ಕೂಲಿ ಹಣದ ವಿಚಾರದ ಜಗಳದಲ್ಲಿ ಕೊಲೆ ಮಾಡಿ ಸಾಕ್ಷ್ಯ ನಾಶ ಮಾಡಿದ ಆರೋಪಿಗೆ ಮಂಡ್ಯದ 4 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆ ಮತ್ತು ರೂ 40,000 ದಂಡವನ್ನು ವಿಧಿಸಿ ತೀರ್ಪು ನೀಡಿದೆ.
ಮಳವಳ್ಳಿ ತಾಲ್ಲೂಕಿನ ಕೋಟೆ ಬೀದಿಯಲ್ಲಿ ವಾಸವಾಗಿದ್ದ ಮಾದೇಶ (34) ಎಂಬುವವನಿಗೆ ಶಿಕ್ಷೆ ವಿಧಿಸಲಾಗಿದೆ. ಇದಲ್ಲದೇ ಭಾದಂಸಂ ಕಲಂ.201 ರ ಅಡಿಯಲ್ಲಿನ ಅಪರಾಧಕ್ಕೆ 7 ವರ್ಷಗಳ ಕಠಿಣ ಸಜೆ ಮತ್ತು 20,000 ರೂ.ಗಳ ದಂಡವನ್ನು ವಿಧಿಸಿದ್ದು, ದಂಡ ಪಾವತಿಸಲು ತಪ್ಪಿದಲ್ಲಿ 5 ತಿಂಗಳ ಸಾದಾ ಶಿಕ್ಷೆಯನ್ನು ಅನುಭವಿತಕ್ಕದ್ದು ಎಂದು ಭಾದಂಸಂ ಕಲಂ.302, 201 ರ ಅಡಿಯಲ್ಲಿ ವಿಧಿಸಿರುವ ಶಿಕ್ಷೆಗಳನ್ನು ಏಕಕಾಲದಲ್ಲಿ ಅನುಭವಿಸತಕ್ಕದ್ದು ಎಂದು ನ್ಯಾಯಧೀಶರಾದ ನಿರ್ಮಲ ಕೆ ಅವರು ಆದೇಶಿಸಿದ್ದಾರೆ.
ಘಟನೆ ವಿವರ
2020 ಜೂನ್ 10 ರಂದು ಕೂಲಿ ಹಣದ ವಿಚಾರವಾಗಿ ಶಂಕರ್ ಹಾಗೂ ಆರೋಪಿ ಮಾದೇಶನ ನಡುವೆ ಜಗಳ ನಡೆದಿದ್ದು, ಶಂಕರ್ ಗೆ ಆರೋಪಿ ಮಾದೇಶನು ಕಲ್ಲಿನಿಂದ ಕಪಾಲದ ಮೇಲೆ ಎತ್ತಾಕಿ ಕೊಲೆ ಮಾಡಿದ್ದನು. ಅದನ್ನು ಮರೆ ಮಾಚುವ ಉದ್ದೇಶದಿಂದ ಶವವನ್ನು ಹುಣಸೆಮರದ ಹತ್ತಿರ ಬಿಟ್ಟು ಹೋಗಿದ್ದನು. ತನಿಖೆ ನಡೆಸಿದ್ದ ಅಂದಿನ ಸರ್ಕಲ್ ಇನ್ಸ್ ಪೆಕ್ಟರ್ ಕೆ ಆರ್ ಪ್ರಸಾದ್ ರವರು ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಜಯಶ್ರೀ ಎಸ್ ಶೆಣೈ ವಾದಿಸಿದ್ದರು.




