮಾಡುವುದಾಗಿ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.

ಮಂಡ್ಯದ ಕಾವೇರಿ ಕಲ್ಯಾಣ ಮಂಟಪದಲ್ಲಿ ಮಾಂಡವ್ಯ ವೃತ್ತಿಪರ ಛಾಯಾಚಿತ್ರಗ್ರಾಹಕರ ಸಂಘದ ವತಿಯಿಂದ ಮತ್ತು ಸ್ಪಂದನ ಆಸ್ಪತ್ರೆಯ ಸಹಯೋಗದೊಂದಿಗೆ 185ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ನಡೆದ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಕಾರ್ಯಕ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಛಾಯಾಚಿತ್ರಗ್ರಾಹಕರ ಸಂಘಕ್ಕೆ ನೂತನ ನಿವೇಶನವನ್ನು ಕೊಡಿಸುವುದಾಗಿಯೂ ಭರವಸೆ ನೀಡಿದರು.

ಛಾಯಾ ಚಿತ್ರಗ್ರಾಹಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದ ಶಾಸಕ ಪಿ. ರವಿಕುಮಾರ್ ಗಣಿಗ, ನಿವೇಶನ ಇಲ್ಲದವರಿಗೆ ಹಾಗೂ ವಸತಿ ಇಲ್ಲದ ಛಾಯಾ ಗ್ರಾಹಕರಿಗೆ ಸರ್ಕಾರದಿಂದ ನಿವೇಶನ ಹಾಗೂ ವಸತಿಯನ್ನು ಕಲ್ಪಿಸುವುದಾಗಿ ಭರವಸೆ ನೀಡಿದರು.

ಛಾಯಾಗ್ರಾಹಕರು ತಮ್ಮ ಕೈಚಳಕದಿಂದ ನಮ್ಮನ್ನು ನಗಿಸುವ ಮೂಲಕ “ಸ್ಮೈಲ್ ಪ್ಲೀಸ್” ಎಂದು ನಗಿಸುತ್ತಾರೆ. ಆದ್ದರಿಂದ ಕಷ್ಟಕರ ಜೀವನ ನಡೆಸುತ್ತಿರುವ ಛಾಯಾಗ್ರಾಹಕರನ್ನು ಕಾರ್ಮಿಕರ ವಲಯಕ್ಕೆ ಸೇರಿಸಿಕೊಂಡು ಸರ್ಕಾರದಿಂದ ಬರುವ ಸೌಲಭ್ಯವನ್ನು ಕಲ್ಪಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಹಿರಿಯ ಛಾಯಾಗ್ರಾಹಕರನ್ನು ಛಾಯಾಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಛಾಯಾಗ್ರಾಹಕರು ಸ್ವಯಂಪ್ರೇರಿತರಾಗಿ ಹಾಗೂ ಉತ್ಸಾಹಿಸದಿಂದ ರಕ್ತದಾನ ಮಾಡಿದರು. ಸುಮಾರು 100 ಯೂನಿಟ್ ರಕ್ತವನ್ನು ಶೇಖರಿಸಿ ರಕ್ತನಿಧಿ ಕೇಂದ್ರಕ್ಕೆ ಕಳುಹಿಸಿಕೊಡಲಾಯಿತು. ಛಾಯಾಚಿತ್ರ ಗ್ರಾಹಕರ ಹಾಗೂ ಕುಟುಂಬವರ್ಗಕ್ಕೆ ಇಸಿಜಿ, ದಂತಚಿಕಿತ್ಸೆ, ಮೂಳೆ ಮತ್ತು ಕೀಲು ತಪಾಸಣೆ, ಕಣ್ಣಿನ ತಪಾಸಣೆ ಇನ್ನು ಮುಂತಾದ ತಪಾಸಣೆಯನ್ನು ಕಾರ್ಯಕ್ರಮದಲ್ಲಿ ನೆರವೇರಿಸಲಾಯಿತು.

ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇಕಡ 65 ಕ್ಕಿಂತ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ಛಾಯಾಗ್ರಾಹಕರ ಮಕ್ಕಳಿಗೆ ಹಾಗೂ ಹಿರಿಯ ಛಾಯಾಗ್ರಾಹಕರಿಗೆ ಛಾಯಾ ಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಚಲನಚಿತ್ರ ನಟಿ ಭಾವನ, ಸಂಘದ ಅಧ್ಯಕ್ಷ ವಿನೋದ್‌ಗೌಡ, ಉಪಾಧ್ಯಕ್ಷ ಕಾರ್ತಿಕ್‌ಗೌಡ, ಸಲಹೆಗಾರ ಸಬ್ಬನಹಳ್ಳಿ ರಾಜು, ಪ್ರ.ಕಾರ್ಯದರ್ಶಿ ರೂಬಿನ್ ಕೆ., ಖಜಾಂಚಿ ನಿರಂಜನ್, ಸಹಕಾರ್ಯದರ್ಶಿ ಎಚ್.ಎಂ.ಅಂಕೇಗೌಡ, ಸಾಂಸ್ಕೃತಿಕ ಕಾರ್ಯದರ್ಶಿ ಎಚ್.ಎಸ್.ಮಹೇಶ್, ಸಂಘಟನಾ ಕಾರ್ಯದರ್ಶಿ ಜಿ.ಆರ್.ಮಹೇಶ್, ಕ್ರೀಡಾ ಕಾರ್ಯದರ್ಶಿ ಶಿವಶಂಕರ್, ನಿರ್ದೇಶಕರಾದ ದಿನೇಶ್‌ಕುಮಾರ್, ಜಗದೀಶ್, ಉಮೇಶ್, ಮುತ್ತುರಾಜು, ಲಕ್ಷ್ಮಣ್ ಪಟೇಲ್, ಕಾವೇರಿ ಲ್ಯಾಬ್‌ನ ಸಂದೀಪ್, ಮಾಜಿ ಅಧ್ಯಕ್ಷರಾದ ಬಾಲಚಂದ್ರ, ಜಗದೀಶ್, ಮಧು ಚಂದ್ರ, ಕೆಕೆ ಪ್ರಭು ಹಾಗೂ ಬೆಂಗಳೂರಿನ ರಾಜರಾಜೇಶ್ವರಿ ಡೆಂಟಲ್ ಆಸ್ಪತ್ರೆಯ ಡಾ.ಜಯಚಂದ್ರ, ಮತ್ತು ಸಿಬ್ಬಂದಿ ವರ್ಗ, ಮಂಡ್ಯ ಸ್ಪಂದನಾ ಆಸ್ಪತ್ರೆಯ ಡಾ.ಆದಿತ್ಯಗೌಡ ಮತ್ತು ಸಿಬ್ಬಂದಿ ವರ್ಗ ಹಾಗೂ ಮಂಡ್ಯ ಮಿಮ್ಸ್‌ನ ರಕ್ತನಿಧಿ ಕೇಂದ್ರದ ವೈದ್ಯರಾದ ಮಹಮದ್‌ರಫಿ, ಹಾಗೂ ಸಿಬ್ಬಂದಿ ವರ್ಗ ಹಾಗೂ ಛಾಯಾಚಿತ್ರಗ್ರಾಹಕರ ಕುಟುಂಬವರ್ಗದವರು ಹಾಜರಿದ್ದರು.

ನಿರೂಪಣೆಯನ್ನು ಡಿಡಿ -9 ವರದಿಗಾರರಾದ ಸೌಮ್ಯ, ಸ್ವಾಗತವನ್ನ ರೂಬಿನ್ ನೆರವೇರಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!