ಮದ್ದೂರು ತಾಲ್ಲೂಕಿನ ಕೆ.ಎಂ.ದೊಡ್ಡಿಯ ಕೇಂಬ್ರಿಡ್ಜ್ ಶಾಲೆಯಲ್ಲಿ ಗುರು ಪೂರ್ಣಿಮೆ ಅಂಗವಾಗಿ ಮಕ್ಕಳಿಗೆ ಅಕ್ಷರಾಭ್ಯಾಸ ಹಾಗೂ ಶಾರದ ಪೂಜಾ ಕಾರ್ಯಕ್ರಮ ಜರುಗಿತು.
200 ಕ್ಕೂ ಹೆಚ್ಚು ಮಕ್ಕಳು ಪೋಷಕರ ಜೊತೆಗೂಡಿ ಅಕ್ಷರಾಭ್ಯಾಸ ಮಾಡಿದರು. ಪೋಷಕರು ಕೂಡ ಗುರುಕುಲ ಪದ್ದತಿಯ ಅಕ್ಷರಾಭ್ಯಾಸ ಮಾಡಿಸುವ ಕಾರ್ಯಕ್ರಮದಿಂದ ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೇಂಬ್ರಿಡ್ಜ್ ಶಾಲೆಯ ಮುಖ್ಯಸ್ಥೆ ನಾಗರತ್ನ ಬಲ್ಲೇಗೌಡ ಮಾತನಾಡಿ, ಋಷಿಮುನಿಗಳ ಕಾಲದಲ್ಲಿ ಮರಳಿನ ಮೇಲೆ ಅಕ್ಷರಾಭ್ಯಾಸ ಮಾಡಿಸಿ ಸಮಾಜದ ಸತ್ಪ್ರಜೆಗಳನ್ನಾಗಿ ರೂಪಿಸುತ್ತಿದ್ದರು. ಅದೇ ಮಾದರಿಯಲ್ಲಿ ಮಕ್ಕಳಿಗೆ ಸಂಸ್ಕಾರ, ಮೌಲ್ಯಗಳನ್ನು ಕಲಿಸಿ ಸನ್ಮಾರ್ಗದತ್ತ ನಡೆಯುವಂತೆ ಪ್ರೇರೇಪಿಸುವ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡುವುದು ಶಿಕ್ಷಕರ ಮಹತ್ತರ ಜವಾಬ್ದಾರಿಯಾಗಿದೆ, ವಿದ್ಯಾರ್ಥಿ ದಿಸೆಯಲ್ಲಿಯೇ ಮೌಲ್ಯಗಳನ್ನು ಮೈಗೂಡಿಸಿಕೊಂಡು ದೇಶದ ಭದ್ರ ಬುನಾದಿಗೆ ಹಗಲಿರುಳು ಶ್ರಮಿಸಬೇಕೆಂದು ತಿಳಿಸಿದರು.
ಶಾಲೆಯ ಸಂಸ್ಥಾಪಕ ಅಧ್ಯಕ್ಷ ಎ.ಟಿ.ಬಲ್ಲೇಗೌಡ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲವಾಗಲೆಂಬ ಮತ್ತು ಗುಣಮಟ್ಟದ ಶಿಕ್ಷಣ ಪಡೆಯಲೆಂಬ ಸದುದ್ದೇಶದಿಂದ ಸಂಸ್ಥೆ ವತಿಯಿಂದ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು ವಿದ್ಯಾರ್ಥಿಗಳು ಪ್ರಯೋಜನ ಪಡೆಯಬೇಕು. ಶಿಕ್ಷಕರು ವಿದ್ಯಾರ್ಥಿಗಳನ್ನು ಸರಿದಾರಿಗೆ ತಂದು ಸತ್ಪ್ರಜೆಗಳನ್ನಾಗಿ ರೂಪಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕಿನ ಶಿಕ್ಷಣ ಸಂಯೋಜಕರುಗಳಾದ ಸುಭ್ರಮಣ್ಯ, ಲೋಕೇಶ್, ಮಹೇಶ್, ನಟೇಶ್, ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದೇ ವೇಳೆ ಅಣ್ಣೂರು ಸಿ ಆರ್ ಪಿ ನಂದೀಶ್, ಜಿ.ಪಂ ಮಾಜಿ ಸದಸ್ಯೆ ಸುಕನ್ಯ ಹನುಮಂತೇಗೌಡ, ದಲಿತ ಮುಖಂಡ ಸಿ.ಎ.ಕೆರೆ ಮೂರ್ತಿ, ರಾಮಚಂದ್ರ, ಶಾಲೆಯ ಮುಖ್ಯ ಶಿಕ್ಷಕಿ ನಯನ, ಶಿಕ್ಷಕರಾದ ನವೀನ್ ಕುಮಾರ್, ವಿಶ್ವ, ಕರುಣಾಮೂರ್ತಿ, ನಟರಾಜು, ದಿನೇಶ್, ಗೌರಮ್ಮ, ತಾರಾ, ನಿರ್ಮಲ, ಪುಷ್ಪ, ರಾಣಿ, ದಿವ್ಯ, ನೇತ್ರಾವತಿ, ನಿರ್ಮಲ, ಸಂಜೀವ್ ಆಶಾ, ಗೌತಮಿ ಸೇರಿದಂತೆ ಹಲವರಿದ್ದರು.




