Thursday, September 19, 2024

ಪ್ರಾಯೋಗಿಕ ಆವೃತ್ತಿ

ಸರ್ಕಾರಕ್ಕೆ ವಿಶಿಷ್ಟ ಬೇಡಿಕೆಯಿಟ್ಟ ಮದ್ಯಪ್ರಿಯರು… ಎಣ್ಣೆ ಬಾಟಲ್ ಗೂ ಇನ್ಸೂರೆನ್ಸ್ ಬೇಕಂದ್ರು !

ಇನ್ನೇನು ವರ್ಷಾಂತ್ಯ ಹಾಗೂ ಹೊಸ ವರ್ಷದ ಮೋಜು ಮಸ್ತಿಗಾಗಿ ಎಲ್ಲೆಡೆ ಪಾರ್ಟಿಗಳು ಲಂಗು ಲಗಾಮಿಲ್ಲದೇ ನಡೆಯಲಿವೆ. ಇಂತಹ ಸಂದರ್ಭದಲ್ಲೇ ಹಾಸನದಿಂದ ಒಂದು ವಿಶೇಷ ಸುದ್ದಿ ವರದಿಯಾಗಿದೆ.

ಅದೇನಪ್ಪ ಅಂದ್ರೆ, ಸರ್ಕಾರ ಮದ್ಯಪ್ರಿಯರ ಕಷ್ಟ ಕೇಳ್ತಿಲ್ವಂತೆ…..ಹೀಗೆಂದು ಕುಡುಕರ ಸಂಘ ಸಂಘದ ಮುಖಂಡರೊಬ್ಬರು ಕುಡುಕರ ಸಮಸ್ಯೆಗಳನ್ನು ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ ಸರ್ಕಾರದ ಗಮನಕ್ಕೆ ತಂದಿದ್ದಾರೆ.

ಕುಡುಕರ ಸಂಘದ ಮುಖಂಡ ಆಗ್ಬೇಕು ಅಂದ್ರೆ ಆತ ದೊಡ್ಡ ಕುಡುಕನೇ ಆಗಿರ್‍ಬೇಕು ಅಲ್ವಾ ! ಆತ ಹೇಳಿದ್ದೇನಪ್ಪ ಅಂದ್ರೆ….

30 % ಸರ್ಕಾರ ಮದ್ಯಪ್ರಿಯರಿಂದಲೇ ನಡಿತಿದ್ಯಂತೆ, ಆದ್ರೂ ಅವರ ಕಷ್ಟ ಕೇಳ್ತಿಲ್ವಂತೆ..! ನಾವು ಕುಡಿಯುವ ಬಾಟಲ್ ಒಂದಕ್ಕೆ 1 ಲಕ್ಷ ರೂ. ಇನ್ಸೂರೆನ್ಸ್ ಇರ್‍ಬೇಕು. ಒಂದು ವೇಳೆ ನಾವು ಅದನ್ನು ಕುಡಿದು ಸತ್ತರೆ…ಆ ಹಣ ನಮ್ಮ ಕುಟುಂಬಕ್ಕೆ ಸಿಗಬೇಕು ಎನ್ನುವುದು ಮದ್ಯಪ್ರಿಯರ ಒತ್ತಾಯವಂತೆ.

ಮದ್ಯಪ್ರಿಯರು ಕುಡಿದು ಮನೆಯಲ್ಲಿ ಜಗಳ ಮಾಡುವುದು ಸಾಮಾನ್ಯ, ಹಾಗಾಗಿ ನಮ್ಮ ಮಕ್ಕಳು ಓದಲು ಮನೆಯಲ್ಲಿ ತೊಂದ್ರೆ ಆಗುತ್ತೆ. ಆದ್ದರಿಂದ ಸರ್ಕಾರಿ ಹಾಸ್ಟೆಲ್ ಗಳಲ್ಲಿ ಕುಡುಕರ ಮಕ್ಕಳಿಗೆ 10 % ಸೇಟುಗಳನ್ನು ಮೀಸಲಿಡಬೇಕಂತೇ. ಇಷ್ಟಕ್ಕೆ ನಿಲ್ಲಲ್ಲ ಇವರ ಪಟ್ಟಿ…ಕುಡುಕರಿಗಾಗಿಯೇ ನಿಗಮವೊಂದನ್ನು ಸ್ಥಾಪನೆ ಮಾಡಬೇಕಂತೆ. ಆ ನಿಗಮದಿಂದ ಪ್ರತಿ ವರ್ಷ 1 ಲಕ್ಷ ಮನೆಗಳನ್ನು ಮದ್ಯಪ್ರಿಯರಿಗೆ ನೀಡಬೇಕಂತೆ.

ಅಲ್ಲದೇ ಕುಡಿದು ಲಿವರ್ ಹಾಳಾದ್ರೆ ಸರ್ಕಾರನೇ 5-6 ಲಕ್ಷ ವೆಚ್ಚ ಮಾಡಿ ಚಿಕಿತ್ಸೆ ಕೊಡಿಸ್ಬೇಕಂತೆ. ಪ್ರತಿ ಮೂರು ತಿಂಗಳಿಗೊಮ್ಮೆ ಕುಡುಕರ ಆರೋಗ್ಯ ತಪಾಸಣೆಗೆ ವ್ಯವಸ್ಥೆ ಮಾಡಬೇಕಂತೆ…. ಇವಿಷ್ಟು ಕುಡುಕರ ಸಂಘದ ಬೇಡಿಕೆಗಳು.

ಇವೆಲ್ಲವನ್ನು ಸರ್ಕಾರ ಈಡೇರಿಸುತ್ತೋ.. ಬಿಡುತ್ತೋ… ಗೊತ್ತಿಲ್ಲ, ಆದ್ರೆ ಕುಡುಕರ ಬೇಡಿಕೆಗಳನ್ನು ಕೇಳಿ ಜನರು ಬಿದ್ದು ಬಿದ್ದು ನಗುವಂತಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!