Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಗೃಹಲಕ್ಷ್ಮಿ ಹಣ ಅರ್ಹ ಫಲಾನುಭವಿಗಳಿಗೆ ತಲುಪಿಸಿ : ಚಿಕ್ಕಲಿಂಗಯ್ಯ

ಮಂಡ್ಯ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯು ಅನುಕೂಲಸ್ಥರಿಗಿಂತಲೂ ಕಡುಬಡವರಿಗೆ ತಲುಪುವುದು ಬಹಳ ಮುಖ್ಯವಾಗಿದ್ದು, ಗೃಹಲಕ್ಷ್ಮಿ ಯೋಜನೆಯ ಹಣವೂ ಬಡವರಿಗೆ ತಲುಪುವಂತೆ ಯೋಜನೆ ರೂಪಿಸಿ ಎಂದು ಅಧಿಕಾರಿಗಳಿಗೆ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಚಿಕ್ಕಲಿಂಗಯ್ಯ ತಿಳಿಸಿದರು.

ಮಂಡ್ಯ ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 4,63,144 ಫಲಾನುಭವಿಗಳಿದ್ದು, 2024 ರ ಫೆಬ್ರವರಿಯಿಂದ 2025ರ ಏಪ್ರಿಲ್ ವರೆಗೆ ಒಟ್ಟು 1237.54 ಕೋಟಿ ರೂ ಅನುದಾನ ಫಲಾನುಭವಿಗಳಿಗೆ ತಲುಪಿಸಲಾಗಿದೆ ಎಂದರು.

ಗೃಹಲಕ್ಷ್ಮಿ ಹಣವು ಬಡ ಕುಟುಂಬಗಳಿಗೆ ತಲುಪುತ್ತಿರುವ ಬಗ್ಗೆ ಹಾಗೂ ಯಾವುದಾದರೂ ತೊಂದರೆಯಿಂದ ಅರ್ಹ ಫಲಾನುಭವಿ ಬಿಟ್ಟು ಹೋಗಿದ್ದಲ್ಲಿ ತಿಳಿದುಕೊಳ್ಳಲು ಸಮೀಕ್ಷೆಯ ಅಗತ್ಯವಿದೆ. ಸರ್ವೇ ನಡೆಸಲು ಅಂಗನವಾಡಿ ಕಾರ್ಯಕರ್ತೆಯರ ತಂಡವನ್ನು ರೂಪಿಸಿ ಎಂದು ಹೇಳಿದರು.

ಅನ್ನಭಾಗ್ಯ ಯೋಜನೆಯಡಿಯಲ್ಲಿ 2023 ರ ಜುಲೈನಿಂದ 2024ರ ಡಿಸೆಂಬರ್ ವರೆಗೆ ಒಟ್ಟು 447166 ಅನ್ನಭಾಗ್ಯ ಫಲಾನುಭವಿಗಳಿಗೆ ರೂ402.06 ಕೋಟಿ ಪಾವತಿಸಲಾಗಿದೆ ಎಂದರು.

2025 ರ ಫೆಬ್ರವರಿ ಮಾಹೆಯಿಂದ ಏಪ್ರಿಲ್ ಮಾಹೆಯವರೆಗೆ ಶಕ್ತಿ ಯೋಜನೆಯಡಿಯ ಜಿಲ್ಲೆಯಲ್ಲಿ ಒಟ್ಟು 1,87,40,507 ಟಿಕೇಟ್ ಪಡೆದು ಮಹಿಳೆಯರು ಸಂಚರಿಸಿರುತ್ತಾರೆ. ಒಟ್ಟು 58.39 ಕೋಟಿ ರೂ ವೆಚ್ಚವಾಗಿರುತ್ತದೆ ಎಂದು ತಿಳಿಸಿದರು.

ಬಸ್ಸಿನಲ್ಲಿ ಪ್ರಯಾಣಿಸುವ ಹಾಸ್ಟೇಲ್ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಕೆರೆಯಂಗಳದಲ್ಲಿ ಬೆಳಿಗ್ಗೆ 8:30 ಗಂಟೆಗೆ ಹಾಗೂ 9:30 ಗಂಟೆಗೆ ಪ್ರತ್ಯೇಕ ಬಸ್ಸಿನ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯಡಿ 507543 ಫಲಾನುಭವಿಗಳಿದ್ದು, 2023 ರ ಆಗಸ್ಟ್ ನಿಂದ 2025 ರ ಏಪ್ರಿಲ್ ವರೆಗೆ 405224132 ಯೂನಿಟ್ ಗಳಷ್ಟು ವಿದ್ಯುತ್ ಬಳಕೆಯಾಗಿರುತ್ತದೆ ಹಾಗೂ 347.55 ರೂ ಗಳಷ್ಟು ಹಣ ವೆಚ್ಚವಾಗಿರುತ್ತದೆ ಎಂದು ತಿಳಿಸಿದರು.

ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ 2023 ರಿಂದ ಒಟ್ಟು 6235 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿರುತ್ತಾರೆ. ಅವರಲ್ಲಿ ಶಿಕ್ಷಣ ಪಡೆಯುತ್ತಿರುವ ಹಾಗೂ ಉದ್ಯೋಗ ಹೊಂದಿರುವ 1511 ಅರ್ಜಿಗಳನ್ನು ತಿರಸ್ಕರಿಸಲಾಗಿದ್ದು, ಒಟ್ಟು 4702 ಫಲಾನುಭವಿಗಳು ಯೋಜನೆಯ ಸದುಪಯೋಗ ಪಡೆಯುತ್ತಿರುತ್ತಾರೆ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರುಗಳಾದ ಪ್ರಶಾಂತ್ ಬಾಬು, ರಾಜೇಂದ್ರ ಎಸ್. ಹೆಚ್, ಶಿವಣ್ಣ ಹಾಗೂ ಕೆ. ಹನುಮಂತಯ್ಯ ಸದಸ್ಯರುಗಳಾದ ಬಸವರಾಜು, ಮಹಮ್ಮದ್ ಅನ್ಸರ್, ಪಿ. ಮಾದೇಶ ಮತ್ತು ಹೆಚ್. ಕೆ ರುದ್ರಪ್ಪ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ