Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಪಿಯುಸಿಯಲ್ಲಿ ಶೇ.87.06 ಅಂಕಗಳನ್ನು ಪಡೆದ ವಿಕಲಚೇತನ ವಿದ್ಯಾರ್ಥಿ !

2023-24 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಮಂಡ್ಯದ ಸೈಂಟ್ ಜಾನ್ಸ್ ಕಾಂಪೋಸಿಟ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿಕಲಚೇತನ ವಿದ್ಯಾರ್ಥಿ ದೈವಿಕ್ ಎಸ್ ಶೇ.87.06ರಷ್ಟು ಅಂಕಗಳನ್ನು ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.

ಮೂಲತಃ ಡಿಶೂನ್ ಮಸ್ಕುಲರ್ ಡಿಸ್ಪೋಫಿ (Dyshun muscular dystrophy) ಎಂಬ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದ ಈ ವಿದ್ಯಾರ್ಥಿ ಕಳೆದ ಜನವರಿ ಹಾಗೂ ಫೆಬ್ರವರಿ ಮಾಹೆಯಲ್ಲಿ ತೀವ್ರ ಉಸಿರಾಟದ ತೊಂದರೆಗೆ ಒಳಗಾಗಿ ಸಾವು ಬದುಕಿನ ನಡುವೆ ಹೋರಾಡಿ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡಿದ್ದರು.

ದೈವಿಕ್ ಗಳಿಸಿದ ಅಂಕಗಳು

ಹಿಂದಿ=90
ಇಂಗ್ಲಿಷ್=87
ಅರ್ಥಶಾಸ್ತ್ರ=85
ವ್ಯವಹಾರ ಅಧ್ಯಯನ=86
ಲೆಕ್ಕಶಾಸ್ತ್ರ=87
ಗಣಕ ವಿಜ್ಞಾನ=91
ಒಟ್ಟು=526

ಇನ್ನು ಈ ಭೂಮಿ ಮೇಲೆ ತಾನು ಕೆಲವೇ ಕೆಲವು ದಿನಗಳ ಅತಿಥಿ ಎಂಬ ಅರಿವಿದ್ದರೂ ಸಹ ಪರೀಕ್ಷೆ ಬರೆದೆ ಬರೆಯಬೇಕೆಂಬ ಹಠ ಛಲದಿಂದ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಶೇಕಡ 87.06 ಫಲಿತಾಂಶದೊಂದಿಗೆ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಸಿದ ಅವರು,  “ನಾನು ಇನ್ನೂ ಹೆಚ್ಚು ಅಂಕಗಳಿಸಿ ಸೈಂಟ್ ಜಾನ್ಸ್ ಕಾಲೇಜಿಗೆ ಹಾಗೂ ಮಂಡ್ಯ ಜಿಲ್ಲೆಗೆ ಹೆಮ್ಮೆ ತರಬೇಕೆಂದುಕೊಂಡಿದ್ದೆ, ಆದರೆ ನನ್ನ ದೈಹಿಕ ಅಸಮರ್ಥತೆಯಿಂದಾಗಿ ಸಾಧ್ಯವಾಗಲಿಲ್ಲ. ಇಷ್ಟು ಅಂಕಗಳಿಸಲು ಎಲ್ಲಾ ರೀತಿಯಲ್ಲೂ ನನ್ನನ್ನು ಪ್ರೋತ್ಸಾಹಿಸಿದ ನನ್ನ ಪೋಷಕರು, ಆಡಳಿತಾಧಿಕಾರಿಯಾದ ಫಾದರ್ ಲೂರ್ಥ ಪ್ರಸಾದ್, ಶಿಕ್ಷಕರು ಹಾಗೂ ನನ್ನೆಲ್ಲ ಹಿತೈಷಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!