Thursday, September 19, 2024

ಪ್ರಾಯೋಗಿಕ ಆವೃತ್ತಿ

ನಾಗಮಂಗಲ ಗಲಭೆ | ಬದರಿಕೊಪ್ಪಲು ಗ್ರಾಮಕ್ಕೆ ಹೆಚ್.ಡಿ.ಕುಮಾರಸ್ವಾಮಿ ಭೇಟಿ ಸಾಂತ್ವನ

ನಾಗಮಂಗಲ ತಾಲ್ಲೂಕಿನ ಕೋಮು ಗಲಭೆ ಪ್ರಕರಣದಲ್ಲಿ ಬದರಿಕೊಪ್ಪಲು ಗ್ರಾಮಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗುರುವಾರ ಭೇಟಿ ನೀಡಿ ನೊಂದ ಕುಟುಂಬಗಳಿಗೆ ಸಾಂತ್ವನ ಹೇಳಿ ಪರಿಹಾರ ನೀಡಿದರು. ಅಲ್ಲದೇ ನೊಂದವರ ಪರವಾಗಿ ನಿಲ್ಲವುದಾಗಿ ಭರವಸೆ ನೀಡಿದರು.

ಘಟನೆಯಲ್ಲಿ ಜೈಲುಪಾಲರಿಗುವವರನ್ನು ಇನ್ನೊಂದು ವಾರದಲ್ಲಿ ಕಾನೂನಾತ್ಮಕವಾಗಿ ಹೊರತರವುದಾಗಿ ನೊಂದ ಕುಟುಂಬದ ತಂದೆ ತಾಯಿಯಂದರಿಗೆ ಭರವಸೆ ನೀಡಿದರು.

ಗಲಭೆ ಹಿನ್ನೆಲೆಯಲಲ್ಇ ಕಣ್ಮರೆಯಾಗಿರುವವರನ್ನು ಬಂಧಿಸದಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ, ಅವರು ನೆಮ್ಮದಿಯ ಜೀವನ ನೆಡೆಸಲು ಅವಕಾಶ ಮಾಡಿಕೊಡಿ ಎಂದು ನಾನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ತೀರ್ಮಾನ ಮಾಡುವುದಾಗಿ ಹೇಳಿದರು.

ನಾಗಮಂಗಲ ಗಲಭೆ ಪ್ರಕರಣಕ್ಕೆ 2ನೇ ಬಾರಿ ಭೇಟಿ ನೀಡಿದ ಅವರು, ನಾನು ಮಂಡ್ಯ ಜಿಲ್ಲೆಯ ಸಂಸದನಾಗಿರುವುದು ಜನತೆಯ ಕಷ್ಟ ಸುಖಗಳನ್ನ ಆಲಿಸಿವುದಕ್ಕೆ, ಇದನ್ನ ಜಿಲ್ಲಾ ಉಸ್ತುವಾರಿ ಸಚಿವರು ಅರ್ಥ ಮಾಡಿಕೊಳ್ಳಬೇಕೆಂದು ಪರೋಕ್ಷವಾಗಿ ಚಲುವರಾಯಸ್ವಾಮಿ ಅವರಿಗೆ ಚಾಟಿ ಬೀಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಸಾ.ರಾ.ಮಹೇಶ್, ಮಂಜುನಾಥ್, ಮಾಜಿ ಶಾಸಕ ಸುರೇಶ್ ಗೌಡ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!