Friday, September 20, 2024

ಪ್ರಾಯೋಗಿಕ ಆವೃತ್ತಿ

ಮತ ಕೇಳಲು ಬರುವವರ ನಿರ್ಭೀತಿಯಿಂದ ಪ್ರಶ್ನೆ ಮಾಡಿ : ಎಂ.ವಿ.ಕೃಷ್ಣ

ವಿಧಾನಸಭಾ ಚುನಾವಣೆಯಲ್ಲಿ ಮತ ಕೇಳಲು ಬರುವ ಅಭ್ಯರ್ಥಿಗಳನ್ನು ನಮಗೇನು ಅಭಿವೃದ್ಧಿ ಮಾಡುತ್ತಿರೇಂದು ನಿರ್ಭೀತಿಯಿಂದ ಪ್ರಶ್ನೆ ಮಾಡಬೇಕೆಂದು ಪ್ರಗತಿಪರ ಚಿಂತಕ ಎಂ.ವಿ.ಕೃಷ್ಣ ತಿಳಿಸಿದರು.

ಮಂಡ್ಯ ನಗರದ ರೈತಸಭಾಂಗಣದಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ, ಕರ್ನಾಟಕ ಜನಶಕ್ತಿ,ಮಹಿಳಾ ಮುನ್ನಡ,ಜಿಲ್ಲಾ ಶ್ರಮಿಕ ನಿವಾಸಿಗಳ ಒಕ್ಕೂಟದ ವತಿಯಿಂದ ನಡೆದ ಸ್ವಾಭಿಮಾನ ಜನಾಗ್ರಹ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮುಂಬರುವ ಚುನಾವಣೆಯಲ್ಲಿ ಶ್ರಮಿಕ ನಗರಗಳಲ್ಲಿ ಜನರು ತಮ್ಮ ಬಡಾವಣೆಗೆ ಮತ ಕೇಳಲು‌ ಬರುವವರಿಗೆ ನಮಗೆ ಭೂಮಿ,ವಸತಿ,ಹಕ್ಕುಪತ್ರ ಯಾವಾಗ ಕೊಡಿಸುತ್ತೀರಿ,ಈ ಹಿಂದೆ ಶಾಸಕರಾಗಿದ್ದಾಗ ನಮಗೇಕೆ ಹಕ್ಕುಪತ್ರ ನೀಡಿಲ್ಲ ಎಂದೆಲ್ಲಾ ಪ್ರಶ್ನೆ ಮಾಡಬೇಕು. ಇಷ ದಿನ ನಮಗೆ ಏಕೆ ಸೌಲಭ್ಯಗಳನ್ನು ನೀಡಿಲ್ಲ ಎಂದು ಪ್ರಶ್ನೆ ಮಾಡಬೇಕು. ಅವರಿಗೆ ಶ್ರಮಿಕ ನಿವಾಸಿಗಳು ಜಾಗೃತರಾಗಿದ್ದಾರೆ ಎಂಬ ಸಂದೇಶದ ಜೊತೆಗೆ ಅವರಿಗೂ ನಾಚಿಕೆಯಾಗಬೇಕು.ಅಂತಹ ಜವಾಬ್ದಾರಿ,ಚೈತನ್ಯ ಜನರಿಗೆ ಸಿಗಲಿ ಎಂದರು.

ಮೊನ್ನೆ ಶ್ರೀರಂಗಪಟ್ಟಣದಲ್ಲಿ ಆ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯನವರು ಕನ್ನಂಬಾಡಿ ಕಟ್ಟಲು ಬಂದವರಿಗೆ 100 ವರ್ಷಗಳ ನಂತರ ಹಕ್ಕುಪತ್ರ ನೀಡಿದರು. ಇದನ್ನು ನೋಡಿದರೆ ಯಾವ ರೀತಿ ಸರ್ಕಾರ ಆಡಳಿತ ನಡೆಸುತ್ತಿದೆ ಎಂಬುದು ಗೊತ್ತಾಗುತ್ತದೆ. ಇಂದಿನ ರೈತಸಭಾಂಗಣಕ್ಕೆ ಒಂದು ಇತಿಹಾಸವಿದೆ. ಆದರೆ ಇಲ್ಲಿರುವ ಚೇರುಗಳು ಕಿತ್ತುಹೋಗಿದೆ. ಕನಿಷ್ಠ ಕುರ್ಚಿಗಳ ರಿಪೇರಿ ಮಾಡಿಸುವ ಕೆಲಸವನ್ನು ಅಧಿಕಾರಿ ವರ್ಗ ಮಾಡಿಲ್ಲ.ಇದನ್ನು ನೋಡಿದರೆ ಸರ್ಕಾರದ ವಿರುದ್ಧ ಸಿಟ್ಟು ಬರುತ್ತದೆ ಎಂದರು.

ಮತ ಬಹಿಷ್ಕರಿಸಿ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಂಶುಪಾಲ ಎಂ.ವಿ.ಕೃಷ್ಣ ಮಾತನಾಡಿ, ಪ್ರತಿ ಚುನಾವಣೆಯಲ್ಲಿ ಸ್ಲಂ ನಿವಾಸಿಗಳ ಮತ ಪಡೆದು ಗೆದ್ದು ಶಾಸಕರಾಗಿ ಹೋದವರು ಅವರ ಪರ ಕೆಲಸ ಮಾಡದೆ ಮತ್ತೆ ಮತ ಕೇಳಲು ಬರುತ್ತಿದ್ದಾರೆ.ಅಂತಹವರಿಗೆ ನಿಮಗೆ ಮತ ಕೊಡಲ್ಲ ಎಂದು ನೇರವಾಗಿ ಹೇಳಿ.ಅಧಿಕಾರಿಗಳು ಮತ ಹಾಕಿ ಎಂದು ಮನವಿ ಮಾಡಲು ಬಂದಾಗ ನಾವು ಮತದಾನ ಬಹಿಷ್ಕಾರ ಮಾಡಿದ್ದೇವೆ ಎಂದು ಮಾಧ್ಯಮಗಳ ಮೂಲಕ ಪ್ರಚಾರ ಮಾಡಿ ಎಂದು ಕರೆ ನೀಡಿದರು.

ವಸತಿ-ಹಕ್ಕುಪತ್ರ ಕೊಡಿ
ಪ್ರಗತಿಪರ ವಕೀಲ ಶ್ರೀನಿವಾಸ್ ಮಾತನಾಡಿ, ಇಂದಿನ ಚುನಾವಣೆಗಳು ಭೂಮಿ, ವಸತಿ, ಹಕ್ಕುಪತ್ರ, ಅಭಿವೃದ್ಧಿ ವಿಚಾರಗಳ ಸುತ್ತ ಸುತ್ತಬೇಕು. ಆದರೆ ಇಂದಿನ ರಾಜಕಾರಣಿಗಳು ಸೀರೆ, ಪಂಚೆ, ಕುಕ್ಕರ್, ಹಣ, ಮದ್ಯವನ್ನು ಹಂಚಿ ಚುನಾವಣೆ ಎದುರಿಸಲು ಬಂದಿದ್ದಾರೆ. ಜನರು ಇಂತಹ ರಾಜಕಾರಣಿಗಳನ್ನು ತಿರಸ್ಕರಿಸಿ ಎಂದರು.
ಶ್ರಮಿಕ ಜನರು ನಿಮಗೆ ಭೂಮಿ, ವಸತಿ,ಹಕ್ಕುಪತ್ರ, ಮೂಲಭೂತ ಸೌಕರ್ಯ ಒದಗಿಸುವ ಅಭ್ಯರ್ಥಿಗಳನ್ನು ಮಾತ್ರ ಪರಿಗಣಿಸಿ ಎಂದರು.

ಭೂಮಿ ವಸತಿ ಹಕ್ಕು ವಂಚಿತ ಹೋರಾಟ ಸಮಿತಿಯ ಕುಮಾರ್ ಸಮತಳ ಮಾತನಾಡಿ, ಶ್ರಮಿಕ ನಿವಾಸಿಗಳ ಮತ ಕೇಳಲು ಬರುವ ಅಭ್ಯರ್ಥಿಗಳು ಅವರಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಲು ಬದ್ಧರಾಗಬೇಕು.ಇದುವರೆಗೆ ಸ್ಲಂ ನಿವಾಸಿಗಳನ್ನು ಕೇವಲ ಮತ ಬ್ಯಾಂಕ್ ಆಗಿ ಪರಿಗಣಿಸಿರುವ ರಾಜಕೀಯ ಪಕ್ಷಗಳು ಈ ಬಾರಿಯೂ ಹಾಗೆಯೇ ಬಂದರೆ ತಿರಸ್ಕರಿಸುತ್ತೇವೆ ಎಂದರು.

ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ ಜಿ.ಪೂರ್ಣಿಮಾ, ಜಿಲ್ಲಾ ಕಾರ್ಯದರ್ಶಿ ಎಂ.ಸಿದ್ದರಾಜು, ಶ್ರಮಿಕ ನಿವಾಸಿಗಳ ಒಕ್ಕೂಟದ ಅಧ್ಯಕ್ಷ ಪ್ರಕಾಶ್, ನಗರಕೆರೆ ಜಗದೀಶ್ ಮತ್ತಿತರರು ಮಾತನಾಡಿದರು. ಕರ್ನಾಟಕ ಜನಶಕ್ತಿಯ ಶಿಲ್ಪ, ಸೌಮ್ಯ,ವೈದುನ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!