Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಖಾಸಗೀಕರಣದ ಹುನ್ನಾರ ಖಂಡಿಸಿ ಗ್ರಾಮೀಣ ಬ್ಯಾಂಕ್ ನೌಕರರ ಮುಷ್ಕರ

ಗ್ರಾಮೀಣ ಬ್ಯಾಂಕ್ ಗಳ ಖಾಸಗಿಕರಣ ಮಾಡುವ ಕೇಂದ್ರ ಸರ್ಕಾರದ ಹುನ್ನಾರ ಖಂಡಿಸಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರು ಮಂಡ್ಯದಲ್ಲಿ ಶುಕ್ರವಾರ ಮುಷ್ಕರ ನಡೆಸಿದರು.

ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರ ಸಂಘ ಮತ್ತು ಅಧಿಕಾರಿಗಳ ಸಂಘ ಹಾಗೂ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಮುಷ್ಕರ ನಿರತ ನೌಕರರು ಮಂಡ್ಯ
ನಗರದ ಬ್ಯಾಂಕಿನ  ಪ್ರಾದೇಶಿಕ ಕಚೇರಿ ಎದುರು ಪ್ರತಿಭಟನೆ ನಡೆಸಿ, ಪ್ರಾದೇಶಿಕ ವ್ಯವಸ್ಥಾಪಕ ಮುಕುಂದ್ ಅವರಿಗೆ ಮನವಿ ಸಲ್ಲಿಸಿದರು.

ಗ್ರಾಮೀಣ ಬ್ಯಾಂಕುಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶ್ರಮ ವಹಿಸುತ್ತಿದ್ದು,ಉದ್ಯೋಗಿಗಳ ಭವಿಷ್ಯದ ಹಿತದೃಷ್ಟಿ ಮುಖ್ಯವಾಗಿದೆ ಇಂತಹ ಹೊತ್ತಿನಲ್ಲಿ ಗ್ರಾಮೀಣ ಬ್ಯಾಂಕನ್ನು ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರ ಹುನ್ನಾರ ಮಾಡಿದೆ, ಗ್ರಾಮೀಣ ಬ್ಯಾಂಕ್ ವಿರೋಧಿ ನೀತಿಯನ್ನು ವಿರೋಧಿಸುವುದಾಗಿ ಹೇಳಿದರು.

ಪ್ರೇರಕ ಬ್ಯಾಂಕ್ ಗಳ ಆಡಳಿತದಿಂದ ಮುಕ್ತಿ ಪಡೆದು ರಾಷ್ಟ್ರೀಯ ಗ್ರಾಮೀಣ ಬ್ಯಾಂಕ್ ಸ್ಥಾಪಿಸಿ ಅದರ ಅಡಿಯಲ್ಲಿ ರಾಜ್ಯಮಟ್ಟದ ಗ್ರಾಮೀಣ ಬ್ಯಾಂಕ್ ರಚಿಸಬೇಕು,ಒಂದು ಭಾರಿ ವಿಶೇಷ ನೇರ ನೇಮಕಾತಿ ಪ್ರಕ್ರಿಯೆ ನಡೆಸಿ ಖಾಲಿ ಇರುವ 30000 ಹುದ್ದೆಗಳನ್ನು ಭರ್ತಿ ಮಾಡಬೇಕು,ಯಾವುದೇ ಕಾರಣಕ್ಕೂ ಗ್ರಾಮೀಣ ಬ್ಯಾಂಕ್ ಗಳನ್ನು ಖಾಸಗೀಕರಣ ಮಾಡಬಾರದು ಎಂದು ಒತ್ತಾಯಿಸಿದರು

ನೌಕರರ ಬಡ್ತಿ ನಿಯಮಾವಳಿಗಳನ್ನ ಪುನರ್ ವಿಮರ್ಶಿಸಬೇಕು,ಪ್ರೇರಕ ಬ್ಯಾಂಕ್ ಗಳಲ್ಲಿನ ಸಿಬ್ಬಂದಿ ಸೇವಾ ನಿಯಮ, ಬಡ್ತಿ , ಪಿಂಚಣಿ, ಅನುಕಂಪ ಆಧಾರಿತ ನೇಮಕಾತಿ ,ಕಂಪ್ಯೂಟರ್ ಇಂಕ್ರಿಮೆಂಟ್ ನಿಯಮಗಳ ಜೊತೆಗೆ ಪ್ರೇರಕ ಬ್ಯಾಂಕುಗಳಲ್ಲಿರುವ ವೇತನ ಶ್ರೇಣಿಇತರೆ ಸೌಲಭ್ಯಗಳನ್ನು ಗ್ರಾಮೀಣ ಬ್ಯಾಂಕ್ ಉದ್ಯೋಗಿಗಳಿಗೂ ಯಥಾವತ್ತಾಗಿ ವಿಸ್ತರಿಸಬೇಕು,ಗ್ರಾಮೀಣ ಬ್ಯಾಂಕ್ ನ ದಿನಗೂಲಿ,ಹೊರಗುತ್ತಿಗೆ ನೌಕರರನ್ನು ಸರ್ವೋಚ ನ್ಯಾಯಾಲಯದ ಆದೇಶದಂತೆ ಖಾಯಂ ಮಾಡಬೇಕು,.ಎಲ್ಲಾ ತರಹದ ವಿಮಾ ಸರಕುಗಳ ಮಾರಾಟ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಆರ್.ವಸಂತ್ ಕುಮಾರ್, ಜಂಟಿ ಕಾರ್ಯದರ್ಶಿ ಎಚ್‌.ಸಿ ನಾಗರಾಜು, ಉಮಾಶಂಕರ್, ಪುಟ್ಟಸ್ವಾಮಿ, ಸತ್ಯಾನಂದ ಸ್ವಾಮಿ, ದಿನೇಶ್, ಸತ್ಯ, ಮಹದೇವಸ್ವಾಮಿ, ಬಿಂದಿಯಾ, ಮದನಿಕ, ಸುನಿತಾಮಣಿ, ಉಮಾದೇವಿ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!