Thursday, September 19, 2024

ಪ್ರಾಯೋಗಿಕ ಆವೃತ್ತಿ

ಡಾ.ಎಚ್.ಡಿ. ಚೌಡಯ್ಯ ದಿಟ್ಟ ಹೋರಾಟಗಾರ – ಎಚ್.ಬಿ.ರಾಮು

ಡಾ. ಎಚ್.ಡಿ. ಚೌಡಯ್ಯ ಅವರು ಜಿಲ್ಲೆಯ ಹಲವಾರು ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಸೆಳೆದು ಅವುಗಳ ನಿರ್ಮೂಲನೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದ ದಿಟ್ಟ ಹೋರಾಟಗಾರ ಎಂದು ಮಾಜಿ ಶಾಸಕ ಎಚ್.ಬಿ. ರಾಮು ಬಣ್ಣಿಸಿದರು.

ಮಂಡ್ಯ ತಾಲೂಕಿನ ಹೊಳಲು ಗ್ರಾಮದಲ್ಲಿ ಎಚ್.ಡಿ. ಚೌಡಯ್ಯ ಅವರ 96ನೇ ಹುಟ್ಟುಹಬ್ಬ ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಎಂ.ಎನ್. ಆಶಾಲತ ಅವರ ಅಭಿನಂದನಾ ಸಮಾರಂಭದಲ್ಲಿ ಡಾ. ಎಚ್‌ಡಿಸಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಎಚ್.ಡಿ. ಚೌಡಯ್ಯ ಅವರು ಪಿಇಎಸ್ ಶಿಕ್ಷಣ ಸಂಸ್ಥೆಗಳ ಉನ್ನತಿ ಸೇರಿದಂತೆ ಗ್ರಾಮದ ಹಲವಾರು ಸಂಘ ಸಂಸ್ಥೆಗಳ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಇಂತಹ ಮಹನೀಯರು ನಮ್ಮ ಗ್ರಾಮದಲ್ಲಿ ಹುಟ್ಟಿ ಬೆಳೆದಿದ್ದು ನಮ್ಮ ಪಣ್ಯ ಎಂದು ಹೇಳಿದರು.

ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಸುಮಾರು 14 ವರ್ಷಗಳ ಕಾಲ ಸೇವೆ ಸಲ್ಲಿಸಿ ಜನಮನ್ನಣೆ ಗಳಿಸಿದ್ದ ಡಾ. ಎಂ.ಎನ್. ಆಶಾಲತ ಅವರನ್ನು ಗೌರವಿಸುತ್ತಿರುವುದು ಸಹ ಸಂತಸ ತಂದಿದೆ ಎಂದ ಅವರು, ಗ್ರಾಮೀಣ ಜನರಿಗೆ ಆರೋಗ್ಯ ಸೇವೆ ಒದಗಿಸುವುದು ಸಹ ಒಂದು ಸಾಧನೆ ಎಂದು ಬಣ್ಣಿಸಿದರು.

ಡಾ. ಆಶಾಲತ ಅವರನ್ನು ಸನ್ಮಾನಿಸಿದ ಪ್ರತಿಮೆಗಳ ನಿರ್ವಹಣಾ ಸಮಿತಿ ಅಧ್ಯಕ್ಷ ಎಚ್.ಎಲ್. ಶಿವಣ್ಣ ಮಾತನಾಡಿ, ಎಚ್.ಡಿ. ಚೌಡಯ್ಯ ಅವರ 96ನೇ ಜನ್ಮದಿನದ ಅಂಗವಾಗಿ ಈ ಕರ‍್ಯಕ್ರಮ ಹಮ್ಮಿಕೊಂಡಿದ್ದು, ಅವರ ಹೆಸರು ಶಾಶ್ವತವಾಗಿ ಜನಮನದಲ್ಲಿ ಉಳಿಯಬೇಕಾದರೆ ಇಂತಹ ಕಾರ‍್ಯಕ್ರಮಗಳನ್ನು ಮುನ್ನಡೆಸುವುದು ಅಗತ್ಯ ಎಂದರು.

ಹೊಳಲು ಗ್ರಾಮದಲ್ಲಿ ಸೇವೆ ಸಲ್ಲಿಸಿ ಬೇರೆಡೆಗೆ ವರ್ಗಾವಣೆಯಾದರೂ ನಮ್ಮ ಗ್ರಾಮದ ಜನರನ್ನು ಪ್ರೀತಿಯಿಂದ ನೋಡಿಕೊಳ್ಳುವುದು ಅವರ ದೊಡ್ಡ ಗುಣ. ಆದ್ದರಿಂದಲೇ ಅವರು ನಮ್ಮ ಗ್ರಾಮದಲ್ಲಿ ೧೪ ವರ್ಷಗಳ ಕಾಲ ಸೇವೆ ಸಲ್ಲಿಸಲು ಸಾಧ್ಯವಾಯಿತು ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿದ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಆಶಾಲತಾ ಮಾತನಾಡಿ, ನಾನು ಕೆಲಸಕ್ಕೆ ಸೇರಿದ ಸಂದರ್ಭದಲ್ಲಿ ಚೌಡಯ್ಯ ಅವರನ್ನು ಭೇಟಿ ಮಾಡಿದ್ದೆ. ಸರ್ಕಾರಿ ಕೆಲಸ ಎಂದರೆ ದೇವರ ಕೆಲಸ ಎಂದು ಭಾವಿಸಿ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗಬೇಕು. ಜನರ ಸೇವೆ ಮಾಡಬೇಕು ಎಂದು ಕಿವಿಮಾತು ಹೇಳಿದ್ದರು. ಅವರ ಮಾತಿನಂತೆ ನಾನು ಈ ಗ್ರಾಮದಲ್ಲಿ 14 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ ಎಂದು ಹೇಳಿದರು.

ಪಾಂಡವಪುರ, ಮದ್ದೂರು ಹಾಗೂ ಮಂಡ್ಯದಲ್ಲಿ ಕೆಲಸ ಮಾಡಿದ್ದೇನೆ, ನನ್ನ ಸೇವೆ ಬಗ್ಗೆ ನನಗೆ ತೃಪ್ತಿ ಇದೆ. ಜನರ ಪ್ರೀತಿ ವಿಶ್ವಾಸ ನಿರಂತರವಾಗಿದೆ. ಇದು ನನಗೆ ಸಂತಸ ತಂದಿದೆ ಎಂದು ತಿಳಿಸಿದರು.

ಎಚ್.ಡಿ. ಚೌಡಯ್ಯ ಪ್ರತಿಮೆ ನಿರ್ಮಾಣ ಸಮಿತಿ ಉಪಾಧ್ಯಕ್ಷ ಎಚ್.ಸಿ. ಹರಿಪ್ರಸಾದ್, ಎಚ್.ಎಂ. ವಿಜಯಕುಮಾರ್, ಸದಸ್ಯರಾದ ಎಚ್.ಸಿ. ನಿಂಗರಾಜು, ಎಚ್.ಸಿ. ಮಾದಯ್ಯ, ಎಚ್.ಡಿ. ರವಿ, ಎಚ್.ಎಂ. ನಂದೀಶ್, ಎಚ್.ವೈ. ತಾಂಡವೇಶ, ಎಚ್.ಎಂ. ನಾರಾಯಣ, ಎಚ್.ಟಿ. ರಾಮು, ಎಚ್.ಎಸ್. ಆನಂದ್, ಶ್ರೀಧರ್, ಮಂಜು, ಬೋರೇಗೌಡ, ಅನುಪಮಾ, ಮೋಹನ್‌ಕುಮಾರ್ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!